ಮನಸ್ಸೆಂದರೆ ಹಾಗೇನೇ..
ಒಂದನ್ನು ಬಯಸುತ್ತೆ,
ಕೆಲವೊಮ್ಮೆ ತೊರೆಯುತ್ತೆ.
ಬಯಸಿದ್ದು ಸಿಗದಿದ್ದರೆ...
ಮರುಗುತ್ತಿರುತ್ತೆ.
ಬಯಸದ್ದು ಬಂದು
ಸಂತೋಷವೆನಿಸಿದರೂ
ಬಯಸಿದ್ದು ಬಂದಷ್ಟು
ಸಂತೋಷಪಡಲಾರದು.
ಇನ್ನೊಂದು ಮನದಿಂದ
ಲಭಿಸಿದ ಮೆಸೇಜು
ಕರಗತವಾಗದಾಗ
ಅಷ್ಟೊಂದು ಮರುಗದಿದ್ದರೂ
ಸ್ವತಃ ಬಯಸಿದ್ದು
ಸಿಕ್ಕೇ ಸಿಗಬೇಕೆಂಬ
ಹಠವಿರುವುದು
ಒಮ್ಮೆ ಆ ಕಡೆ
ಇನ್ನೊಮ್ಮೆ ಈ ಕಡೆ
ವಾಲುತಿರುವುದು
ಸಂತೋಷಕ್ಕಂತೂ
ಹಂಬಲಿಸುತಿರುವುದು...
ನೈಸರ್ಗಿಕ ಪ್ರೀತಿಯಿತ್ತು
ಅಂದು
ಶಾಂತಿಯೂ ಮನೆ ಮಾಡಿತ್ತು
ಮನೆಗಳು ದೂರವಿದ್ದರೂ
ಮನಗಳು ಹತ್ತಿರವಾಗಿತ್ತು
ಸಂದರ್ಶಿಸಲು ಸಮಯವಿತ್ತು..
ಸೌಕರ್ಯಗಳು ಮಿತಿಮೀರಿದ್ದರೂ
ಇಂದು
ಕೃತಕ ನಗೆ ದರ್ಶನವಾಗುತಿದೆ.
ಅಶಾಂತಿ ತಲೆದೋರುತ್ತಿದೆ.
ಮೊಬೈಲ್ ಹತ್ತಿರವಿದ್ದರೂ
ಸಮಯ ಪೋಲಾಗುತ್ತಿದೆ
ಪ್ರಿಯರ, ಕುಟುಂಬಿಕರ ಸಂದರ್ಶನವೂ ಅಸಾಧ್ಯವಾಗುತಿದೆ...
...
ಯಾರಿಗೋ ಜನಿಸಿ...
ಎಲ್ಲೋ ಜೀವಿಸಿ..
ಯಾರಿಗಾಗಿಯೋ ದುಡಿದು..
ಸಮಯ ಮುಗಿದಾಗ (!)
ಯಾರೋ ಹೊತ್ತುಕೊಂಡು ಹೋಗಿ..
ಹೂಳಿ ಬಿಡುವುದೇ ಜೀವನ ?
ನಾನಿಲ್ಲಿದ್ದೆ ಎಂಬುದಕ್ಕೆ...
ನಾನು ಲೋಕ ಕಂಡಿದ್ದೆ ಎಂಬುದಕ್ಕೆ...
ನಾನಿಲ್ಲಿ ಜೀವಿಸಿದ್ದೆ ಎಂಬುದಕ್ಕೆ...
ಸಾಧನೆ ಎಂಬ ಗುರುತು ಇದೆಯೇ ?