Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಳದಿಂಗಳ ಬಾಲೆ

ಬೆಳದಿಂಗಳ ಬಾಲೆ ನಿನ್ನನ್ನು ನಾ ಕಾಣೆ
ಬಂಗಾರ ಗೆಜ್ಜೆ ತೊಟ್ಟು ಶೃಂಗಾರ ಹೆಜ್ಜೆ ಹಾಕಿ
ಎಲ್ಲಿ ಹೋಗಿರುವೆ ನೀನು
ತನುವೆಲ್ಲ ನೀನಾಗಿ ಮನವೆಲ್ಲ ನೀ ತುಂಬಿ
ಬಳಿಬಾರದೆ ಪ್ರೀಯೆ ಬಳಿಬಾರದೆ...

- Irayya Mathad

06 May 2016, 06:08 pm

ಅವಳು

ಅವಳ ಕಣ್ಣಂಚಿನ ಕಾಡಿಗೆ
ಏಕೊ ಇಂದು ಎಡೆಬಿಡದೆ ಕಾಡುತ್ತಿದೆ
ಅವಳ ನಗೆಯಲ್ಲೊಂದು
ಮೋಗ್ಗಿನ ಹೂ ಅರಳುವ ಹಾಗರ
ತುಟಿಯ ಅಂಚಲೊಂದು ದೃಷ್ಟಿ
ಬಟ್ಟು ಮೊಗದಲ್ಲಿ ಹೂಮಳೆ ಚಲ್ಲಿದೆ
ಕೆನ್ನೆಯ ಗುಳಿ ಕನಸನ್ನು ಕದ್ದಿದೆ
ಕಿವಿಯಲ್ಲಿ ಮಿಂಚುತ್ತಿದ್ದ
ಓಲೆಯೊಂದು ಕೂಗುತ್ತಿದೆ
ಮೂಗ ಮೇಲಿನ ಮೂಗುತಿಯೊಂದು
ಮಿಂಚಂತೆ ಮಿಣುಕುತ್ತಿದೆ
ತುಟಿಯ ಕಡಲು ನಗುವಿನ
ಹೊಳೆಯಾಗಿ ಸೇರಿದೆ..

- ರವಿಕುಮಾರ

01 May 2016, 06:29 pm

ಅಂತರಾತ್ಮನ ತೃಪ್ತಿ

ಮಾಯದ ಹೊಳೆಗೆ ಮೋಹದ ಕಣ್ಣೇಕ
ಚಿರಕಾಲ ಜೊತೆಗಿರದ ಸಂಪತ್ತಿನ ಲೋಭವೇಕೆ
ಮಾಸಿಹೋಗುವ ವಸ್ತುಗಳ ವ್ಯಾಮೋಹವೇಕೆ
ಇತಿಮಿತಿಯೊಳಗಿದ್ದರೆ ಅಂತರಾತ್ಮನ ತೃಪ್ತಿಗೆ ಬರವೇಕ ಜಗದಲಿ ಶ್ರೀ ಹರಿಯೆ ನಿನ್ನ ನಾಮದ ಮಂತ್ರವಿದ್ದರೆ ಸಾಕು ಮುಕ್ತಿಯ ಪಥ ಸೇರುವೆ..

- Irayya Mathad

27 Apr 2016, 02:10 am

ಕಾಂಚನವೆಂಬ ಬಿಳಿ ಮೋಡದ ಕರಿ ನ

ಜಿಪುಣ ಜನರ ನಡುವಿನ ಈ ಬಾಳು
ರೂಪಾಯಿ ಖರ್ಚಿಗೂ ಕೇಳುವರು ಕಾರಣ
ನಾಳೆಯ ಸುಖಕ್ಕಾಗಿ ತ್ಯಜಿಸುವರು ಈ ದಿನವಾ
ಸುರಿಸುವರು ಬೆವರ ಹನಿಯಾ ಎಣಿಸುವರು ಬೆವರು ಬೆಲೆಯಾ
ಅರಿವಿಲ್ಲದೆ ಕಳೆಯುತಿಹರು ಎರಡು ದಿನದ ಸಂತಸವಾ
ತಿಳಿದಿಲ್ಲ ಅವರು ಈ ಜೀವಕ್ಕೆ ಹೊಣೆಯಾರಿಲ್ಲಾ

- ಬಿಂದು

24 Apr 2016, 05:51 am

ನನ್ನ ಜೀವದ ಗೆಳತಿ

ನಾನು ನಿನ್ನನ್ನೇ ನೆನೆದು ಕುಂತಿದ್ದೆ
ಅ ಕುಷೆಯಲ್ಲಿ ನನ್ನ ಕಣ್ಣಿಂದ ಒಂದು ಹನಿ ಕಣ್ಣಿರು ಬಂತು,,
ನಾನು ಕಣ್ಣಿರನ್ನು ಕೇಳಿದೆ,ಏಕೆ ಹೊರೋತೋಗ್ತಿಯ ಅಂತ. ?
ಅದಕೆ ಕಣ್ಣಿರು ಹೇಳ್ತು ನಿನ್ ಕಣ್ಣಲ್ಲಿ ನಿನ್ ಸ್ವೀಟ್ ಫ್ರೆಂಡ್ ತುಂಬಿರುವಾಗ ನನಗೆಲ್ಲಿದೆ ಜಾಗ ಅಂತ ....
ಬಯ್ ತೆಜುತೆಜಸ್ವಿ

