Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರಕ್ಷಾ ಬಂಧನ

ದೂರವಿದ್ದುಬಿಡಿ
ಇಂದು ಹುಡುಗಿಯರಿಂದ.
ಕಟ್ಟಿಬಿಟ್ಟಾರು
ರಾಖಿ ನಿಮಗೆ ಪ್ರೀತಿಯಿಂದ

- anup

18 Aug 2016, 08:32 am

ಸಾಹಿತಿ

ಮನದ ಮೂಲೆಯಲ್ಲೋಬ್ಬ ಸಾಹಿತಿ
ಕೈಯಲ್ಲೋಂದು ಲೇಖನಿ ಹಿಡಿದು
ಗೀಚುತ್ತಿದ್ದಾನೆ ತೊಚಿದ ಪದಗಳ
‌ಅಲ್ಲೋ ಇಲ್ಲೋ ದೋಚಿದ ಪದಗಳ
ಕಣ್ಣಿಗೆ ಕಟ್ಟಿದ ಹಾಗೆ ಕಲ್ಪನೆ ಮಾಡಿ
ಎಲ್ಲರು ಮೆಚ್ಚುವ ರೀತಿ ಬಣ್ಣನೆ ನೀಡಿ
ಒಳಾರ್ಥಗಳಿಂದ ಓದುಗರಿಗೆ
ಮಧುವ ಸುರಿದು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ

ಬದುಕಿನ ಜೊತೆಗೆ ಒಲವನು ಇರಿಸಿ
ಒಲವಿನ ಜೊತೆಗೆ ಸಿಹಿ ಕಹಿಯನು ಉಣಿಸಿ
ತನ್ನನ್ನು ಮರೆತು ಎಲ್ಲರಲ್ಲಿಯು ಬೆರೆತು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ
ಸಾಹಿತಿ ಲೇಖನಿಯ ಸಾರಥಿ
ಸಾಹಿತಿ ಭಾವನೆಗಳ ಅಧಿಪತಿ

- ಆನಂದ್

18 Aug 2016, 07:36 am

ರಕ್ಷಾ ಬಂಧನ

ಬಾನಲ್ಲಿ ಕರಿ ಬಿಳಿಯ
ಮೋಡಗಳ ನರ್ತನ
ಭುವಿಯಲ್ಲಿ ಮಳೆರಾಯನ
ಇಂಪಾದ ಗಾನ
ತಂಗಾಳಿಯು ಬೀಸಲು
ಏನೋ ರೋಮಾಂಚನ
ಆಷಾಡದ ಬೀಳ್ಕೊಡುಗೆ
ಕಣ್ಣೀರ ಆಲಿಂಗನ
ಶ್ರಾವಣದ ಸ್ವಾಗತಕೆ
ಹಸಿರು ತಳಿರು ತೋರಣ
ಹಬ್ಬಗಳ ಸರದಿಯು
ಮುಂಬರುವ ದಿನ
ರಕ್ಷಾಬಂಧನದ ಶುಭಾಶಯ
ಹೇಳುವೆ ಈ ಕ್ಷಣ

- anup

17 Aug 2016, 11:16 pm

ಪ್ರೀತಿ

ಕಣ್ಣಿಗೆ ದೂರವಿದ್ದರೆನು
ಹೃದಯದೊಳಿರುವ ಆ ನಿನ್ನ ಸಾನಿಧ್ಯವನು
ಸವಿಯುತಿತ್ತು ಈ ನನ್ನ ಮನವು

ಇಂದು ನೀ ನನ್ನ ದೂರ ತಳ್ಳಿರಲು
ನಿನ್ನ ಆ ಸಾನ್ನಿಧ್ಯದ ನೆನಪಿನಲ್ಲಿ
ಸಾಯುತಿರುವೆ ನಾ ಅನುಕ್ಷಣವು.

- anup

17 Aug 2016, 11:15 pm

ಬದುಕ-ಬಂಡಿ

ಬಂದಿಹೆನೆಂಬ
ದುಃಖದಲ್ಲಿ
ಹೋಗಬೇಕೆಂಬ
ನೆಪವ ಹುಡುಕಿ
ಬದುಕ ಬಂಡಿ ಸಾಗಿದೆ.

