Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಲವಿನ ಗೆಳತಿ

ಒಲವಿನ ಗೆಳತಿಗೆ ತಂಗಾಳಿಯಲ್ಲಿ ತೇಲಾಡುವಾಸೆ
ತನ್ನ ಇನಿಯನ ಜೊತೆ ಸವಿಸಂಜೆಯಲಿ ಕನಸ ಬಿಡಿಸುವ ಆಸೆ
ರಾತ್ರಿಯ ಬೆಳದಿಂಗಳಲ್ಲಿ ಚಂದ್ರಮೊಗವ ಅವನ ಎದೆಗೆ ಹೊರಗುವ ಆಸೆ
ಆಗಸದ ಚುಕ್ಕೆಗಳಿಗೆ ಗೆರೆ ಎಳೆಯುವ ಆಸೆ

- ರವಿಕುಮಾರ

14 Apr 2016, 01:39 pm

ವಿರಹದ ವೇದನೆ

ಪ್ರೀತಿಸುವ ನಿನ್ನ ಕಂಗಳ
ನನ್ನ ಕಟ್ಟಿದೆ ಬಿಗಿದಪ್ಪಿದೆ

ದಾರಿ ಕಾಯುತಲಿರುವಾಗ
ನೀ ಬಂದೆಯಾ ಮೆಲ್ಲ ಮೆಲ್ಲನೆ

ಮಾತನಾಡುವ ಬಯಕೆ ಹೊಮ್ಮಿ
ಮೌನಿಯಾದೆ ನಿನ್ನ ಕಂಡೊಡನೆ

ತುಟಿಯಂಚಿನ ನಿನ್ನ ಮಾತುಗಳು
ಹೊರಬರಲಾರದೆ ತಡವರಿಸಿತು

ಸಾವಿರ ದಿನಗಳ ವಿರಹವು
ನಿನ್ನ ನೋಡಿದಾಗ ಮರೆಯಾಯಿತು

ನಿನ್ನ ಮೊಗದಲಿ ಪ್ರೀತಿ ಅರಳಿ
ಅದು ನಗುವಾಗಿ ನನ್ನ ಸೋಕಿತು

ಅಪ್ಪುವ ನಿನ್ನಪ್ಪುವ ಸಮಯದಿ
ಮತ್ತೆ ವಿರಹದ ಗಾಳಿ ಬೀಸಿತು

ಮನದಲ್ಲಿ ನೂರಾರು ಆಸೆ
ಹಸಿರಾಗುವ ಮುನ್ನ ಹುಸಿಯಾಯಿತು....

- Irayya Mathad

14 Apr 2016, 02:08 am

ನಾನೂಬ್ಬ ಮೂರ್ಖ

ನಾನು ಹೋಟೆಲ್ ನಲ್ಲಿ ತೊಳೆವೆನು
ಊಟದ ಪ್ಲೇಟು
ಎಕೆಂದರೆ ನಾನು ಶಾಲೆಗೆ ಹೋಗಿ ಹಿಡಿಯಲಿಲ್ಲ
ಬರೆಯಲ್ಲಿಕೆ ಸ್ಲೇಟು
ನನಗೆ ಓದಬೇಕೆಂಬ ಯೋಚನೆ ಬಂದಿದ್ದೆ ಲೇಟು
ಅದರೆ ನನ್ನ ಪಾಲಿಗೆ ಶಾಶ್ವತ ವಾಗಿ ಮುಚ್ಚಿ ಹೋಗಿತ್ತು
ನಮ್ಮೋರ ಶಾಲೆಯ ಗೇಟು !

- Sachins

13 Apr 2016, 04:39 am

ನೀನೆ....

ಮನಸನು ಮೆರೆಸಿದೆ ಪ್ರೇಮದ ಹೂನಗೆ ನೀನೆ..
ಹೃದಯವ ಕಸಿದಿದೆ ರಾಗದ ಸರಪಳಿ ನೀನೆ..
ಉಸಿರಲ್ಲೇ ಹಸಿರಾಗಿದೆ ನಲ್ಲೆ..
ಹೆಸರಲ್ಲೆ ಹಸಿವಾಗಿದೆ ಬಾಲೆ...


ಅನುರಾಗದ ಸ್ಪರ್ಷವು ನೀನೆ..
ಅಲೆಮಾರಿಯ ತವಕವು ನೀನೆ..
ಹುಸಿನಗೆಯ ಭಾವವು ನೀನೆ..
ಹದಿಹರೆಯದ ಅಲೆಗಳು ನೀನೆ...


