ಬಾನ ತುಂಬ ಚುಕ್ಕಿಗಳ ಚಿತ್ತಾರ
ಗೆರೆ ಕೂಡಿಸಲು ನನ್ನವಳು ಕೈ ನೀಡಿ ನನ್ನ ಮುಖ ನೋಡಿದಳು
ನಾನು ಮುಗುಳ್ನಕ್ಕೆ
ಒಂದೆರಡು ಜೋಡಿಸಿ ಮೇಲೆ ನೋಡಿದಳು
ನನಗೆ ಕಂಡದ್ದು ಬರಿ ಚುಕ್ಕೆಗಳು ಮಾತ್ರ ನಡುವೆ ಚಂದ್ರಮನಿದ್ದ ಅವನು ಮೌನವಾಗಿದ್ದರೆ
ಅವಳಲ್ಲಿ ಏನಿತ್ತೋ ಮತ್ತೆ ನನ್ನ ಭುಜದ ಮೇಲೆ ತಲೆಯಿಟ್ಟು ನನ್ನ ಕೈ ಹಿಡಿದು ಆಕಾಶ ತೋರಿಸಿದಳು.
ಒಂದೆರಡು ಚುಕ್ಕೆಗೆ ಗೆರೆ ಎಳೆಸಿದಳು
ನಡುವೆ ಯಾರಿರಲಿಲ್ಲ ಎರಡು ಚುಕ್ಕೆಗಳು ಪಕ್ಕದಲ್ಲೆ ಇದ್ದವು..
ನಾನಿಟ್ಟ ಮುತ್ತ ಕೆನ್ನೆಯ ಮೇಲೆ ತಡಕಾಡಿದಳು ನಾಚುತ್ತ
ಕಣ್ಣುಗಳು ಮುಚ್ಚುತ್ತ ನನ್ನ ಬಟ್ಟೆ ಹಿಡಿದು ದೂರ ತಳ್ಳಿದಳು
ಒಂದೆರಡು ಕ್ಷಣ ಮೌನವೇ ಅವಳ ನಾಚಿಕೆಯ ಮೋಡಿಗೆ ಸಂಜೆ ರಂಗಾಗಿತ್ತು
ಪಕ್ಕದ ಮರ ತಬ್ಬಿಡಿದು ಪಶ್ಚಾತ್ತಾಪ ಪಟ್ಟಳು ಮತ್ತೆರಡು ಮುತ್ತುಗಳು ತಪ್ಪಿಹೋದವೆಂದು.
ತಾವರೆಗಳೆ ನಿನ್ನ ನಯನಗಳಾಗಿ
ಧೃವತಾರೆಯೆ ನಿನಗೆ ಸಿಂಧೂರವಾಗಿ
ಚಂದಿರನೆ ನಿನ್ನ ಅಂದವಾಗಿ
ಶ್ರೀಗಂಧದ ಗೊಂಬೆ ನೀನಾಗಿ
ನನ್ನ ಪ್ರೀತಿ ಪಯಣದಲ್ಲಿ
ಸಪ್ತಪದಿ ತುಳಿದು ನನ್ನ ಬಾಳ ಸ್ನೇಹಿತೆ ನೀನಾದೆ...