ಒಡಲ ನೋವಿಗೆ ಸ೦ತೈಕೆಯೇ ಇರದೆ
ನಾ ಸೋತು ಹೋಗುವ ಮುನ್ನ..
ಕನಸು ಕಲ್ಪನೆಗಳ ನಡುವೆ
ನಾ ಬೆಂದು ಹೋಗುವ ಮುನ್ನ..
ಸಾವಿರಾರು ಭಗ್ನ ಪ್ರೇಮಿಗಳಲ್ಲಿ
ನಾನೋಬ್ಬನಾಗುವ ಮುನ್ನ..
ನೀನಿಲ್ಲದೆ ಬರುವ ನಾಳೆಗಳ ನೆನೆದು
ಅತ್ತು ಅತ್ತು ನಿದ್ದೆ ಬರುವ ಮುನ್ನ
ನೀನೊಮ್ಮೆ ಬರಬಾರದೇ ?
ನನ್ನ ನಿನ್ನ ಸ್ನೇಹ
ಅದು ಪ್ರೇಮ ಮೋಹವಲ್ಲ
ಅದು ಕಾಮ ದಾಹವಲ್ಲ
ನಿನ್ನ ನಾ ಕಂಡೆ
ನನ್ನ ನೀ ಕಂಡೆ
ಕಾಣುತ್ತಾ ಏಕೆ ಈ ಮನಸ್ಸಿನಲ್ಲಿ ತಳಮಳ
ನಿನ್ನ ಧ್ಯೇಯ ಒಂದೆ ನನ್ನ ಧ್ಯೇಯ ಒಂದೆ
ಹೀಗಿರಲು ಏಕೆ ಈ ಮನಸ್ಸಿನಲ್ಲಿ ತಳಮಳ
ಜಗತ್ತಿನ ಮೂಲೆಮೂಲೆಯಲ್ಲೂ ಕೇಳುತಿಹುದು
ಈ ಬಗೆಯ ಆರ್ಥನಾಧ
ಓ ಮನಸೇ.........
ನೀ ಏಕೆ ನನ್ನ ಕಲಕುವೆ
ಎಲ್ಲ ಕಡೆ ಗೆಳೆತನವೆಂಬ ಹೂ ಅರಳಿ ನಿಲ್ಲಲಿ.
ಈ ಬಗೆಯ ವಿಷಯಗಳೆಲ್ಲಾ ಅಳಿಯಲಿ ಎನ್ನುವಾಗ
ಓ ಮನಸೇ.........
ನೀ ಏಕೆ ನನ್ನ ಕಲಕುವೆ
ಪ್ರಿಯ ಗೆಳತಿ ನೀ ಜನ್ಮ ತೆಳೆದ ಕಾರಣವೇ ಬೇರೆ
ನಾ ಜನ್ಮ ತೆಳೆದ ಕಾರಣವೇ ಬೇರೆ
ನಿನ್ನ ನನ್ನ ಆಕಾಂಕ್ಷೆ ಬೇರೆಬೇರೆಯೇ
ಅದು ತೀರಿಬರಲಿ
ನಾನು ನಿನ್ನ ಉತ್ತಮ ಗೆಳೆಯನೆಂದು ಅರಿಯಲಿ
ಇದನ್ನರಿತ ನನ್ನ ಮನವೇ.........
ನೀ ಏಕೆ ಅವಳ ಮನವ ಕಲಕುವೇ...??
ಇದು ನ್ಯಾಯವೇ...??
ಇದು ಧರ್ಮವೇ...??
ಇದು ನೀತಿಯೇ...??
ನೀ ಏಕೆ ಅವಳ ಮನವ ಕಲಕುವೇ...??
ಇದೆಲ್ಲಾ ನಿನ್ನ ನಿಶ್ಚಯವಾದರೆ ನನ್ನ ಕ್ಷಮಿಸು ನನ್ನ ಮನವೇ..........
~ಪ್ರವೀpk
ಸಾವಿರಾರು ಕನಸುಗಳು ನಿನ್ನೊಂದಿಗೆ
ಜೊತೆಗೂಡಿ ಸಾಗಿದೆ
ಈ ನನ್ನ ಪಯಣ,
ಮನಸ್ಸಿನ ವೇದನೆಯನ್ನು
ನಿನಗೆ ಹೇಗೆ ತಿಳಿಸಲಿ ?
ಹೃದಯವು ಹಳೆಯ ನೆನಪುಗಳನ್ನೇ ಕಾಡುತ್ತಿದೆ,
ಅವಳನ್ನು ಮರೆತು ನಿನ್ನೊಂದಿಗೆ
ನಾ ಹೊಸ ಜೀವನ ಶುರು ಮಾಡಬೇಕಾಗಿದೆ.
ದಯಮಾಡಿ ಈ ನನ್ನ ಪ್ರೇಮದ ಪರಿಯನ್ನು
ಅರಿತು ಗೆಲುವಿನ ದಡ ಸೇರಿಸ್ಸು.