Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬೇಡಬೇಡ ಅಂದುಕೊಂಡೆ
ಪ್ರೀತಿಯಲ್ಲಿ ಸಿಕ್ಕಿಕೊಂಡೆ
ಹಾಳಾಗೋಯ್ತು ನನ್ನ ಮಂಡೆ
ಸಿಕ್ಕಿದಳವಳು ಒಂದು ಸಂಡೆ
ಕೈ ಕೈ ಹಿಡಿದುಕೊಂಡು
ಕಣ್ಣು ಕಣ್ಣು ನೋಡಿಕೊಂಡು
ಪ್ರೀತಿಯನ್ನು ಹಂಚಿಕೊಂಡು
ನಿರ್ಗಮಿಸಿದೆವು ಬೈ ಬೈ ಹೇಳಿಕೊಂಡು
ನಿದ್ದೆ ಇಲ್ಲ..ಊಟ ಇಲ್ಲ..
ಮನಸ್ಸು ತುಂಬ ಅವಳೆ ಎಲ್ಲ
ಕನಸಿನಲ್ಲೂ ಬರುವುದೊಲ್ಲ
ಅಂದಿನಿಂದ ಅವಳ ಪತ್ತೆಯಲ್ಲ..
ಮನಸ್ಸು ತುಂಬ ಕೆಟ್ಟುಹೋಗಿ
ನಾನು ಆದೆ ಪ್ರೇಮರೋಗಿ
ಕಂಡೆ ನಾನು ರೈಲು ಬೋಗಿ
ಸಿದ್ಧನಾದೆ ತಲೆಯ ಬಾಗಿ...
ಅಷ್ಟರಲ್ಲಿ ನನಗಾಯ್ತು
ಅವಳಿಲ್ಲದಿದ್ರೆ ಅಷ್ಟೆಹೋಯ್ತು
ಅವಳಿಗಾಗಿ ನಾ ಸಾಯಬೇಕೇ?
ನನ್ನ ಜೀವ ಕಳೆಯಬೇಕೇ?
ಇಲ್ಲ ಸಾಕು ಪ್ರೀತಿ ಆಟ
ಮಾಡಬೇಕವಳ ಮದುವೆ ಊಟ
ಇದುವೆ ನನ್ನ ಕೊನೆಯ ಹಠ.
- AsiddeeqN
22 Aug 2016, 10:18 pm
ಬಾಳೆಂಬ ತೊಟ್ಟಿಲಲ್ಲಿ
ಬಾ ನನ್ನ ಚಂದಮಾಮ!!
ಉದರದ ಮನೆಯಿಂದ
ಅಂಗೈಗೆ ಜಾರಿ ಬಂದ!!
ತಿಂಗಳ ಎಣಿಸಿ ಕಳೆದು
ಹರುಷವ ಹೊತ್ತು ತಂದ!!
ನಕ್ಷತ್ರ ಲೋಕದಿಂದ
ನಗುವನ್ನು ಕರೆತಂದ!!
ನಗುವನ್ನು ನನ್ನ ಮಡಿಲ
ಕೂಸಾಗು ನಡೆ ಎಂದ!!
ಮಾತೆಯ ಮಡಿಲಿನಲ್ಲಿ
ಮಮತೆಯ ಭಾವ ತಂದ!!
ಹುಣ್ಣಿಮೆಯ ಚಂದ್ರನಿಂದು
ಧರೆಯಲ್ಲಿ ಜನ್ಮ ತಳೆದ!!
ಕಾರ್ಮೋಡ ಸರಿಸಿ ತಾನು
ಇರುಳಲ್ಲೂ ಬೆಳಕ ತಂದ!!
ಎಂದೆಂದೂ ಅಳಿಸದಂತಹ
ಕರುಳಿನಾ ಬಂದ ತಂದ!!
- ಪಿ.ಜಿ.ಜ್ಯೋತಿ
22 Aug 2016, 09:08 pm
ಹಗಲಲ್ಲಿ ಶಾಖೆಗಳಿಗೆ
ಪುಷ್ಠಿಯ ಶಾಖ ನೀಡೋ
ಸೂರ್ಯನಂತೆ
ರಾತ್ರಿಯಲ್ಲಿ ತಾಪ ಸಹಿಸಿ
ತಂಪಿನ ಅಮೃತವ ನೀಡೋ
ಬೆಳದಿಂಗಳ ಚಂದ್ರನಂತೆ
ನನ್ನ ಪ್ರೀತಿ.
- ಸಾ.ರಾ.ಜ್ಞಾ
22 Aug 2016, 04:35 pm
ಮತ್ತೆ ಹಾಡುವುದೇ ಕೋಗಿಲೆ?
