ನನಗೆ ಇನ್ನೂ ನೆನಪಿದೆ
ಅದೊಂದು ವಿಸ್ಮಯದ ಕ್ಷಣ!
ಸುಮ್ಮನೆ ತಲೆ ಎತ್ತಿ ಶೂನ್ಯದತ್ತ ದೃಷ್ಠಿಸಿದೆ
ಕಳೆದ ದಿನಗಳ ಅದ್ಭುತ ದೃಶ್ಯಕಾವ್ಯವೊಂದು
ಕಣ್ಣೆದುರು ಹಾದು ಹೋಯಿತು
ಅದು ಸುಂದರ ಮತ್ತು ಅಪ್ಯಾಯತೆಯ
ಒಟ್ಟಾರ್ಥದಂತಿತ್ತು.
ನನ್ನ ಅಸಹಾಯಕತೆ ಮತ್ತು ಸಿಟ್ಟನ್ನು ತಣಿಸುವಂತೆ,ಲೌಕಿಕ ಬಯಕೆಗಳಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದೆ!
ಮನಸ್ಸಿಗೆ ಹಿತವೆನಿಸುವ ನಿನ್ನ ಮಾತುಗಳು
ಮರೆತು ಬಹಳ ದಿನಗಳಾಗಿದ್ದವು
ಹಾಗೆ ನಿನ್ನ ಆಕರ್ಷಕ ವ್ಯಕ್ತಿತ್ವವು ನನ್ನ
ಕನಸುಗಳನ್ನು ಕಾಡುವುದನ್ನು ಕೂಡ!
ಕಾಲ ಸರಿಯಿತು, ಸಣ್ಣದೊಂದು ಬಂಡಾಯದ ಬಿರುಗಾಳಿಯ ಸ್ಪೋಟ
ನಿನ್ನೆಡೆಗಿನ ಒಂದು ಕಾಲದಲ್ಲಿ ನನ್ನದೆಂದುಕೊಂಡಿದ್ದ ಬಾವನೆಗಳನ್ನ ಛಿದ್ರಗೊಳಿಸಿತ್ತು
ನಿನ್ನ ಸವಿಮಾತುಗಳನ್ನು, ನಿನ್ನ ವ್ಯಕ್ತಿತ್ವದ ವಿಶೇಷತೆಗಳನ್ನು ಸಹ ಮರೆತುಹೋಗಿದ್ದೆ.
ಅವು ನನ್ನ ಬದುಕಿನ ಒಂಟಿತನದ ಕರಾಳ ದಿನಗಳು
ಆಗಾಗ ಸಂಜೆಗೆಂಪಿನ ಆಕಾಶವನ್ನು ದಿಟ್ಟಿಸುತ್ತಿದ್ದೆ
ಯಾವ ಸಿದ್ದಾಂತಗಳು, ಯಾವ ಮಾತು - ಕೃತಿಗಳು ನನ್ನಲ್ಲಿ ಜೀವನೋತ್ಸಾಹ ಉಕ್ಕಿಸುತ್ತಿರಲಿಲ್ಲ
ನನ್ನನ್ನು ಪ್ರೀತಿಸುವರು, ನನ್ನವರು ಯಾರು ಇಲ್ಲದಂತಾಗಿತ್ತು
ಆಗ ಬಂತೊಂದು ಅಪೂವ೯ ನವ-ಚೈತನ್ಯದ ಕ್ಷಣ
ಮೇಲೆ ನೋಡಿದೆ, ಮತ್ತೆ ಅಲ್ಲಿ ನೀನು ?
ಅದೊಂದು ಅದ್ಭುತ ದೃಶ್ಯ ಕಾವ್ಯ
ಅಪರೂಪದ ಪ್ರೀತಿ ಮತ್ತು ಆತ್ಮೀಯತೆಯು ಸಾರಾಂಶದಂತಿತ್ತು
A translation
ಅದೋ ಅಲ್ಲಿ , ಅರಳಿದೆ ನೋಡು
ಕೃಷ್ಣವರ್ಣದ ,ಸುಹಾಸದ,
ಸುವಾಸದ ಬೆಟ್ಟದ ಹೂ.
ಬೀಸುವ ತಂಗಾಳಿಗೆ ತಲೆದೂಗುವ,
ದುಂಬಿಗಳ ಕೈ ಬೀಸಿ ಕರೆಯುವ,
ಮನಮುಟ್ಟುವ ಬೆಟ್ಟದ ಹೂ.
ಹಾರುವ ಮೋಡಗಳ ಕೈಬೀಸಿ ಕರೆಯುವ,
ಇಂದ್ರಚಾಪಕೆ ಕೊರಳನು ಚಾಚಿ,
ನಲಿನಲಿಯುವ ಬೆಟ್ಟದ ಹೂ.
