Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗುರುಗಳ ಆಶೀರ್ವಾದ

ಬಯಲುಸೀಮೆಯಿಂದ ಮಲೆನಾಡಿಗೆ,
ಬಿಸಿಲಬೇಗೆಯಿಂದ ಮಳೆಕಾಡಿಗೆ,
ಕೆಲಸದ ಓಟದಿಂದ ಮರಸು ಬೇಟೆಗೆ,
ಯಂತ್ರಗಳಿಂದ ಶಾಂತಿ ಮಂತ್ರಕ್ಕೆ,
ಕತ್ತಲಿಂದ ಬೆಳಕಿಗೆ,
ಕವಿಶೈಲದ ಸಗ್ಗವೀಡಿಗೆ,
ಕ್ಷಣ ಮಾತ್ರದಲ್ಲೆ ಸಂಚರಿಸುವ ಗೋಜಿಗೆ,
ನಡೀ ನೀ ಉದಯರವಿ ಪ್ರಕಾಶನಕ್ಕೆ,
ಹಿಡೀ ನೀ ಕವಿಯ ಕಿರುಬೆರಳು ಮುಂದಕ್ಕೆ,
ಮತ್ತೆಂದು ಬಾರದಿರು ಹಿಂದಕ್ಕೆ,
ನಡೆಯುತ್ತಿರು ವಿಶ್ವಮಾನವನ ಪಥಕ್ಕೆ,
ತಲೆಬಾಗು ಗುರುಗಳ ಆಶೀರ್ವಾದಕ್ಕೆ.

- ಅನಿಕೇತನ

28 Mar 2016, 06:38 pm

ಇದು ರಾತ್ರಿ

ಅವಳೊಂದಿಗೆ ರಾತ್ರಿ ಕಳೆಯುವುದೆಂದರೆ
ಅವಳೆ ನನ್ನ ಕೈ ಹಿಡಿದು
ಆಗಸದ ಚುಕ್ಕಿಗಳ ಮಧ್ಯೆ ರಂಗೋಲಿ ಹಾಕುತ್ತಾಳೆ
ಚಂದ್ರನ ನೋಡೋ ಮನಸ್ಸೇ ಬಾರದು
ಮಡಿಲಲ್ಲಿ ಮಲಗಿಸಿದ ಅವಳು
ತಂಗಾಳಿಯ ಜೊತೆ ಇಂಪಾಗಿ ಹಾಡುತ್ತ
ಮೌನರಾಗವು ಅವಳ ಮೂಗಿನ ಮೂಗುತಿಯಲ್ಲು
ಪಳ ಪಳ ಹೊಳೆಯುವುದು.
ಅದೊಂದೇ ಸಾಕು ಮುತ್ತುಗಳಿಗೆ ಬರ ಎಂದು ಬಾರದು...

- ರವಿಕುಮಾರ

28 Mar 2016, 02:31 pm

ಮಲೆನಾಡಿನ ಮೌನ

ಕೂಗದಿರು ಕರೆಯದಿರು,
ಕುತೂಹಲದಿಂದ ಅತ್ತಿತ್ತ ಹೋಗದಿರು,
ಕುಂತವನು ನಿಲ್ಲದಿರು,
ಪಿಸುಮಾತಿನ ಸದ್ದು ಮಾಡದಿರು.

ಕಣಿವೆಯ ಕಂಡರು ಸುಮ್ಮನಿರು,
ಕಾನನದೊಳು ನೀ ಒಂದಾಗಿರು,
ಮಳೆಯಲಿ ಮಿಂದರು ನಡುಗದಿರು,
ಸುತ್ತ ಹಸುರನು ಕಂಡು ಕುಣಿಯದಿರು.

ನೀ ಏನೇ ಮಾಡಿದರು,
ಮನುಜನ ಮನದ ಮೈಲಿಗೆಯ ತಗಲಿಸದಿರು,
ಮಲೆನಾಡ ಕಾನನದ ಕಮರಿಯೊಳಿಲಿಯಲು,
ಮಲೆನಾಡ ಮೌನದಲಿ ನೀ ಒಂದಾಗಿರು.

