Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಾಸ್ತವ

ಪರ್ವತದಿಂದ ಹರಿಯುವ ನದಿಗೇನು ತಿಳಿದಿದೆ
ತನ್ನ ಪಯಣ ಎಲ್ಲಿಗೆಂದು?

ಗಿಡದಲ್ಲಿ ಅರಳಿದ ಹೂವಿಗೇನು ತಿಳಿದಿದೆ ತನ್ನ ಸಮರ್ಪಣೆ ಯಾವ ದೇವರ ಪಾದಕೆಂದು?

ಸ್ವಚಂದವಾಗಿ ಬೀಸುವ ಗಾಳಿಗೇನು ತಿಳಿದಿದೆ
ತನ್ನ ಚಲನೆ ಯಾವ ದಿಕ್ಕಿಗೆಂದು?

ವೈರಾಗ್ಯ ದ್ವೇಷ ಅಸೂಯೆ ಏತಕೆ ಮನದಲ್ಲಿ

ಪ್ರತಿದಿನವೂ ಅಚ್ಚರಿ ಕಾದಿರುವ ಈ ಬದುಕಿಗೇನು
ತಿಳಿದಿದೆ ತನ್ನ ಭವಿಷ್ಯ ಎತ್ತ ಸಾಗುವುದೆಂದು?

ಸ್ವಾತಿ.........

- Swati S

09 Nov 2022, 08:30 pm

ಒಲವು

"ನಿನ್ನನ್ನೇ ನೋಡುವ ಕಾತುರದಿ
ಪಯಣವ ಬೆಳೆಸಿರುವೆ,
ಹಾದಿಯ ನಡುವೆ ನಾ ದಾರಿ
ತಪ್ಪಿರುವೆ ಗೆಳತಿ ಕಾಣದ ನಿನ್ನನ್ನು
ಕಾಣುವ ಬಯಕೆಯೂ,
ಈ ಸುರಿಯುವ ಸೋನೆಯಲಿ ನಿನ್ನದೇ
ತುಂತುರು ನೆನಪುಗಳು,
ಅದೆಲ್ಲಿರುವೆಯೋ ಬಂದು ಸೆರುವೆ ಈ
ಮುಂಗಾರು ಮುಗಿಯುವ ಮುನ್ನ"..!!
ಎಮ್.ಎಸ್.ಭೋವಿ...✍️
..
..

- mani_s_bhovi

08 Nov 2022, 07:20 pm

ಹೇ_ಕನಸಿನ_ಲೋಕದ_ರಾಜಕಮಾರಿ..

"ಹೇ.. ಕನಸಿನ ಲೋಕದ ರಾಜಕುಮಾರಿ!
ಅವಾಗವಾಗ ಎದುರಾಗೋಕೆ ಏನೇ..ಸೋಮಾರಿ!
ಎಷ್ಟೇ ಕಾಡೋದು ಮರೆಯಲ್ಲೇ.. ಮಯೂರಿ!
ಯಾಕಾಗಿ ಸತಾಯಿಸುತಿರುವೆ.. ಕಿನ್ನರಿ!
ಆಲಿಸೆ ನನ್ನ ಮಾತಾ.. ಹೇ_ನಾರಿ!
ಸ್ವಲ್ಪ ಬಂದು ನೋಡೆ.. ನನ್ನ ದಾರಿ!
ನೀನೆ ನನ್ನವಳೆಂದು.. ಮನ_ಮಾಡಗಿದೆ ಜಾರಿ!
ಪ್ರತಿ_ಹೆಜ್ಜೆಲು ಜೊತೆಯಾಗಿ.. ಸೇರೆ ನನ್ನ ಸವಾರಿ!
ಹೇ ಮಾರಿ_ಪ್ಯಾರೀ.. ಮಾಡೇ ಒಲವ_ಖಾತರಿ!
ತೋರೆ.. ಅತ್ಯದ್ಬುತವಾದ ಒಲವಿನ_ಪರಿ!!"
ಎಮ್.ಎಸ್.ಭೋವಿ...✍️

- mani_s_bhovi

06 Nov 2022, 03:44 pm

ನಂಬಿಕೆಯ ಸಾರವೆ ಇಲ್ಲದಾಗಿದೆ...