ಮಾಲಿನ್ಯದ ಎಣೆ ಇಲ್ಲದೆ,
ಮಾನವನ ಹಂಗಿಲ್ಲದೆ,
ನಸುಸಂಜೆಗೆ ಕಾಯ್ವ ಬೆಟ್ಟದ ಹೂ
"ಅವಳ ನೋಡುವುದೇ.. ಒಂದು_ಚೆಂದ !
ಅವಳು ಜೊತೆಯಾಗಿದ್ರೆ.. ಏನೋ ಆನಂದ !
ಅವಳ ಬೈಗುಳವು ಕೂಡ..
ಮುದ್ದಾಗೆ ಇರುತ್ತೆ !
ಅವಳು ನನ್ನ ಮೆಚ್ಚಿಕೊಂಡರಂತು..
ಜಗವೆ_ಗೆದ್ದಾಗ್ ಅನ್ಸುತ್ತೆ !
ಅವಳು.. ಹೇಗೆ ಇರಲಿ !
ನನ್ನ.. ಏನೇ ಅನ್ನಲಿ !
ಅದಕ್ಕಿಂತ ಹೆಚ್ಚಾಗಿ.. ಅವಳು ನನ್ನ ಪ್ರೀತಿಸಲಿ !
ಅವಳ ಪ್ರೀತಿ ಹೊರೆತು.. ಬೇರೇನು ಬೇಕಿಲ್ಲ !
ಅವಳ ಹೊರೆತು ಏನಿದ್ರು.. ನನಗೆ ಲೆಕ್ಕ ಇಲ್ಲ !!"
ಎಮ್.ಎಸ್.ಭೋವಿ...✍️
ಬಾಲ್ಯದ ಜೀವನ ಅದೆಷ್ಟು ಸೊಗಸು,
ಕ್ರೋದ ಅಸೂಯೆ ಕಿಚ್ಚು ಇಲ್ಲದ ಮನಸ್ಸು,
ಕನಸುಗಳಿಗೆ ಇರಲಿಲ್ಲ ಎಲ್ಲೆ,
ಓ ಗಗನವೇ ಇದು ನೀ ಬಲ್ಲೆ,
ನಮಗಿರಲಿಲ್ಲ ಇತರರ ಹಂಗು,
ತುಂಬಿಕೊಂಡಿತ್ತು ಜೀವನದ ರಂಗು,
ಇದ್ದಾಗ ತಾಯಿಯ ಮಡಿಲಲ್ಲಿ,
ಬೇಸರವಿತ್ತು ನಮಗೆಲ್ಲಿ,
ಇದ್ದರೆ ಜೊತೆಯಲ್ಲಿ ಗೆಳೆಯರ ಬಳಗ,
ಎಲ್ಲವೂ ಮರೆಯುತ್ತಿದ್ದೆವು ನಾವಾಗ,
ನಮ್ಮ ಮನಸ್ಸಿತ್ತು ಸ್ವತಂತ್ರ,
ಆದೆಲ್ಲ ಆಗಿತ್ತು ನಮ್ಮ ಖುಷಿಗೆ ಮೂಲಮಂತ್ರ,
ಯಾಕೆ ಮರೆತವು ನಾವು ಆ ಕಲೆಯ?
ನೆನಪಾಗದೆ ನಮಗೆ ಆ ಬಾಲ್ಯ?
ಮರಳಲು ಇಚ್ಛಿಸಿದೆ ಮನ ಆ ಕಾಲಕೆ?
ಮತ್ತೆ ಒಡೆಯಲು ಸಾಧ್ಯವಿಲ್ಲವೇ
ಆ ಬಾಲ್ಯ ಮನದ ಮೊಳಕೆ?
ಕಳೆದ ಆ ದಿನಗಳ
ಕಥೆಯ ರೂಪದಲ್ಲಿ ಕರೆತರುವೆ
ಕಿವಿಗೊಟ್ಟು ಕೇಳು
ಮಿಡಿಯುವ ಮನಕೆ
ಮಿನುಗುವ ನಗು ತರುವೆ
ಮನಬಿಚ್ಚಿ ಕೂಗು
ಕಣ್ಮರೆಯಾಗಿಲ್ಲ ನಾನು
ಕಣ್ಮರೆಯಾಗುವವರೆಗೂ
ನಿನ್ನನ್ನೇ ನೋಡುತಿರುವೆ
ಹಿಂತಿರುಗಿ ನೋಡು
ಸಾಕಾದ ಜೀವನಕೆ
ಸಾಕಷ್ಟು ಕ್ಷಣಗಳ ಮೀಸಲಿಡುವೆ
ಬಿಕ್ಕಿ ಅತ್ತವಳೆ
ತುಟಿ ಮೇಲೆ
ನಗುವ ಬಿತ್ತಲು
ಮರೆಯದೆ ಬರುವೆ
ಎಮ್.ಎಸ್.ಭೋವಿ...✍️