- ಅನಿಕೇತನ

28 Mar 2016, 10:04 am

ಬೈಗು

ಮೇಘವು ಮರಳಿ ಬಂದಿದೆ,
ಹರುಷವು ಮನದಿ ತುಂಬಿಸಿದೆ,
ನದಿಯ ತಡಿಯಲಿ ನಿಂತಿರುವ ನನ್ನ,
ತನ್ನ ಅಂದ ಚಂದದಿ ಸೆಳೆದಿದೆ.

ನದಿಯು ಎಲ್ಲೋ ಜನಿಸಿದೆ,
ಬೆಟ್ಟದಡಿಯ ಕಮರಿನಲ್ಲಿ ಜಲಪಾತವ ಸೃಷ್ಟಿಸಿ
ಕಾನನದೊಳು ಹರಿದು ಬಂದಿದೆ.
ತನ್ನ ಅಂದ ಚಂದದಿ ನನ್ನ ಮನವ ಗೆದ್ದಿದೆ.

ಪಡುವಣದೊಳು ದಿನೇಶನು ಬಂದಿಹನು,
ಗಗನದಿ ಕುಂಕುಮ ಕೇಸರಿಯನ್ನು ಚಲ್ಲಿಹನು,
ಕಾರ್ಮೋಡದ ನಡುವೆ ತನ್ನ ಮುಪ್ಪು ಬೆಳಕನು ಸಾರುತಿಹನು.
ತನ್ನ ಅಂದ ಚಂದದಿ ನನ್ನ ಮನಸ ರಂಜಿಸಿಹನು.

ನಭದಿ ಮೇಘ ಕಾರ್ಮೂಡದಡಿಗೆ,
ದಡದಿ ನದಿಯ ವೈಯಾರದತಡಿಗೆ,
ಸಂಜೆ ಸೂರ್ಯನ ಸರಿಗೆ ನಿಂತುನಾ,
ಈ ಹಾಡ ಹಾಡಿ ಹರುಷ ಪಡುತಿಹನು.

- ಅನಿಕೇತನ

27 Mar 2016, 04:01 pm

ಕತ್ತಲೆ ಕಾನು

ಸುತ್ತಲು ಕತ್ತಲು ಮುಗಿಲಲ್ಲಿ ಕಾರ್ಮೋಡಗಳು,
ಮುಗಿಲ ಕಾಣಲು ಮುಚ್ಚಿದೆ ಕಾಡುಮರಗಳು,
ಉತ್ತರ ಕನ್ನಡ ದಕ್ಷಿಣ ದಿಕ್ಕಿನ ಘಟ್ಟದ ಮೇಲಿನ ಅಡವಿಯಿದು,
ಹಾಗಲಲಿ ಕಾಣದ ಇರುಳಲಿ ಬರಲಾಗದ,
ದಟ್ಟನೆ ಹಸುರಿನ ಕತ್ತಲೆ ಕಾನನವಿದು.

ಅಡವಿಯ ಅಡಿಯಲಿ ಇಳಿದು ಹೋದರಲಿ
ಶರಾವತಿಯು ಹರಿಯುತ್ತಿರುವಳು.
ನೀಲಿ ನಭದ ರಂಗನು ಅವಳ ಒಡಲಲಿ ಹರಿಸಿ,
ರಂಗಿನ ಸುಂದರಿ ನೀಲಿ ರಂಗಿನಲಿ ಝಗಝಗನೆ ಹೊಳೆಯುತ್ತಿರುವಳು.
ಕಣಿವೆಯ ಸೃಷ್ಟಿಸಿ ನಯನಗಳನು ರಂಜಿಸಿ,
ತನ್ನ ವೈಭವವನ್ನು ತೋರುತ್ತಿರುವಳು,
ಶರಾವತಿ ಕರುನಾಡ ಮನೆಮಗಳು.