ಕಾರ್ಮೋಡದ ನಾಚಿಕೆ ನೀನೆ..
ಕಣ್ಣಂಚಿನ ಬೆಳಕಲ್ಲು ನೀನೆ..
ಮಳೆಹನಿಯ ಇಬ್ಬನಿಯು ನೀನೆ..
ತಿಳಿನೀರಿನ ಸ್ಪರ್ಶವು ನೀನೆ...

ಸನಿಹದ ಬಯಕೆಯ ಮೋಹದ ತವಕವು ನೀನೆ..
ಪ್ರಣಯದ ಮನಸಿಗೆ ಮೌನದ ಚಿಲುಮೆಯು ನೀನೆ..
ಕನಸಲ್ಲೆ ನಿನ್ನ ಬಚ್ಚಿಡುವಂತೆ..
ಮುಗಿಲಲ್ಲೆ ನಿನ್ನ ಹಿಡಿದಿರುವಂತೆ..
ನೆನಪೋ ಬಯಕೆಯೋ ತಿಳಿಯದೆ ಮೌನದಿ ನಾ...

- Shreepadh

12 Apr 2016, 08:39 pm

ನಿನ್ನ ಅಡಿದಾವರೆಗಳಲ್ಲಿ ಹೂವಾ

ಏನು ಮಾಡಲಿ ಹರಿಯೆ
ಭವದೊಳು ಬೆಂದು ನಿನ್ನ ಕಾಣಲಿಲ್ಲ
ಏತಕೆ ಈ ಜನುಮ ನಿನ್ನ ನೋಡದೆ || ಪ||

ಸಪ್ತ ಸಾಗರಗವ ದಾಟಲಾದೆ
ಸಪ್ತ ಶೃಂಗವ ಏರಲಾದೆ
ಸಪ್ತ ಲೋಕವೆ ಬೇಡವಾಗಿಹೆ
ನಿನ್ನ ನೋಡುವ ಆಸೆಯು ಇನ್ನೂ
ಮೊಳಕೆಯೊಡೆದು ಕಾಯುತಿದೆ ನಿನ್ನ

ಹನುಮನ ಹಾಗೆ ಶಕ್ತಿಯು ಇಲ್ಲ
ಅವನ ರೂಪದ ಭಕ್ತಿಯು ಮೂಡಲಿಲ್ಲ
ಅಜ್ಞಾನ ಅಂಧಕಾರ ತುಂಬಿದ ಈ ಗಡಿಗೆ
ಸೋರುವ ಮುನ್ನ ಸೋಸಲೆ ಇಲ್ಲ

ನಾನು ಎನ್ನುವ ಭೂತ ಬಡಿಯಿತಲ್ಲ
ನನ್ನದೆನ್ನುವ ಸ್ವಾರ್ಥ ತುಂಬಿತಲ್ಲ
ನಿನ್ನನರಿಯುವ ಪರಿಯ ಹುಡಕಲಿಲ್ಲ
ಹೋಗುವ ಮುನ್ನ ಏನನ್ನು ತರಲಿಲ್ಲ

ಭಕ್ತನಾಗಿಸು ಶಕ್ತನಾಗಿಸು
ಮರುಜನ್ಮ ನೀನು ಕರುಣಿಸೆನಗೆ
ನಿನ್ನ ಸೇವೆ ಮಾಡುತ ಮುಕ್ತಿಯ ಪಡೆವೆನು
ಬೇಡೆನು ಇನ್ನೂ ಬೇರೆ ವರವನ್ನು....

- Irayya Mathad

10 Apr 2016, 04:33 pm

ವೃಕ್ಷ ಪ್ರೇಮ

ಕಡಿಯದಿರಿ ವೃಕ್ಷರಾಶಿ
ಸಕಲ ಜೀವರಾಶಿಗೆ
ಕಂಪು!
ನೆತ್ತರು ಇದ್ದಿದ್ದರೆ
ಆಗಿರುತ್ತಿತ್ತು ಇಳೆಯೆಲ್ಲ
ಕೆಂಪು!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Apr 2016, 05:23 am

ಮುಗ್ದತೆ

ಗಾಳಿಮಳೆ ತಾಗದ
ಬೊಳು ಮರಕ್ಕೆ
ಆಕಾರ ಕೊಟ್ಟು ಬಣ್ಣಲೇಪಿಸಿದ್ದಾನೆ
ಕಲೆಗಾರ!!
ದೇವರೆಂದು ನಂಬಿ
ಕೈ ಮುಗಿದು ಜನ ಕಾಸಿಟ್ಟು
ಹೋಗ್ತಾರ!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Apr 2016, 05:15 am