- ಸಾ.ರಾ.ಜ್ಞಾ

17 Aug 2016, 09:45 pm

ಯಾರು-ಯಾರಿಗಾಗಿ

ಹೇಳಿ ಯಾರು ಯಾರಿಗಾಗಿ
ಜೀವನದ ಜ್ಯೋತಿಯು ಆರುವಾಗ
ಜೀವವು ಭಾವನೆಗಳ ಸಂಗ ಕ್ಷಣದಲ್ಲೆ ಬಿಡುವಾಗ
ಹೇಳಿ ಯಾರು ಯಾರಿಗಾಗಿ

- ಸಾ.ರಾ.ಜ್ಞಾ

17 Aug 2016, 08:59 pm

ಹುಟ್ಟು ಹಬ್ಬ

ವರಷಗಳು ಕಳೆದಷ್ಟು
ಹರಷಗಳು ಹೆಚ್ಚವುದು ನೀ ಜೊತೆಯಿರಲು.
ಬಿರು ಬಿಸಿಲಲ್ಲಿಯೂ ತಂಪು
ಗಾಳಿಯು ಬೀಸಿದ ಹಾಗೆ ನೀ ಬಳಿಯಿರಲು.
ಒಂಟಿಯಿರುವಾಗಲೂ
ಮಾತಿಗಿಳಿದಂತೆ ನಿನ್ನ ಪ್ರೀತಿ ಜೊತೆಯಿರಲು.
ಭಾಗ್ಯವೇ ಸರಿ ಎನಗೆ ನೀ
ಸೋದರಿಯಾಗಿರಲು.
ನನ್ನೆಲ್ಲಾ ಭಾಗ್ಯಗಳು ನಿನ್ನದೂ
ಆಗಲಿ ಇನ್ನಷ್ಟು ವಸಂತಗಳು ನಿನ್ನ ಬಾಳಿಗೆ ಸಂತಸ ತರಲಿ..
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

- anup

17 Aug 2016, 09:48 am

ಎಚ್ಚರಿಕೆ

ಸ್ವಂತ,ಸುಖ
ಮೋಜಿಗಾಗಿ
selfeeಯ ಮೋಡಿ.
ಸ್ವಯಂ ದುಃಖಕ್ಕೂ
ದಾಳವಾಗಿಹ
selfinish ನೋಡಿ.

- ಸಾ.ರಾ.ಜ್ಞಾ

17 Aug 2016, 09:32 am

ನನ್ನ ಸವಿ ಗನಸನು

ಕತ್ತಲೆಯಲ್ಲಿ ನಾ ಕಂಡೆ ಒಂದು ಸವಿ ಗನಸನು..
ಕತ್ತಲೆಯಲ್ಲಿ ನಾ ಕಂಡೆ ಒಂದು ಸವಿ ಗನಸನು.......
ಕಳೆದು ಕೊಂಡೆ ನಿನ್ನಲ್ಲಿ ನನ್ನ ಮನಸ್ಸನು.
ಅಂಗಲಾಚಿ ಬೆಡುತ್ತಿದ್ದೆ ಬದಲಿಗೆ ಅವಳ ತುಸು ಪ್ರೀತಿಯನು.
ಪ್ರೀತಿಯೆಂಬ ಆಟವಾಡಿ ಒಡೆದಳು ಕನ್ನಡಿಯಂತ ನನ್ನ ಹೃದಯವನು.....
ಕೊನೆಗೆ ಉಳಿಸದೆ ಹೊದಳು ನನ್ನ ಸವಿ ಗನಸನು..... ಕತ್ತಲೆಯಲ್ಲಿ ನಾ ಕಂಡ ಸವಿ ಗನಸನು......

- ಅನಂತನಾಗ ಚಿತ್ತಾಪೂರ ಕಲಬುರಗಿ

17 Aug 2016, 09:18 am

ಮರೆಯುತ್ತಿರುವೆ ನಾನು!

ನಿನ್ನ ದ್ವನಿ ಇಲ್ಲದ ಸದ್ದನು ಕೇಳ ಬಯಸೇನು ನಾನು...
ನೀ ಇಲ್ಲದ ಮುಖವನು ನೋಡಬಯಸೆನು ನಾನು...
ನಿನ್ನ ಆ ಓರೆ ನೋಟದಲಿ ಕಂಡೆ ನಾ ಇಡಿ ಪ್ರಪಂಚವನು...
ನನ್ನ ಜೀವನದಲ್ಲಿ ಆವರಿಸುತ್ತಿವೆ ಕಷ್ಟಗಳು ನಿನ್ನ ಮೂಗಿನ ಹತ್ತಿರ ವಿರುವ ಕಪ್ಪು ಚುಕ್ಕೆಯಂತೆ ನನ್ನನ್ನು.....
ನಿನ್ನ ಕೀರು ನಗೆಯನ್ನು ಕಂಡು ಮರೆಯುತ್ತಿರುವೆ ನಾನು! ನನ್ನ ಎಲ್ಲಾ ಅಲ್ಪ ಕಾಲದ ಕಷ್ಟವನ್ನು.......
ಇಂತಿ ನೀಮ್ಮ ಗೇಳೆಯ ಅನಂತ ನಾನು......

- ಅನಂತನಾಗ ಚಿತ್ತಾಪೂರ ಕಲಬುರಗಿ

17 Aug 2016, 12:32 am