ಹೋದರೆ ಚಾರಣ ಮಾಡಬೇಕೆನಿಸುವ ಕತ್ತಲೆಕಾನನವಿದು,
ಹೋದರೆ ಚಾರಣ ಮಾಡದೆಬಂದರೆ ಕತ್ತಲೆಕಾನು ಕತ್ತಲಾಗೆ ಉಳಿದುಬಿಡುವುದು.

- ಅನಿಕೇತನ.

- ಅನಿಕೇತನ

26 Mar 2016, 07:57 pm

ಅವಳು

ಅವಳ ಒಂದು ಕಿರುನಗೆ ಸಾಕು
ನಾ ಜಗವನ್ನೆ ಜಯಿಸಿಬಿಡುವೆನು.
ಅವಳ ಕೈತುತ್ತಿಟ್ಟರೆ ಸಾಕು ರಾಗಿ ಅಂಬ್ಲಿ ನನಗೆ ಮೃಷ್ಟಾನ್ನ ಭೋಜನ.
ಅವಳು ಜೊತೆಗಿದ್ದರೆ ಸಾಕು ಗರಿಮನೆ ನನಗದು ಅರಮನೆ..

- ರವಿಕುಮಾರ

26 Mar 2016, 12:14 pm

ನಿನ್ನ ನಗುವಿನ ಕ್ಷಣಗಳನ್ನು!

ಪ್ರಿಯ!
ನಿನ್ನ ನಗುವಿನ ಕ್ಷಣಗಳನ್ನು !
ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ
ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !

- ವಿನುತ ಕಿರಣ್ ಗೌಡ

25 Mar 2016, 02:19 am

ಹೋಳಿ ಬಣ್ಣ

ಹಳೆಯ ನೆನಪು ಮರೆತು
ಹೊಸ ರೀತಿಯ ನೆನಪೊದಿಗೆ
ಬಣ್ಣದ ಹಚ್ಚಿವುದೇ ಹೋಳಿ....

- Basayya Hiremath

23 Mar 2016, 05:08 pm

ನಾನೊಂದು ತೀರ

ನಾನೊಂದು ತೀರ
ನೀನೊಂದು ತೀರ
ನಮ್ಮಿಬ್ಬರ ನಡುವೆ ನೆನಪುಗಳೆ ಸಾಗರ
ತೀರಿಸುಬಾರ ಮನಸಿನ ಭಾರ
ಇರದಿರಲಿ ನಮ್ಮಿರನಡುವೆ ಯವುದೇ ಅಂತರ
ಒಂದಾಗೋಣ ಬಾ ಹತ್ತಿರ
ಹಾರೋಣ ಬಾ ಪ್ರೇಮದ ಹಕ್ಕಿಗಳಾಗಿ ಬಾನೆತ್ತರ...

- ವಿನುತ ಕಿರಣ್ ಗೌಡ

23 Mar 2016, 09:06 am

ನಿನ್ನ ಪ್ರೀತಿಗಾಗಿ...,

ನೀನು ನನ್ನಿಂದ ಎಷ್ಟೇ ದೂರ ಹೋಗ ಬಯಸಿದರು
ನಿನ್ನ ನೆನಪುಗಳು ನನ್ನಿಂದ ದೂರವಾಗುತ್ತಿಲ್ಲ ಗೆಳಯ.,
ನೆನಪಲ್ಲೇ ಕಟ್ಟುವೇ ಪುಟ್ಟದೊಂದು ಅರಮನೆಯ ...
ಒಮ್ಮೆಯಾದರೂ ನನ್ನ ನೆನಪಾದರೆ ತಪ್ಪದೆ ಬಂದು ಬಿಡು ಗೆಳಯ.,
ನಾ ಕಾಯುವೇ ನೀ ಬರುವ ದಾರಿಯನ್ನು.
ನಿನ್ನ ಪ್ರೀತಿಗಾಗಿ ..

- ವಿನುತ ಕಿರಣ್ ಗೌಡ

23 Mar 2016, 03:12 am