ಮನದ ದುಗುಡವ ಅಳಿಸಿ
ಸುಡುವ ಕಣ್ಣೀರ ಒರೆಸಿ
ಮತ್ತೆ ಹಾಡುವುದೇ ಕೋಗಿಲೆ?
ಮತ್ತೆ ಹಾಡುವುದೇ ಕೋಗಿಲೆ?
ನಿರಾಸೆಯ ನೋವ ಸರಿಸಿ
ವಿಧಿಯ ಅಟ್ಟಹಾಸವ ಮರೆಸಿ
ಮತ್ತೆ ಹಾಡುವುದೇ ಕೋಗಿಲೆ?
ಮತ್ತೆ ಹಾಡುವುದೇ ಕೋಗಿಲೆ?
ದಣಿದ ಮನಸಿಗೆ ಸಂತೈಸಿ
ಬಾಯಾರಿದ ಬಯಕೆಗೆ ನೀರುಣಿಸಿ
ಮತ್ತೆ ಹಾಡುವುದೇ ಕೋಗಿಲೆ?
- shashidhar
22 Aug 2016, 10:47 am
ನನ್ನ ಹೃದಯದ ಗುಡಿಯಲ್ಲಿ
ಒಬ್ಬಂಟಿ ದೇವರು ನೀನು
ಗೆಳೆಯ ನಿನ್ನ ಪೂಜಿಸುತ್ತಲೇ
ಜೀವಿಸುತ್ತಿರುವೆ ನಾನು!!
ಪೂಜೆಗುಂಟು ನೂರು ದೈವ
ಪ್ರೀತಿಗೆ ನೀ ನನ್ನ ದೈವ
ಗೆಳೆಯ ನಿನ್ನ ಪ್ರೀತಿಸುತ್ತಲೇ
ಆರಾಧಿಸುತ್ತಿರುವೆ ನಾನು!!
ಮನಸೆಂಬ ಮಂಟಪದಲ್ಲಿ
ಪ್ರೇಮವೆಂಬ ಗೋಪುರ ಕಟ್ಟಿ
ನೆಲೆಸಿರುವ ದೈವ ನಿನ್ನ
ಪಾದದಡಿಯ ಹೂವು ನಾನು!!
- ಪಿ.ಜಿ.ಜ್ಯೋತಿ
22 Aug 2016, 09:29 am
ಹೆಣ್ಣ
ಸೊಬಗ ಬಣ್ಣ
ನೋಡಣ್ಣ
ಚಂದವಣ್ಣ!!
ಮೂಡಣದಿ
ಮೂಡೋ ಸೂರ್ಯ
ಬೆರಗಾಗಿ
ನಿಂತನಲ್ಲಾ!!
ಈ ಅಂದವತಿಯ
ಚಂದಾನ ನೋಡಿ
ತನ್ನ ಕೆಲಸ
ಮರೆತನಲ್ಲಾ!!
ಈ ಹೆಣ್ಣ ಕಣ್ಣ
ನೋಡೋದೆ ಚೆನ್ನ
ಮುಂಗುರುಳು ಇಹುದು
ಆ ಜೇನ ಬಣ್ಣ!!
ಮುತ್ತಂತ ದಂತ
ಸವಿಯಾದ ತುಟಿಯ
ಮೇಲಿರುವ
ಮುಗುಳು ಚಂದಾ!!
ನೋಡೋದೆ
ಚಂದ ಚಂದ
ಸೋಗಸಾದ
ಈ ಅಂದ!!
- ಪಿ.ಜಿ.ಜ್ಯೋತಿ
22 Aug 2016, 09:19 am
ಬರುವುದಾದರೆ ಬಾ ಬೆಳಕೆ ಮನೆಗೆ
ತುಂಬಿಬಿಡು ಬಂದು ಮನಕೆ
ಕತ್ತಲಿನ ಭಯವ
ಕತ್ತಲಲೆ ಕಳೆದು
ಮತ್ತೆ ಹೊತ್ತಗೆಯ
ಜ್ಞಾನವನೆ ಮುಡಿದು
ಕಾಳರಾತ್ರಿಯ ಕೆಟ್ಟ ನೋವಿನ ನೆನಪು
ಭಿತ್ತಿಯಲಿ ಚಿತ್ರಿಸಿದ ಋಣವನ್ನು ಸುಟ್ಟು
ಮಂತ್ರದ ಜ್ಞಾನರಸ ತಂತ್ರದ ಗಾಯತ್ರಿನೀನು
ಕತ್ತಲಿನ ನಶೆಯಿಂದ ಎತ್ತರಕೆ ಬೆಳೆದ ದಿಡ್ಡೆಗಳನೊಡೆದು
ಸತ್ತವನ ಸತ್ಯವನು ಮರೆತು
ಬೆಳೆದ ಕಳೆಯನು ಕಿತ್ತು
ತತ್ತರಿಸುವ ನನ್ನ ಮನದ ಭಯವ ತರಿದು
ಇಳಿದು ಬಾ ನನ್ನ ಹೃದಯಕೆ ಓ ಜೀವ ಬೆಳಕೆ.