"ನೆನಪಿನ ರಾಶಿಗೆ.. ನಿನದೆ ಹೆಸರಿದೆ !
ಕನಸಿನ ಬೀದಿಲಿ.. ಕತ್ತಲೆ ಕವಿದಿದೆ !
ಒಲವಿನ ಗಾಳಿಯ ಸದ್ದಿಲ್ಲದೇ...
ವಿರಹದ ಅಪ್ಪುಗೆ ಇನ್ನೂ ಹೆಚ್ಚಿದೆ !
ವಿವರಿಸಲಾಗದ ರೀತಿಗೆ..
ಬದುಕು ತಿರುಗಿದೆ !
ನಿರಂತರ ಹೊಡೆತಗಳಿಂದ..
ಮನವು ಕುಗ್ಗಿದೆ !
ನಂಬಿಕೆಯ ಸಾರವೆ.. ಇಲ್ಲದಾಗಿದೆ !!"
ಎಮ್.ಎಸ್.ಭೋವಿ...✍️

- mani_s_bhovi

06 Nov 2022, 03:27 pm

ಕನಸು

ಮೂಡಲ ನೇಸರನು.
ಪಡುವಣ ಸೇರುವ ಕನಸು;
ಅಣೇಕಟ್ಟಿನ ನದಿಗೆ,
ಹರಿದು ಹೋಗುವ ಕನಸು

ದಾರಿ ತಪ್ಪುವ ಹಕ್ಕಿಗೆ
ಗೂಡು ತಲುಪಿಸುವ ಕನಸು;
ಮುಗಿಯದ ಹೆಜ್ಜೆಗೆ,
ಊರ ಸೇರುವ ಕನಸು

ನಗುಹೀನ ಮೊಗಕೆ
ನಗುವ ಬೀರುವ ಕನಸು;
ಬಾಲಗೊಂಚಿಯ ಪಟಕೆ,
ಬಹುದೂರ ಹಾರುವ ಕನಸು

ಕನಸು ಹೊತ್ತ ಕನಸಿಗೆ
ಮಿತಿಯ ಕಡಿವಾಣವೇಕೆ?
ಬೇಲಿ ಹಾಕುವ ಕನಸಿಗೆ
ಆಗುವುದೆಂದು ನನಸು.........

ಸ್ವಾತಿ S.........

- Swati S

04 Nov 2022, 04:44 pm

ಬೇಜಾರು ಬೇಜಾರು..

ಉತ್ತರ ಇಲ್ಲದ ಪ್ರಶ್ನೆಗಳು ?
ಅರ್ಥವಿಲ್ಲದ ನೋವುಗಳು,
ನಿದ್ದೆ ಇಲ್ಲದ ರಾತ್ರಿಗಳು,
ನೆಮ್ಮದಿ ಇಲ್ಲದ ಹಗಲುಗಳು,
ಮರೆತು ಹೋದ ಮನಸುಗಳು,
ಮರೆಯದೆ ಬರುವ ಕಣ್ಣೀರು,
ಕಳೆದು ಹೋದ ನಿನ್ನೆಗಳು,
ಕಾಣದೆ ಬರುವ ನಾಳೆಗಳು,
ಆದರೂ ಸದ್ದಿಲ್ಲದೇ ಸಾಗುತಿದೆ
ಜೀವನದ ಹೆಜ್ಜೆಗಳು....
ಎಮ್.ಎಸ್.ಭೋವಿ....✍️
.

- mani_s_bhovi

03 Nov 2022, 11:35 pm

ಅಲೆಯೇ ಇರದೆ

ಅಲೆಯೇ ಇರದ ಸಾಗರದ ತೀರ
ಇ ಎದೆಯೊಳಗೆ ನೋವು ಸಾವಿರ ಸಾವಿರ
ಕೋಗಿಲೆಯೇ ಬರದೇ ಒಣಗುತಿದೆ ಮಾಮರ
ಕಾಣದ ಭಾವನೆಯೊಳಗಣ ವೇದನೆ ನಿರಂತರ
ನಿನ್ನ ನೆನಪು ನೆನೆದು ಕರಗುತಿದೆ ಚಂದಿರ
ಕನಸೇ ಕಾಣದ ಕಣ್ಣೊಳಗೆ ನಿರಾಶೆಯ ಆಗರ
ಮೂರು ಪದಗಳ ನುಡಿದು ಹೋದೆಯಾ ದೂರ
ನೆನಪನ್ನು ಕೊಟ್ಟು ಹೊರಟು ಹೊದೆಯಲ್ಲ ಬಲುದೂರ......

