ಬುದ್ಧಿಗೆ ನೂರು ದಾರಿ
ಹೃದಯಕ್ಕೆ ಒಂದೇ ದಾರಿ
ಅದವೇ ಪ್ರೀತಿ
ಮುಳ್ಳಿಲ್ಲದೆ ಗುಲಾಬಿ
ಬೆಳೆದವರು ಇಲ್ಲ
ನೋವಿಲ್ಲದೆ
ಸಾಧಿಸಿದವನು ಇಲ್ಲ...
ಸಾಧನೆಗಳನ್ನು ಓದುವುಕ್ಕಿಂತ
ಸಾಧಿಸುವವನು ನೀನಾಗು
ಆಗ ಕೀತಿ೯ ಎನ್ನುವುದು
ನಿನ್ನನ್ನು ಹುಡುಕಿಕೊಂಡು
ಬರುತ್ತದೆ....
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,
ಪುಷ್ಪ ಬಾಡದಿರಲಿ.....!!!
ಹಣ್ಣಾಗುತ್ತಿದೆ ಒಡಲು
ನಿನ್ನಾ ಮಿಲನದ
ಆಶ್ರಯ ಯಾವಾಗ ಕೊಡುತ್ತಿಯಾ?
ನನ್ನ ಉಸಿರು ನಿಲ್ಲುವ
ಮೊದಲು ಬಂದು
ಈ ಹುಚ್ಚು ಮನದ
ಬಯಕೆ ತೀರಿಸುವೆಯಾ?
ಸಮಾದಿಯ ಮೇಲೆ
ಹೂಗಳನ್ನಿಡುತ್ತಿರುವೆ
ಕಣ್ಣೀರು ಸುರಿಸುತ್ತಿರುವೆ
ಓ ದೇವಾ ಜೀವಾ
ನೀಡು ಒಂದಿಷ್ಟು
ಎದ್ದು ಬರಲಿ ಜೊತೆ
ಕರೆದೊಯ್ಯುವೆ
ನಾ ಪ್ರೇಮದ ಅರಮನೆಗೆ
ಓ ದೇವಾ ನಿನಗೂ ಬೇಸರವಾಯಿತೇ
ನನ್ನ ಈ ಬಯಕೆ....
ಏನ್ ಚಂದ ಕಾಣಿಸ್ತಾಳೆ ನಮ್ಮ ಕೋಡೇಸ್ ರಮ್ಮವ್ವ
ನೀನು ನಾನು ಸೇರಿದರೆ ಎಂಥ ಮಜವವ್ವ
ಎಷ್ಟೇ ದೂರದಾಗ ಇದ್ರೂ ನಿನ್ನ ಹುಡಿಕ್ಕೊಂಡು ಬರ್ತಿವಲ್ಲ !
ಅಷ್ಟೆ ಚಂದಾಗಿ ಇರೊ ನಿನ್ನ ಕಾಪಾಡಿಕೊಂಡು ಹೋಗ್ತಿವಲ್ಲ !
ನೀನೆ ಅಂದ ನೀನೆ ಚಂದ ಕೋಡೇಸ್ ರಮ್ಮವ್ವ !
ನಿನ್ನ ಸರಿಸಮ ನಮ್ಮ ಮಂದಿ ಇಲ್ಲವ್ವ !!
ಕಷ್ಟದಾಯಕವಾಗಿರುತ್ತದೆ ಇದ್ರು ಕುಣಿಸ್ತಿಯಾ ಕತ್ತಲಲ್ಲಾದ್ರು ಕಾಣಿಸ್ತೀಯಾ!
ಕೊಚ್ಚೆ ಮೋರಿಲಿ ನೂಕಿ ನನ್ನ ನೋಡ್ದೋರನ್ನೆಲ್ಲ ನಗಿಸ್ತೀಯಾ !
ನೂಕದೆ ಅಂಥ ಕೋಪ ಇಲ್ಲ ಕೋಡೇಸ್ ರಮ್ಮವ್ವ. !
ನಿನ್ನ ನಂಬಿ ಮುಂದೆ ನಡೆವೆ ದಾರಿ ತೋರವ್ವ !!
ನಮಗೆ ರಜಾವಿಲ್ಲದ ದಿನ..
ವ್ಯಾಪಾರಕ್ಕೆ ಬಿಡುವಿಲ್ಲದ ದಿನ..
ಸ್ವಂತ ಕೆಲಸಗಳಿಗೆ ರಜಾ ದಿನ..
ಹಳ್ಳಿಯಿಂದ ಬರುವರಿಗೆ ಮುಖ್ಯದಿನ...
ವೈದ್ಯ ಭೇಟಿ, ಆಹಾರ ಧಾನ್ಯ,
ತರಕಾರಿ ಕೊಳ್ಳಲು ಮೀಸಲು ದಿನ.
ನೌಕರರಿಗೆ ರಜಾ,
ವ್ಯಾಪಾರಿ ಮಿತ್ರರಿಗೆ ಸಜಾ..
ಔಷಧಿ ವರ್ತಕರಿಗೆ ಬಂದ್ ದಿನವೂ
ಬಾಗಿಲು ಹಾಕಿಸುದಿಲ್ಲಾ..!?
----------------------------------------------
ಕೈತುಂಬಾ ದುಡಿಮೆ,
ತಿರುಗಾಟ ಕಡಿಮೆ,
ಅಧಿಕಾರಿಗಳ ಕಾಟವಿಲ್ಲ,
ಮನೆ ಮಡದಿ ಮಕ್ಕಳಿಗೆ
ಉಪಚಾರದ ಖರ್ಚಿಲ್ಲ..!!
----------------------------------------------
ಆದರೂ ಮನಸ್ಸು ತುಡಿಯುತ್ತಿದೆ
ವಾರಕ್ಕೊಮ್ಮೆಯಾದರೂ ವಿಶ್ರಾಂತಿ ಬೇಕು.. ?
ಆದರೆ ಭಾನುವಾರ ಸಂತೆ.
ಬಾಯಿ ಮುಚ್ಚುಕೊಂಡು ನಿಂತೆ.
ಎಲ್ಲಿಲ್ಲದ ನಮ್ಮ ಚಳ್ಳಕೆರೆ ಸಂತೆ.!