Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಡುಗಾಟ

ರಾಜಕಾರಣಿಗಳು
ಕಲಾವಿದರು !
ಮತದಾರರು
ಪ್ರೇಕ್ಷಕರು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:13 pm

ಪರಿಶುದ್ದತೆ

ನಾಡ
ವನಸುಮವು
ಬಿರಿಹುದು
ಪರಿಮಳ !
ಆದರೋಳು
ನಾವಾಗಬೇಕು
ಒಂದೊಂದು
(ಎಸಳು) ದಳ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:09 pm

ಅನುಭವ

ಬಾಳ
ಪಯಣಕೆ
ಬೇಕಾದ
ಹರಿಗೋಲು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:04 pm

ಹೃದಯ...

ನಾ ಸತ್ತ ಮೇಲೂ ಹೇಳುವೇ
ಗೆಳತಿ ಆ ಯಮರಾಜನಿಗೂ,
ನನ್ನಳಗೇ ಇರುವ ನಿನ್ನಯ
ಕಹಿ ನೆನಪುಗಳ ಹೃದಯವ
ಜೋಪನವಾಗಿಡು ಎಂದು .....
ನನಗೇನಾದರು ಮರು ಜನುಮ
ಇದ್ದರೆ ಮತ್ತೆ ಅದೇ ಹೃದಯವ
ಪಡೆಯುವ ಸಲುವಾಗಿ ...

- ಪ್ರಸನ್ನ ಕುಮಾರ್

07 Feb 2016, 06:23 pm

ವಿಮೆ

ಪ್ರೇಮ ವಿಮೆ
ಪಡೆಯಲು
ಬಯಸಿದ್ದೇನೆ !
ಏಕೆಂದರೆ
ಭಾವನೆಗಳನ್ನು
ಉಸಿರುಗಟ್ಟಿಸಿ
ಕೊಂಡಿದ್ದೇನೆ !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

07 Feb 2016, 11:15 am

ವೇದನೆ

ಗೆಳತಿ
ಅಂದು ಬಿಟ್ಟುಹೊದೆ
ನಿನ್ನ ನೆನಪುಗಳ
ಕಂತೆ !!
ಇಂದಿಗೂ
ಅದೇ
ಚಿಂತೆ !
ಭಕ್ಷಿಸಲು
ಹಾತೊರೆಯುತಿವೆ
ಚಿಂತೆಗಳ
ಚಿತೆ !!!


- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

07 Feb 2016, 11:11 am

ಮಿತಿ

ಅರಿತರೆ ಜಿಹ್ವೆಯ
ಸುಂದರ
ಸೋಗು !!
ಇರಬಲ್ಲದು
ಬದುಕಲ್ಲಿ ಸದಾ
ನಗು !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

07 Feb 2016, 11:05 am

ಮನವಿ

ಸ್ಪಂದಿಸು
ಪ್ರೀತಿಗೆ !
ಸಂಧಿಸು
ಎದೆಗೆ !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

07 Feb 2016, 10:58 am

ಅಮಲು

ಎನ್ನ
ಬದುಕಿನ
ದಾರಿ
ಕವಲು !
ಕಾರಣ
ನಿನ್ನ
ಪ್ರೀತಿಯ
ಅಮಲು !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

07 Feb 2016, 10:56 am

ತುಡಿತ - ಹಿಡಿತ

ಹೃದಯದ
ಪ್ರತಿ
ಮಿಡಿತದಲಿ
ನನ್ನವಳನ್ನು ಕಾಣುವ
ತುಡಿತ !
ಕಾರಣ
ಪ್ರತಿ ಮಿಡಿತಕು
ಅವಳೇ
ಹಿಡಿತ !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

07 Feb 2016, 10:52 am