- Sandeep Vishwas
21 Aug 2016, 10:02 pm
ಗೆಳೆತನಕೊಂದು ಹೊಸತನ ತಂದು
ನವಭಾವಗಳ ಬೆಸೆಯಲು ಬಂದ
ಗೆಳತಿಯು ನೀನಾ.....
ಸ್ವಪ್ನದ ಸಾಲಲಿ
ನೆನಪಿನ ನೆಪದಲಿ
ಉಸಿರನು ಕೂಡಿಸಿ
ಹುಣ್ಣಿಮೆ ಚೆಲ್ಲಿದ ಚಂದ್ರಿಕೆ ನೀನಾ.......
ಮನಸಿನ ಮಾಹಿತಿ
ದಿನವಿಡಿ ಪಡೆಯುತ
ಮರೆಯದ ಸಂಭ್ರಮ
ಕೊಡುಗೆ ನೀಡಿದ ಕನ್ನಿಕೆ ನೀನಾ.......
ಭುವಿಯಲಿ ಜಾರಿದ
ಹನಿಹನಿ ಮಳೆಯನು
ಸರದಲಿ ಪೋಣಿಸಿ
ಮಾಲೆಯ ಕಟ್ಟಿದ ಸಾಹಸಿ ನೀನಾ......
ಒಲವಿನ ಕಾವ್ಯವ
ರಚಿಸುವ ಕಲೆಯನು
ಬೆಳೆಸುತ ನನ್ನಲಿ
ಭಾವನೆ ತುಂಬಿದ ಮಾನಸಿ ನೀನಾ.......
- ಆನಂದ್
21 Aug 2016, 09:41 pm
ಮಧುರ ಕಾವ್ಯ ದ
ಸು೦ದರಿ ಅವಳು...
ಚ೦ದಿರನ ಬೆಳದಿ೦ಗಳು
ಅವಳ ಮೊಗದ ಮು೦ಗುರಳು...
ಇನ್ನೂ ಅವಳನ್ನು ಪ್ರತಕ್ಷ ಕ೦ಡ
ನನಗೆ ಆಗಾದಿರುವುದೇ ಅರಳು ಮರಳು...
ಸಾಗದಿರುವುದೇ ಅವಳ ಜೋತೆ
ನನ್ನ ಜೀವನದ ಉರಳು?...
- ವಲ್ಲಭ..
21 Aug 2016, 07:14 pm
ಚಂದನದಲಿ ಹೊಂಬೆಳಕಲಿ
ಕಸ್ತೂರಿಯ ಕಂಪನದಲಿ
ಒಮ್ಮೇ ತಿರುಗಿ ನೋಡು
ನೀನೊಮ್ಮೆ ತಿರುಗಿ ನೋಡು!!
ಮಾಮರದಲಿ ಮೈ ಮರೆಯುವ
ಕೋಗಿಲೆಗಳ ಆ ಗುಂಪಲಿ
ಒಮ್ಮೇ ಸೇರಿ ನೋಡು
ನೀನೊಮ್ಮೆ ಸೇರಿ ನೋಡು!!
ಬೇಲೂರಿನ ಆ ಶಿಲೆಗಳ
ಕೋಲಾರದ ಹೊನ್ ಸಿರಿಗಳ
ಒಮ್ಮೇ ಕಲೆತು ನೋಡು
ನೀನೊಮ್ಮೆ ಕಲೆತು ನೋಡು!!
ಅಬ್ಬರಿಸುವ ಸಾಗರವಿದೆ
ಹುಬ್ಬೇರಿಸೊ ಆ ತೀರದಿ
ಒಮ್ಮೇ ಸಾಗಿ ನೋಡು
ನೀನೊಮ್ಮೆ ಸಾಗಿ ನೋಡು!!
ಈ ನಾಡಿನ ಈ ನುಡಿಗಳ
ಆಹ್ಲಾದಿಸುವ ಒಲುಮೆಯ
ಒಮ್ಮೇ ಕೇಳಿ ನೋಡು
ನೀನೊಮ್ಮೆ ಕೇಳಿ ನೋಡು!!
ನಿಸ್ವಾರ್ಥದ ಅಮೃತದಲಿ
ಸತ್ಯಾರ್ಥದ ಸಂಜೀವಿನಿ
ಒಮ್ಮೇ ಆಗಿ ನೋಡು
ನೀನೊಮ್ಮೆ ಆಗಿ ನೋಡು!!
- ಪಿ.ಜಿ.ಜ್ಯೋತಿ
21 Aug 2016, 11:02 am