ಬಾನಿನಲ್ಲಿ ಮೂಡಿದ ಚಂದಿರ
ನೋಡಲು ತುಂಬಾ ಸುಂದರ
ಆಗ ಆಕಾಶ ಒಂದು ದೊಡ್ಡ ಚಪ್ಪರ
ನಕ್ಷತ್ರಗಳು ಕಾಣುವವು ಒಂದಲ್ಲ ನೂರಾರು ಸಾವಿರ
ಆದರೆ ಇದು ಇರುವುದಿಲ್ಲ ನಿರಂತರ
ಇದು ದಿನನಿತ್ಯದ ಸಂಚಾರ
ನಮಗ ಯಾಕೆ ಬೇಸರ.......
ಪ್ರತಿ ಜೀವದಲ್ಲೂ ಮರೆಯಲಾಗದ ಸಂಬಂಧ;
ಇದು
ಹಲವು ಜೀವಕ್ಕೆ ಜೀವವೇ ಇದು;
ಇನ್ನು ಕೆಲ ಜೀವಗಳಿಗೆ ಸಂತೋಷ
ಮರೆಸಿದ್ದು ಇದು;
ಹಲವು ಕೆಲವು ಜೋಡಿ ಕೊನೆಗೆ
ಉಳಿವುದು ಇದೇ ......
ಏಕೆಂದರೆ...
ಪ್ರಪಂಚದ ಅತಿ ದೊಡ್ಡ ಶಕ್ತಿ
ಅಂದ್ರೆ ಇದೇ
ಅದರಲ್ಲಿ ನಾನು ಒಬ್ಬಳು
ನಾನು ಪಡೆದಿದ್ದು ಮಗು ಮನಸಿನ
ಮನುಜರು ಅವರೇ..
ಇವರೂ
ನನ್ನ ಗೆಳೆಯರು
ಇದ್ದರೆ ಪುನೀತನಂತೆ ಇರಬೇಕು...
ನಡೆದರೆ ದೇವರು ಮೆಚ್ಚುವಂತೆ ನಡೆದುಕೊಳ್ಳಬೇಕು...
ದುಡ್ಡು ಇದೆ ಎಂದು ಅಹಂಕರವನ್ನು ತೋರಲಿಲ್ಲ...
ದೊಡ್ಡ ವ್ಯಕ್ತಿಯೆಂದು ಸೊಕ್ಕಿನಿಂದ ಮೆರೆಯಲಿಲ್ಲ...
ತನ್ನ ಮಾತಿನಿಂದ ಯಾರ ಮನಸ್ಸಿಗೂ ನೋಯಿಸಲಿಲ್ಲ...
ದೊಡ್ಡ ಹೆಸರಿದೆಯೆಂದು ತೋರಿಸಿಕೊಳ್ಳಲಿಲ್ಲ...
ಈ ನಮ್ಮ ಪುನೀತಾ...
ಇದ್ದದ್ದನ್ನು ಇದ್ದ ಹಾಗೆಯೇ ದಾನ ಮಾಡಿದ...
ಮತ್ತೊಬ್ಬರ ನೋವಿಗೆ ಸ್ಪಂದಿಸಿದ...
ಇನ್ನೊಬ್ಬರ ಜೀವನವು ಸುಖದಿಂದ ಇರಲಿ ಎಂದು ಹಾರೈಸಿದ...
ನಮ್ಮ ನೆಚ್ಚಿನ ಅದ್ಭುತವಾದ ವ್ಯಕ್ತಿ ಅಗಿ...
ದೇವರ ಸರಿಸಮವಾಗಿ ಹೊರಟೆ ಹೋದ...
ಈ ನಮ್ಮ ಪುನೀತಾ...
ಮತ್ತೆ ಹುಟ್ಟಿ ಬಾ ಎಂದು ಹೇಳುವ ಬದಲು...
ನೀನಂತೆ ಬದುಕುವೆವು...
ನೀನಂತೆ ನಡೆಯುವೆವು...
ನೀನಂತೆಯೇ ಇರುವೆವು...
ಮತ್ತೊಬ್ಬರ ಕಷ್ಟಕ್ಕೆ ನೆರವಾಗುವೆವು ಎಂದು ಮನ ಹೇಳಲು ಬಯಸುವುದು...
ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ,
ಮನಗಳಲ್ಲಿ ನಂಬಿಕೆ ಭಾವ ಮೂಡಿಸಿ,
ನಮ್ಮೆಲ್ಲರ ಏಳಿಗೆಯತ್ತ ಕೈ ಮಾಡಿ ಕಳಿಸಿ,
ನೋವಲ್ಲಿದ್ದವರನ್ನ ನಗುಮುಖದಿಂದ
ಸಮಾಧಾನಿಸಿ,
ನಗು ಮುಖದ ರಾಜಕುಮಾರ ಯೇನಿಸಿ,
ಕೊನೆವರೆಗೂ ಶತ್ರುವಿಗೂ ಒಳ್ಳೆಯದೇ ಬಯಸಿ,
ತನ್ನ ಜೀವನ ಪ್ರಯಾಣ ಮುಗಿಸಿ,
ಈ ಕ್ಷಣ ಎಲ್ಲರಿಂದಲೂ ಅಳಿಸಿ,
ಮನುಕುಲದ ಮನಗಳಲ್ಲಿ ನೆಲೆಸಿ,
ನೆನಪಿಸಿಕೊಳ್ಳುತ್ತಾ ಒಂದು ವರ್ಷ ಸಾಗಿಸಿ,
ಹೋದ ಆ (ದೈವ) ಜೀವ ಮರಳಿ ಬರಲೆಂದು ಆ ದೇವರಲ್ಲಿ ನಮಿಸಿ,
*.... ಅಪ್ಪು.....*
ನಾವು.....
ಕಷ್ಟ ಅನುಭವಿಸಿದ್ದೇವೆ ಈ ಹಿಂದೆ
ಅದೊಂದು ರೀತಿಯ ಹುಳಿ;
ಕಷ್ಟ ದಾಟಿ ಮುಂದೆ ಸಾಗಿ
ಸಮಾಧಾನದಿಂದ ತಾಳಿ;
ಎಲ್ಲರಿಗೂ ಸಂತೋಷ ಬಯಸಿ
ಅಂತೆಯೇ ಬಾಳಿ;
ಬೆಳಕಿಗೆ...
ನನ್ನಲ್ಲಿ ಅಡಗಿದ ನೀಚ
ಗುಣ ತುಳಿ;
ಮೋಸದ ಪ್ರಪಂಚಕ್ಕೆ ಬರಲಿ
ಬಿರುಗಾಳಿ;
ಮನುಷ್ಯರಿಂದ ಮನುಷ್ಯ ಹಾಗೇ,
ದೀಪದಿಂದ ದೀಪಕ್ಕೆ ಮಾನವನೇ ನಾಂದಿ
ಆಗುವ ಆವಳಿ;
ಇದೇ ಹರುಷದಿಂದ ಹೊತ್ತಿದ ಪಣತಿ
ಶಾಂತವಾಗದೀರಲಿ ;
ಭಾವ ತುಂಬಿ ಮನಸಾರೆ ಆಚರಿಸೋಣ
ಈ ಬೆಳಕಿನ ಹಬ್ಬ ದೀಪಾವಳಿಯ.....*