- Tejutejaswi

22 Apr 2016, 06:29 am

ಕಿರುನೋಟ

ತುಸು ನೋಟ ಮೆಲ್ಲಗೆ ಜಾರಿ ಕನಸುಗಳ ಬೆಸೆಯುತ್ತಿತ್ತು
ಮಾಯದ ಕಣ್ಣೊಳಗೆ ಕಂಡ ಕನಸ್ಸಿನ ಬಣ್ಣ
ಆಗಸದಾಚೆ ಚಿಮ್ಮಿತ್ತು ಮೌನದೊಡನೆ
ಪಿಸುಮಾತಿನ ಕಿರನಗೆಗೆ ಕಳ್ಳನೋಟವ ಬೀರುವ ಚಲುವೆಗೆ ಕಂಬವು ಸಾಟಿಯಾಗಬಲ್ಲದೆ

- ರವಿಕುಮಾರ

21 Apr 2016, 01:50 am

ಮಳೆಬಿಲ್ಲು

ಮಳೆಬಿಲ್ಲಿಗೆ ಬಣ್ಣವ ಕಟ್ಟಿ ನನ್ನವಳ ನಗು ನೋಡಬೇಕು
ಹುಣ್ಣಿಮೆಯ ಚಂದಿರನ ಬೆಳಕು ನಾಡೆಲ್ಲ ಎರಚಿದಂತೆ
ತಂಗಾಳಿಯಲ್ಲಿ ಸಾಗಿದ ನಲ್ಲೆಯ ಸೊಬಗ
ಆಗಸದ ಅಂಚಿಂದ ಜಾರಿದ ಬೆಳ್ಳಿ ಮೋಡದ ಎಳೆಯ
ಅವಳ ಸಿಬ್ಬಂದಿ ನೋಡಲು ಕಾತರಿಸುತ್ತಿತ್ತು

- ರವಿಕುಮಾರ

21 Apr 2016, 01:47 am

ಈ ಸಂಜೆ

ಕಣ್ತೆರೆದು ನೋಡುತ್ತಿರುವೆ ಆಗಸವನು
ನಿನಗೆ..
ಕಣ್ಮುಂದೆ ನೀ ಬರಬಾರದೆ
ಕಾಣದಾಗಿ ಹೋದೆಯಾ ಇಂದು ನನಗೆ..
ಕಣ್ರೆಪ್ಪೆ ಕೆಳಗೆ ನೀ ನಿಲಬಾರದೆ
ವಿರಹದಲಿ ಹೊತ್ತು ಹೋಯಿತು ಅಯ್ಯೋ..
ಕ ಸಂಜೆ ಎಂದೂ
ಬರಬಾರದು ಮುಂದೆ..
-ನವೀನ

- Naveen

20 Apr 2016, 07:05 am

ನಡೆಯುತಿರುವೆ

ನಡೆಯುತಿರುವೆ ಬೆಳಕಿನೆಡೆಗೆ
ಅನಂತವನು ಮೀರಿ..
ಯೋಚಿಸುತಿರುವೆ ದಿನವು
ಎಲ್ಲೆಯನು ಮೀರಿ..
ತಿಳಿಯದ ಆಲೋಚನೆಗೆ ಜೀವ ನಿಂತಂತಾಗಿದೆ..
ಎಂದೂ ಕ್ಷಮಿಸದ ಭಾವನೆ
ಇಂದು ಶರಣಾಗಿದೆ.
-ನವೀನ

- Naveen

19 Apr 2016, 05:59 am

ನಿನ್ನ ಪ್ರೀತಿಗೆ ನಾ ಮೌನಿಯಾದ

ಯಾರೇನು ಹೇಳಿದರೇನು
ನನ್ನ ಹೃದಯ ಮೌನವಾಗಿದೆ
ಅಳಲು ತೋಡಲು ಇನ್ನೂ ಏಕಾಂಗಿಯಾಗಿಹೆನು ||ಪ||

ಯಾವ ಪಡುವಣ ಗಾಳಿಯು
ತೂರಿ ಬರುತಿದೆ ಕಾಣೆನು
ಮನದೊಳಗಿನ ಆಸೆಯು ಕಮರುತಿದೆ ನನ್ನಲಿ

ಹಾರು ಹಕ್ಕಿಗೆ ರೆಕ್ಕೆ ಬೇಡವೆ
ಗುಬ್ಬಚ್ಚಿಗೆ ಗೂಡು ಬೇಡವೆ
ಕನಸು ಕಾಣುವ ಮನಸ್ಸಿಗೆ
ಕಲ್ಪನೆಯ ಲೋಕ ಬೇಡವೆ

ಮರೆಯಲಾರದ ಪ್ರೀತಿಗೆ
ಅಳಿಯಲಾರದ ಸಹಿ ಹಾಕಿದೆ
ನನ್ನ ಪ್ರೇಮ ಕಾವ್ಯಕೆ
ಇತಿಹಾಸ ಬರೆಯುವ ಚಿನ್ನದಕ್ಷರ ನೀನಾದೆ

ಯಾವ ಒಲವಿನ ನೋಟಕೆ
ಕಳೆದು ಹೋದೆ ನಿನ್ನಲಿ
ನಿನ್ನ ಕೋಪದ ಬಿಸಿ ಗಾಳಿಯು
ದೂರ ಮಾಡಿತು ನನ್ನನು

ನಿನ್ನ ಹೆಜ್ಜೆಗೆ ತಾಳ ಹಾಕದೆ
ಗೆಜ್ಜೆ ಪೂಜೆ ಮಾಡಲೇನು
ಯಾಕೋ ಈ ಮನಸ್ಸಿನ್ನೂ
ನಿನ್ನ ಜಪಿಸಿ ಸೊರಗುತಿದೆ....

- Irayya Mathad

17 Apr 2016, 08:55 am