ನಿನ್ನೆ ಮೊನ್ನೆಯ ಪ್ರೀತಿಯಲ್ಲ
ಅವಳಿಗಾಗಿಯೇ ಮಾಡಬಾರದ
ಕೆಲ್ಸಗಳನ್ನು ಮಾಡಿದೆ ಕಾಲೇಜಿನಿಂದ ಹಿಡಿದು ಅವಳು ಬಿಟ್ಟೋಗುವವರೆಗೆ
ಅವಳು ಹೇಳಿದ ಕೆಲಸ ಮಾಡಿನಿ
ಅಪ್ಪ ಅವ್ವರನ್ನೇ ಲೆಕ್ಕಿಸದೆ ಅವಳಿಗಾಗಿ ನಾನು ನನಗಾಗಿ ಅವಳು
ಅವಳಿಗೆ ನನ್ನ ಮೇಲೆ ನಂಬಿಕೆ ಬರಲೆಂದು ನನ್ನ ಮುಂಗೈಯಲ್ಲಿ ಚಾಕುವಿನಿಂದ
ಅವಳ ಹೆಸರನ್ನು ಕೆತ್ತಿದ್ದೇನೆ
ಬೆನ್ನ ಮೇಲೆ ಹಚ್ಚೆ ಹಾಕಿಸಿದ್ದೇನೆ. ಅವಳ ಬರುವಿಗಾಗಿ ಹಗಲು ರಾತ್ರಿ ಎನ್ನದೆ ಕಾದು ಕುಳಿತೆ ಆದರೆ ಅವಳು ನನಗಾಗಿ ಕಾದು ಕೂರಲಿಲ್ಲ ಏಕೆದಂದರೆ ಅವಳು ನನಗಾಗಿ ನನ್ನ ಪ್ರೀತಿಗಾಗಿ ಕಾಯಲಿಲ್ಲ ಅವಳು ಕಾದಿದ್ದು ಹಣಕ್ಕಾಗಿಯೇ
ಕಡಲಿನ ತೀರದ ಬಳಿ
ತಿಳಿಯದ ಸಮಯ
ಅಲೆಗಳು ಅಪ್ಪಳಿಸಿ ಬಂದಾಗ
ತಿಳಿಯಲಿಲ್ಲ ಅದುವೇ ನೀನೆಂದು
ಅಂದು ತಿಳಿದಿದ್ದರೆ. ಕಡಲಿನ ತೀರದ ಬಳಿಯ ಮರಳಾಗುತ್ತಿದ್ದೆ. ನನ್ನನ್ನು ಸೋಕಿಹೋಗು ಎಂದು. ಕ್ಷಮಿಸು ನನ್ನ
ಎಂದೂ ಅರಿಯದ ನದಿ ಅಂದು ಅಲೆಗಳು ಅಪ್ಪಳಿಸಿದರು ಸಹ ತಿಳಿಯಲಿಲ್ಲ ಈ ಹುಚ್ಚು ಮನಕ್ಕೆ...
ಅಂದು ಆ ಬೆಳದಿಂಗಳ ಬೆಳಕಿನಲ್ಲಿ
ನೀನಿಟ್ಟ ದೀಪಗಳು ನಿನ್ನ ಅಂದಕ್ಕೆ ನಾಚಿ
ಸದಾ ಬೆಳಗುತ್ತಿವೆ...
ಆ ಬಾನಿನ ಚಂದಮಾಮ
ನಿನ್ನ ಅಂದಕ್ಕೆ ನಾಚಿ ಮರುನೋಡ
ಬಯಸಿ ಕೆಳಗಿಳಿದು ಬರುತ್ತೇನೆಂದು
ಆ ನಕ್ಷತ್ರಗಳಿಗೆ ಸೂಚನೆ ನೀಡಿದ್ದಾನೆ
ನಿನ್ನ ಪ್ರೀತಿಯ ತೊಟ್ಟಿಲಲ್ಲಿ ಮಲಗಿರುವ
ಕಂದಮ್ಮ ನಾನು...
ಯೋಚಿಸದೆ ಸಾಯಿಸಬೇಡ ಕರುಣೆ ತೋರು
ಈ ಬಡ ಪ್ರೇಮಿಯಮೇಲೆ
ಈ ಜೀವಾ ನಿನ್ನ ಸ್ವಂತದ್ದಾಗಿದೆ...