Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಎದೆಯ ಮಹಲೊಳಗೆ
ಮೂಡಿದ ನಿನ್ನ ಪ್ರೀತಿಯ ಗಜಲುಗಳಲ್ಲಿ ಎದೆ ಬಿರಿಯ ನೋವು.
ಸುಮ್ಮನೆ ನಿನ್ನ ಹೆಸರು ಹೇಳಿ
ಆಕಾಶದ ಅಂಗಳದಲ್ಲಿ ಕಣ್ಣಾಡಿಸಿದರೆ
ಅಲ್ಲಿ ಚಂದ್ರಮನಿಲ್ಲ.
ನಿನ್ನ ಹೆಸರಿಟ್ಟು ಕರೆಯುತ್ತಿದ್ದ ಅಷ್ಟು ಚುಕ್ಕಿಗಳೇಕೆ
ದೂರ ಹೋದವು ಗೆಳಯ?
ಈಗಂತು ಕಣ್ಣುಗಳಲ್ಲಿ ಕತ್ತಲೆಯ ರಾತ್ರಿಗಳ ಮೆರವಣಿಗೆ.
ಸವಿಸಂಜೆಯೊಂದಿಗೆ ಕನ್ನಡಿಗ ರವಿಕುಮಾರ
- ರವಿಕುಮಾರ
19 Feb 2016, 01:50 am
ಭೂರಮೆಯ ಹಸಿರಸಿರ
ಕೋಮಲತೆಯ ಬೀಡು
ಗಿರಿ ಶೃಂಗಾರದ ಭವ್ಯತೆ
ತಂಪೆರಚುವ ತಂಗಾಳಿಯ ದಿವ್ಯತೆ
ಕಣ್ಣರಳಿಸಿ ನೋಡುವಷ್ಟು
ಚೆಲುವಿನ ಶ್ರೀಮಂತೆ ಮಲೆನಾಡು...
- ಕ.ಲ.ರಘು
16 Feb 2016, 06:09 am
ದೂರವೇ ನಿಂತು ನೋಡುವೆ ನಿನ್ನನ್ನು
ನಿನ್ನಯ ಜೀವನ ಸುಖವಾಗಿರಲಿ
ನನ್ನೊಡನಾಡಿದ ಮಾತುಗಳನ್ನು
ನನ್ನೊಡನೆ ಕಳೆದ ನೆನಪುಗಳನ್ನು
ನನ್ನಿಂದ ಪಡೆದ ಮುತ್ತುಗಳನ್ನು
ಮರೆತುಬಿಡು ಮರೆತುಬಿಡು/ದೂರವೇ/
ನಿನ್ನಯ ಮುಂದೆ ಕಾಣೆನು ನಾನು
ನಿನ್ನಯ ಹಿಂದೆ ಬಾರೆನು ನಾನು
ನಿನ್ನಿಂದ ದೂರ ಹೋಗುವೆನು
ಮರೆತುಬಿಡು ಮರೆತುಬಿಡು/ದೂರವೇ/
ನಿನ್ನಯ ಜೀವನ ನಿನಗೇ ಇರಲೀ
ನನ್ನಯ ಜೀವನ ನನಗೇ ಇರಲೀ
ಎಂದಿಗೂ ನನ್ನನೆನಪು ಬಾರದಿರಲೀ
ಮರೆತುಬಿಡು ಮರೆತುಬಿಡು/ದೂರವೇ/
- ಚೇತನ್ ಬಿ ಸಿ
14 Feb 2016, 02:33 pm
ಪ್ರೇಮಿ ನಾನೆನ್ನಲು ತಾಜಮಹಲ್ ಕಟ್ಟಬೇಕಿಲ್ಲ
ಪ್ರೀತಿ ಶಾಶ್ವತವೆನ್ನಲು ಜೀವ ನೀಡಬೇಕಿಲ್ಲ
ಪ್ರೇಮದೋಲೆಯ ಬರೆಯಲು ರಕ್ತ ಸುರಿಸಬೇಕಿಲ್ಲ
ಅಮರ ಪ್ರೇಮಿಗಳೆನ್ನಲು ಜಗತ್ತಿಗೆ ಸಾರಬೇಕಿಲ್ಲ
ಎರಡು ಹೃದಯಗಳ ಬಡಿತದ ಹೊಸ ಶೃತಿಯು ಒಂದಾಗಲು ಪ್ರತಿದಿನವು ಪ್ರೇಮಿಗಳ ದಿನವೆನ್ನಲು ಶಬ್ದಕೋಶವ ಹುಡುಕಬೇಕಿಲ್ಲ...
