Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಗೆಳತಿ
ನೀನೆತಾನೆ
ಕೊಟ್ಟಿದ್ದು
ಮುತ್ತಿಡಲು
ಅಪ್ಪಣೆ !!
ಕಾರಣ
ನಾ ಬರೆವ
ಹನಿಗವನಗಳೆಲ್ಲ
ನಿನಗೆಯೇ
ಅರ್ಪಣೆ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 09:09 am
ದೇವಾನುದೇವತೆಗಳೇ
ಮಾಡುವಂತಿದ್ದಿದದರೆ
ಭಹಿರ್ದೇಶೆ !
ಅನ್ನಕ್ಕಾಗಿ ಪರದಾಡುವ
ಜೀವಗಳು ತೆಗೆಯುತ್ತಿದ್ದವು
ನೈವೆಧ್ಯ ಬೇಡವೆಂಬ
ವರಸೆ !
ಆಗ ದೇವತೆಗಳೇ
ಹೋಗಬೇಕಾಗುತ್ತಿತ್ತು
ವಲಸೆ !!!!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 08:51 am
ಅಂತರಂಗದ
ತಿಪ್ಪೆಯಲ್ಲಿ
ಬೆಳಕಿನ
ಪೊರಕೆ !
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 07:40 am
ಆಸರೆಗಾಗಿ
ಪೋರೆದವನು
ಹೊಲಿದು ಕೊಟ್ಟ
ದೀರಿಸು!!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 06:10 am
ಹುಟ್ಟು ಸಾವು
ಅವಳಿ ಜವಳಿ
ಒಬ್ಬರಿಗೊಬ್ಬರು
ಭೇಟಿಯಾಗಿದ್ದರೇನು ಕೇಳಿ !?
ಇವುಗಳ ಮದ್ಯೆಯೇ
ಹುಡುಕು ಹುಡುಕು
ಹುಡುಕುವುದೇ
ಬದುಕು !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 05:53 am
ಉಸಿರಾಗಿ ನಿಲ್ಲುವ ಪ್ರೀತಿ
ಉಸಿರು ನಿಲ್ಲಿಸಿದರೆ !
ಸೇವಿಸುವ ಅಮೃತವೇ
ಸೇವಿಸಿದೊಡನೆ ವಿಷವಾದರೆ !
ಕರುಣಿಸಿದ ಕೈಗಳೇ
ಕೈಎತ್ತಿ ಕೊಂದರೆ !
ಪೋಷಿಸುವ ಪಂಚಭೂತಗಲೆ
ಫಲಾಪೇಕ್ಷೆ ಬೇಡಿದರೆ !
ಓ ಎನ್ನ ದೈವ ಗುರುವೇ
ಸ್ವಿಕರಿಸುವರ್ಯಾರು ನಾ ದುರಿತ್ತರೆ!!!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 05:47 am
ಚುನಾವಣೆ
ಬಂತು ಬನ್ನಿ
ಅಮ್ಮ
ತಾಯಂದಿರೆ !
ಪ್ರಜಾಪ್ರಭುತ್ವದ
ಬಟ್ಟೆ ಕಳಚಿ
ತಂದಿದ್ದೇವೆ
ಸೀರೆ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 05:31 am
ನಿನ್ನ ಏಳಿಗೆ ಕಂಡು
ನಿನಗಾಗದವರು ಎನ್ನುವರು
ಇವನಾಗಬಾರದು
ಉದ್ಧಾರ !
ನೀ ಹಾಗೆಯೇ ಧೃತಿಗೆಡದೆ
ಹೆಜ್ಜೆ ಹೆಜ್ಜೆಗೆ ಮೇಲೇರು
ನಿನಗಾಗದವರೇ ಉಚ್ಚರಿಸುವರು
ಶಹಭ್ಹಾಶ್ ಎಂಬ
ಉದ್ಘಾರ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 05:22 am
ಮಾನವಿಯತೆಯ
ಹಂಗು
ತೊರೆದು !
ಸಂಬಂಧಗಳ
ಕೀಲಿ
ಮುರಿದು !
ಮನುಷ್ಯತ್ವವ
ಮರೆತು !
ತನ್ನತನವ
ತೊರೆದು !
ಕೋಪದ
ಕೈಯಲ್ಲಿ
ತಾಪಕ್ಕೆ
ಒಳಗಾಗುವುದು !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 02:26 am
ಮಾನವೀಯ
ಮೌಲ್ಯಗಳು
ನಗ್ನವಾಗಿ ಬೀದಿಯಲಿ
ಬಿದ್ದು
ವದ್ದಾದುತಿವೆ. !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
09 Feb 2016, 03:32 am