ಜನ್ಮ ದಿನ

ಜನ್ಮದಿನ
ಏನ್ನ ದಿನ
ಎಂದು ಬೀಗ ಬಾರದು!
ಕೊಡುಗೆ ನೀಡು
ಅನುದಿನ
ನಾಡು ಮರೆಯಬಾರದು!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

05 Apr 2016, 02:08 am

ಕಾಡು

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

ಜಗನ್ಮಾತೆಯ ಜೇಷ್ಟ ಪುತ್ರನೇ,
ಸೃಷ್ಟಿ ಕ್ರಿಯೆಯ ಕ್ಲಿಷ್ಟ ಕರ್ಣನೇ,
ಹಗಲಿರುಳು ಮಾಡುವೆ ನಿನ್ನ ಸ್ಮರಣೆ,
ತೋರಿಪು ನಿನ್ನ ಅಘಾದ ಶಕ್ತಿಯನ್ನೇ.

ನಿನ್ನ ಕೆಡವಲು ಬಂದವರನ್ನು ಬೆದರಿಸು,
ನಿನ್ನ ಬೇಡಲು ಬಂದವರನ್ನು ರಕ್ಷಿಸು,
ನಿನ್ನ ವಿಕ್ರಿಯ ಮಾಡಲು ಬಂದವರನ್ನು ಶಿಕ್ಷಿಸು,
ನಿನ್ನ ನೋಡಲು ಬಂದವರನ್ನು ರಂಜಿಸು,
ನಿನ್ನ ಒಲವಿಗೆ ಬಂದವರನ್ನು ಮುದ್ದಿಸು,
ನಿನ್ನ ತಂಟೆಗೆ ಬಂದವರನ್ನು ಕಡೆಗಾಣಿಸು.

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

ಕೋಟಿ ಜೀವಿಗಳ ಜನನಿ,
ಕಟ್ಟಲೆ ಜನಗಳ ಗುಪ್ತಗಾಮಿನಿ,
ಕವಿಗಳ ಪ್ರಥಮ ಸ್ಫೂರ್ತಿ ನೀ,
ರಸಿಕರ ಅಪ್ರತಿಮ ಪ್ರೇಯಸಿ ನೀ.

ಮನುಗಳ ದೃಷ್ಟಿಯ ಹೊನ್ನಿನ ಸಿರಿ,
ಕಲೆಗಳ ಸೃಷ್ಟಿಯ ನಯನ ಪರಿ,
ಮನುಗಳ ಸ್ವಾರ್ಥಕ್ಕೆ ಬಲಿಯಾಗಬೇಡ,
ಕಲೆಗಳ ನಯನಗಳಿಗೆ ಕೊನೆಯಾಗಬೇಡ.

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

- ಅನಿಕೇತನ

30 Mar 2016, 10:29 am

ತಂಪಿನ ರಾತ್ರಿ

ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದಿರ ಸೊಬಗಿನ ಮಲೆನಾಡ ಮೈತ್ರಿ,
ನೋಡುಬಾ ನನ್ನರಸಿ,
ಸುಂದರ ರಾತ್ರಿಯೊಳು ಒಡಲನು ಸೊಂಕಿಸಿ.

ಇಲ್ಲಿ ಬಂದು ಎನ್ನ ತಬ್ಬಿ ಕೂರು,
ತಂಗಾಳಿಯ ತಂಪಿನೊಳು ನಿನ್ನ ಪ್ರೀತಿ ಸಾರು,
ಸುತ್ತಲು ಸವರಲಿಬಿಡು ತಣ್ಣನೆ ಚಳಿಯು,
ನೀ ಎನ್ನ ಬಿಟ್ಟು ಸರಿಯದಿರೆಲ್ಲಿಯು.

ನಿನ್ನ ನವನಿತ ಸಾರದ ಕೆನ್ನೆಯ ತೋರಿಪು,
ನನ್ನ ತಣ್ಣಣೆ ತುಟಿಯದನು ಮುಟ್ಟಲು ಬಿಡು,
ನಿನ್ನ ತಣ್ಣಣೆಯ ತುಟಿಯನನಗೆ ತೋರಿಪು,
ನನ್ನ ತುಟಿಯದನು ಚುಂಬಲಿ ಬಿಡು.

ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದ್ರಿಕೆ ಬಾ ಆಗಿಲಿ ನಮಗೆ ಮಲೆನಾಡಿನಲ್ಲಿ ಮೈತ್ರಿ.

- ಅನಿಕೇತನ

29 Mar 2016, 02:12 pm