ನೀ ದೂರದಾಗ ನಾನು
ನಿನ್ನ ಹತ್ತಿರವಿದ್ದೆ ಅದು ನಿನ್ನೊಳಗೆ
ನೀ ಕನಸ ಕಾಣುತ್ತಿದ್ದೆ
ನಾ ನಿಮ್ಮೆದುರು ನಿಲ್ಲುತ್ತಿದ್ದೆ
ಕಣ್ಣುರೆಪ್ಪೆ ತಡೆಯುವ ಮುನ್ನ
ಕೈ ನೀಡು ಬಾಚಿ ಅಪ್ಪುವೆ
ಕನಸ ತೊರೆದು ಮೆಲ್ಲ ಕೂಗು
ಮುತ್ತು ಮಳೆಯ ಸುರಿಸುವೆ
ಮಳೆಬಿಲ್ಲಿನ ಎರು ಕಡೆಯ ಅಂಚಲ್ಲು
ನೆನಪುಗಳು ಕನಸುಗಳು
ಬಣ್ಣಗಳನ್ನು ಒಟ್ಟುಗೂಡಿಸಿ ಬಿಳಿಯ ಬಣ್ಣವಾಗುಸಿದರು
ಅದೆ ಕನಸು ಅದೆ ನೆನಪು
ಒಮ್ಮೆ ಬಣ್ಣಗಳನ್ನ ಬೇರ್ಪಡಿಸಿ ಏಳು ಬಣ್ಣಗಳ
ಸುಂದರ ಬಿಲ್ಲಾಗಿಸಿದರು.
ಅದೆ ಕನಸು ಅದೇ ನೆನಪು
ನನ್ನನ್ನ ಹೇಗಾದರೂ ಬದಲಾಯಿಸು
ಖುಷಿಯಾದರು ಸರಿ ದುಃಖಿಯಾದರು ಸರಿ
ಅದೇ ಕನಸು ಅದೇ ನೆನಪು
ಕೆಲವು ಮೌನ ಕೆಲವು ಸ್ಪರ್ಶ
ಕೆಲವು ಮಾತು ಕೆಲವು ಪ್ರೀತಿ.