ಪ್ರೀತಿಯ ಹೃದಯ...........

- Swati S

03 Nov 2022, 05:25 pm

ಮೌನ

ಕೊಲ್ಲಬೇಡ ಮೌನದಿಂದ
ಹೇಳಿಬಿಡು ಒಂದು ಸಾರಿ
ತಪ್ಪಿದರೆ ತಿದ್ದಿಕೊಳ್ಳುವೆ
ಮೌನದಿಂದ ಮೌನ
ಕೊಲ್ಲಬೇಡ ಮೌನ
ಮೌನವೇ ಉತ್ತರವೇ
ಮನಸ್ಸ ಶಾಂತಿಗ ಮೌನ
ಶಾಂತಿ ಶಾಂತಿಗೂ ಮೌನ
ಸಿಟ್ಟಿಗೂ ಮೌನ
ಕಲಹಕ್ಕೂ ಮೌನ
ತಪ್ಪಿಗೂ ಮೌನ
ಸರಿ ಇದ್ದರು ಮೌನ
ಹೇಳಿಬಿಡು ಒಂದು ಸಾರಿ
ಎಲ್ಲದಕ್ಕು ಮೌನ
ಉತ್ತರ ನೀಡಬಾರದೆ ಮೌನ
ತಪ್ಪಿದರೆ ಕ್ಷಮೇ
ಮಾತಾಡು ಮೌನ
ದಿಕ್ಕು ಗೋಚರಿಸದೆ ಮೌನ
ಮೌನ ಮೌನ ಮೌನ
ಕೊಲ್ಲಬೇಡ ಮೌನ........
ಸ್ವಾತಿ S.........

- Swati S

03 Nov 2022, 05:08 pm

ಅವಳಿಗು ತಿಳಿದ ವಿಷಯ...

"ಸದ್ದೇ ಇಲ್ಲದೆ.. ಹೃದಯ ಒಡೆದಳು !
ಹೇಳದೆ_ಕೇಳದೆ.. ದೂರಕೆ ನಡೆದಳು !
ಮಾಡಿದ ಆಣೆಗಳ ಮರೆಮಾಚುತ...
ಏನನ್ನೋ ಗೆದ್ದಂತೆ ಇದ್ದಳು !
ಭಾವನೆಯ ಬೂದಿಗೆ ತಿರುಗಿಸಿ...
ನನ್ನ ಮಾತ ಆಲಿಸದೆ ಹೋದಳು !
ಸುಳ್ಳಾಗದಲ್ಲ ಹೋದರೂನು...
ನಡೆದಂತ ವಿಷಯ !
ಸುಳ್ಳಲ್ಲ ಒಲವಾಗಿದ್ದು ಅನ್ನೋದು...
ಅವಳಿಗು ತಿಳಿದ ವಿಷಯ !!"
ಎಮ್.ಎಸ್.ಭೋವಿ...✍️

- mani_s_bhovi

02 Nov 2022, 10:51 pm

ಕರುನಾಡು

ಕರುಣೇ ತುಂಬಿದ ಗುಡಿ ಈ ನಾಡು
ಗಂಧದ ಗುಡಿ ಈ ನನ್ನ ಬಿಡು
ಸಂಸ್ಕೃತಿ ನೆಲೆಯ ತವರೂರು
ಸಾಹಿತ್ಯ ಕ್ಷೇತ್ರಕ್ಕೆ ನಮಗೆ ಸಮಾನಾರು

ಕರುನಾಡೆ ಬಹಳ ಅಪರೂಪ
ಇಲ್ಲಿ ತೋರಸತ್ತಾರೆ ಎಲ್ಲರು ಅನುಕಂಪ
ನಮ್ದು ಯಾರ ಜೊತೆಯಲ್ಲಿ ಇಲ್ಲ ಮನಸ್ತಾಪ
ಕಾರಣ ನಮ್ಮ ಗುಣ ಬಹಳ ಅಪರೂಪ

ಎಂಟು ಪೀಠ ಜ್ಞಾನಕ್ಕೆ
ಮೂರು ರತ್ನ ಭಾರತಕ್ಕೆ ಕೊಟ್ಟ
ರಾಜ್ಯ ನನ್ನದು ಅದುವೇ ನನ್ನ ಕರುನಾಡು
ಸಾರ್ಥಕತೆಯ ನೆಲೆಯು ನನ್ನ ಬಿಡು.....

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....

- Swati S

31 Oct 2022, 07:46 pm