Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೇಣದ ಬತ್ತಿ

ಉರಿವ ಮೇಣದ ಬತ್ತಿ
ಒಳಗೆ ದಾರವು ಹೊತ್ತಿ!!
ನೀಗಿ ಕತ್ತಲ ಜಗವ
ತೋರಿ ಬೆಳಕಿನ ನಗೆಯ!!

ತನ್ನ ಸುಟ್ಟರು ಸರಿಯೇ
ತಾನು ಕರಗಿದರಯೆ!!
ತನ್ನ ಬುಡದಲಿ ಬೆಳಕು
ಇಲ್ಲದಿದ್ದರೆ ಉರಿವೆ!!

ಗಾಳಿಗಂಜಿದರೂನು
ಆರದುರಿಯುವೆ ನೀನು!!
ಉರಿದು ಹೋಗುವೆ ನೀನು
ಕರಗಿ ಜಗದಲಿ!!

- ಪಿ.ಜಿ.ಜ್ಯೋತಿ

20 Aug 2016, 03:50 pm

ಇರುಳ ಬೆಳಕು

ಇರುಳಲ್ಲಿ ಒಂಟಿಯಾಗಿ
ಬೆಳಕನ್ನು ಕಾದು ನಿಂತೆ!!
ನಿನ್ನ ಹೆಸರ ನೆಲದಿ ಬರೆದು
ಮಳೆ ಹನಿಯ ತಡೆದು ನಿಂತೆ!!

ಕಾಗದದ ದೋಣಿಯಲ್ಲಿ
ಪಯಣಿಸುವ ಆಸೆ ಬಂತು!!
ತಾರೆಗಳ ಮಾಲೆ ಮಾಡಿ
ನಿನಗಾಗಿ ಹಿಡಿದು ಕಾದೆ!!

ಎದೆಯ ವಿರಹ ಅರಿತು
ಕಣ್ಣೀರು ಜಿನುಗಿ ಬಂತು!!
ಕಣ್ಣೀರ ತಡೆದ ಕೈಯಲ್ಲಿ
ನಿನ್ನ ಚಹರೆ ಮೂಡಿ ಬಂತು!!

ನಿನ್ನ ಸನಿಹ ಬಯಸಿದಾಗ
ತಂಗಾಳಿ ಬೀಸಿ ಬಂತು!!
ನನ್ನ ಕೈಗೆ ಎಟುಕದಂತೆ
ಬಳಿ ಸೋಕಿ ದೂರ ಹೋಯ್ತು!!

- ಪಿ.ಜಿ.ಜ್ಯೋತಿ

20 Aug 2016, 03:06 pm

ದುಃಖ


ಮನವು ನೋಯುತಿದೆ
ಮನಸ್ಸನ್ನೇ ಯಾರೋ
ಮುಷ್ಟಿಯೊಳಗಾಗಿಸಿದ ಅನುಭವ
ಬಯಸಿದ್ದು ಸಿಗದಾಗಲೂ
ಸಿಗುವಂತದ್ದು ವಿರಳವಾದರೂ
ಮನಸ್ಸಿಗೆ ಅರ್ಥವಾಗುವುದೇ ಇಲ್ಲ
ಹಂಬಲಿಸುತ್ತಿದೆ
ಹಾತೊರೆಯುತ್ತಿದೆ
ತನ್ನ ನೋವನ್ನು ಯಾರೊಂದಿಗೆ
ಹಂಚಲಿ ?
ಮರುಗುವ ಮನವ
ಸಂತೈಸಿ
ತಂಗಾಳಿಯ ಸಂದೇಶ ಹರಡಿ ಸಾಂತ್ವವನ್ನೀಯಲು ಯಾರಿಗೆಲ್ಲ ಸಾಧ್ಯವಿದೆ ?
ದುಃಖಗಳ ಸಾಮ್ರಾಜ್ಯವ
ಭೇದಿಸಿ
ಸಂತೋಷರಾಜ್ಯ ನಿರ್ಮಾಣ ಮಾಡಿ
ಜಯಗಳಿಸುವವರೇ ನೈಜ
ಜಯಶಾಲಿಗಳು
ಅದಕ್ಕೆ ದೊರಕುವ ಪರಿಸರವೇ "ವರ"
ವರವಿಲ್ಲದ ಪಯಣದ
ಕಾರ್ಯ ಸಾಧನೆಯು ಅಸಾಧ್ಯ...

- ಶಾಹಿದ್ ಉಪ್ಪಿನಂಗಡಿ

20 Aug 2016, 08:22 am

ಸತ್ತಿದ್ದ.....

ಕತ್ತಲೆಯ ಮೌನದಲಿ ಸೀಳಿ ಹೋದವನ ಮುಂದೆ ಗದ್ದಲು - ಅರಚಾಟ

ಬೆತ್ತಲೆ ಸಂತೆಗಿಳಿದು ಧಾರಣೆಗಳ
ಹೋಯ್ದಾಟದೊಂದಿಗೆ ಸಿಗುವ - ಸಿಗದ ಪದಾರ್ಥಗಳಿಗೆಲ್ಲ ಕೈ ಹಾಕಿದವ

ಸತ್ತ ನಂತರ ಕಿವಿಗಳಿದ್ದರೆ ಇದ್ದವರ ಎರಡೆರಡು ಮುಖ ಧ್ವನಿ ಕೇಳ್ತಿದ್ದ.
ಕಣ್ಣಿದ್ದರೆ ಹರಿವ ಕಣ್ಣೀರಲಿ ತನ್ನ ಸಾರ್ಥಕತೆ ಕಾಣ್ತಿದ್ದ.