- Irayya Mathad
14 Feb 2016, 12:20 pm
ನನ್ನ ಮುದ್ದು ಕಂದನೆ ನಗುತಿರು ನೀನು
ನಿನ್ನ ನಗುವಿನಲಿ ಕಾಣುವೆ ನನ್ನನೆ || ಪ ||
ಚಂದಿರನ ತಂದು ಕೊರಳಲಿ ಹಾಕುವೆ
ತಾರೆಗಳ ತಂದು ಗೆಳೆಯರ ಮಾಡುವೆ
ನಲಿಯುತ ನೀನು ಮಡಿಲಲಿ ಬಂದೆ ನನ್ನ
ಬಾಳಿಗೆ ನೀನು ಬೆಳಕಾಗಿ ನಿಂದೆ
ನಿನ್ನ ಪುಟ್ಟ ಹೆಜ್ಜೆಯಲಿ ನಗುವನು ಕಂಡೆನಾ
ಮರೆತೊದೆನು ನಾ ಕಹಿ ನೆನಪನ್ನ
ಸೂರ್ಯನ ಕಂಗಳು ತುಂಬಿಹೆ ನಿನ್ನಲಿ
ಸಂತೋಷದ ನಗೆ ಕಡಲು ನಿನ್ನಲಿ ಬೆರೆತಿಹೆ
ಆಡುವ ಮಾತಿನಲಿ ಕೇಳುವ ನುಡಿಯು
ಅಮ್ಮ ಎಂದರೆ ಸಾಕು ನನ್ನ ಜನ್ಮ ಧನ್ಯವು
ಗೋಕುಲ ಕೃಷ್ಣನಂತೆ ಬಂದೆ ನೀ ನನ್ನ ಬಳಿಗೆ
ಬೆಣ್ಣೆಯ ಕದ್ದ ಕೃಷ್ಣ ಕಳ್ಳನೊ ಕಳ್ಳನೊ
ಯಾರು ಇಲ್ಲದ ಜೀವನ ತುಂಬಿದೆ ನನ್ನ ಮಡಿಲ
ಜೀವಕ್ಕೆ ಜೀವ ನೀಡೊ ಜೀವನ ತಂದೆ ನೀ....
- Irayya Mathad
13 Feb 2016, 08:15 pm
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಕಾಡು ಕೊತ್ತಲಲ್ಲಿ
ಮಂಜು ಬೆಟ್ಟದಲ್ಲಿ
ಅರೆ ಹೊಟ್ಟೆಯಲ್ಲಿ
ಕಿರು ನಿದ್ದೆಯಲ್ಲಿ.
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ದೇಶ ಗಡಿಯಲ್ಲಿ
ಭಾಷೆ ಬಾರದೆಡೆಯಲ್ಲಿ
ರೋಷದ ಮಡುವಲ್ಲಿ
ಧೈರ್ಯದ ಸಿಡಿಯಲ್ಲಿ
ಕೊನೆವರೆಗೂ
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಮಂಜಿನಡಿಯಲ್ಲಿ
ರಕ್ಕಸ ಚಳಿಯಲ್ಲಿ
ಹಿಂಜಿದ ನರಗಳಲಿ
ಕುಂದಿದ ಅಂಗಗಳಲಿ
ಆದರೂ ನೀ ಗೆಲ್ಲಬೇಕಿತ್ತು ಸಾವ
ಮರೆಸಬೇಕಿತ್ತು ನಿನ್ನವರ ನೋವ!
(ಮರೆಯಾದ ವೀರ ಯೋಧನ ಹನುಮಂತಪ್ಪ ಕೊಪ್ಪದ ಅವರನ್ನು ನೆನೆದು)
- ಶ್ರೀಗೋ.
11 Feb 2016, 11:45 am
ನಾನು ಎಸ
ನೀನು ಎಸ
ಮತ್ಯಾಕೆ ಮಿಸ
ಕೂಡು ಒಂದು ಕಿಸ
- Shivakumar
10 Feb 2016, 06:04 pm
ಸ್ನೇಹ
ನಗದು !
ಜಮ
ಮಾಡಿದಸ್ಟು
ಹೆಚ್ಚಾಗುತ್ತೆ !
ಪ್ರೀತಿ
ಸಾಲ !
ಹೆಚ್ಚಾದಸ್ತ್ತು
ವಿಷವಾಗುತ್ತೆ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 11:41 am
ಪಾಶ್ಚಿಮಾತ್ಯ
ದೇಶದೊಳ್
ಅಭಿವ್ಯಕ್ತಿಗೆ
ಒತ್ತು !
ನಮ್ಮ ದೇಶದೊಳ್
ತಿರುಳಿಗಲ್ಲಾ
ಸಿಪ್ಪೆಗಾಗಿ
ಕಸರತ್ತು !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 11:32 am
ಮಾತು
ಶ್ರೇಷ್ಟ
ಸಂಗೀತ !
ಇದು
ನನ್ನ
ಇಂಗಿತ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 11:21 am