ಮೂಲೆಯಲಿ ಎಲೆಯಾಟವಾಡುವ ಪುಂಡರ, ಸಾರಾಯಿ ನಶೆಯಲಿ ಅಲೆದಾಡುವ ಪರಿಚಿತರ ,ಮೌನದಿ ರೋಧಿಸುವ ಗೆಳೆಯರ, ಅತ್ತು ಹೈರಾಣದ ಪ್ರೀತಿ ಪಾತ್ರರ ಬೆಲೆ ತಾ ತಿಳೀತಿದ್ದ ಸತ್ತರೂ ಅಲ್ಲಿದ್ದಲ್ಲಿ.

ಅರಿವಿಲ್ಲದೆಯೇ ಒಳಗೆ ಎಂದಿನಿಂದಲೋ ಸಿಕ್ಕಿಕೊಂಡಿರುವ ಗಾಳಿಗೆ ಬಿಡುಗಡೆ ನೀಡುತಲೇ ಇಲ್ಲವಾದವ, ಉಪಕಾರಿ.

ಸಾಯಲು ಸಾಲುಗಟ್ಟಿ ನಿಂತವರಲ್ಲಿ ತನ್ನ ಪಾಳಿಯೊಂದಿಗೆ ನಿರ್ಗಮಿಸಿದವನ ನೆನೆಯಲು ಇಷ್ಟು ಜನ, ಇಷ್ಟೊಂದು ಒಡೆದ ಮೌನ?


ಐಂದ್ರೇಯ (ಮಹೇಶ).

- MaheshRK

20 Aug 2016, 10:57 am

ಕದನ

ದಿನದ ಪ್ರತಿ ಕ್ಷಣವು
ಒಂದಲ್ಲ ಒಂದು ರೀತಿಯ ಕದನ
ಸಮಯವ ಕಳೆಯಲು
ಚಟುವಟಿಕೆಗಳ ಚಲನ ವಲನ
ಭೂತ ವರ್ತಮಾನ ಭವಿಷ್ಯತ್ಗಳ
ಚಿಂತನ ಮಂಥನ
ಸಿರಿತನದ ಸೋಗಿನಲಿ ಮೆರೆದ
ಬಡತನದ ಬೇಗೆಯಲಿ ಬೆಂದ
ಮನಸುಗಳ ಕಥನ
ಜೀವನದ ಉದ್ದಕೂ ನಾನು ನಾನೆಂಬ ಅಹಂಕಾರಗಳ ಕದನ

- ಆನಂದ್

19 Aug 2016, 09:23 pm

ಅವಳ ಮುನಿಸು

ಅರ್ಥವಿಲ್ಲದ ಕನಸು ಕಾಣುವ
ಮನಸ್ಸು ನನ್ನದು
ಆ ಕನಸುಗಳಿಗೆ ಅರ್ಥ ತುಂಬಲು ಬಂದ
ಮನಸ್ಸು ನಿನ್ನದು
ಕನಸು ನನಸಾಗುವ ವೇಳೆ ತಂದೇ ನೀ
ಮುನಿಸುಗಳ ಸಾಲು
ಅಂದೇ ಶುರುವಾಹಿತು ನನ್ನ
ಕನಸುಗಳ ಸೋಲು

- ಆನಂದ್

18 Aug 2016, 09:31 pm

ಆಶಯ

ಇಂಧ್ರ ಧನುಷ್ಯಿನ
ಹಲವು ಬಣ್ಣಗಳು ಬಿಳಿಯ ಬಣ್ಣವಾಗುವಂತೆ
ಬಣ್ಣ-ಬಣ್ಣದ ಬದುಕ-ಬದುಕಿ
ಬಿಳಿಯ ಬೆಳಕಿನೆಡೆ ಸಾಗುವ.

- ಸಾ.ರಾ.ಜ್ಞಾ

18 Aug 2016, 08:53 pm

ಕಲೆ-ನೆಲೆ

ನಡುಮನೆಗೆ ಬೇಕು ತೊಲೆ
ಅಡುಗೆ ಮನೆಗೆ ಬೇಕು ವಲೆ
ಮನುಷ್ಯನಿಗೆ ಇರುವುದು ತಲೆ
ಅದರಲ್ಲಿ ಇರಬೇಕು ಕಲೆ
ಇದ್ದರೆ ಕಲೆ ಇದ್ದೆ ಇದೆ ನೆಲೆ

- ಆನಂದ್

18 Aug 2016, 06:33 pm

ಪ್ರೇಮದಾಳ

ನೀ ಬಿತ್ತಿದ ಪ್ರೇಮದ ಬೀಜ
ಮೊಳಕೆ ಹೊಡೆದ ವಿಶ್ವಾಸದ ಚಿಗುರು
ಚಿಗುರಿ ಹೊಡೆಯಿತು ಅನ್ಯೊನತೆಯ ಕವಲು
ಅರಳಿ ಪರಿಮಳಿಸಿತು ಸುಖ ಸಂತೊಷದ ಹೂವು
ಬಾಡಿ ಉದುರಿತು ಜೀವನದ ನೋವು

- ಪ್ರಕಾಶ್ ಕೆ. ಬಿ.

18 Aug 2016, 06:13 pm

ಶೂರರು

ಹೂವು ಅರಳುವ ಮುನ್ನ
ಮೊಗ್ಗಿನ ಕತ್ತು ಹಿಸುಕುವಂತೆ
ಹೆಣ್ಣೆಂದು ತಿಳಿದೊಡೆ
ಗರ್ಭದಲ್ಲೆ ಹೊಸಕುವರು
ಸೋಗಲಾಡಿ ಶೂರರು.

- ಸಾ.ರಾ.ಜ್ಞಾ

18 Aug 2016, 09:26 am