ಕೊರಗು ನೀನೇಕೆ ಮೂಡಿಸಬಾರದು ನನ್ನ
ಬಾಳಿನಲ್ಲಿ ಹೊಂಬೆಳಕು
ಸದ್ದಿಲ್ಲದೇ ಮನದಲಿ ಬಂದು
ಕಳೆದುಹೋದ ನೆನಪುಗಳನ್ನು ಮತ್ತೆ ಕೆದಕಿ
ಕಾಲಹರಣ ಮಾಡದೇ ತೋರು ಭರವಸೆಯ ಬೆಳಕು
ಬೇಜಾರಿನ ಗಡಿ ದಾಟಿಸಿ ಸಂತೋಷದ ದಾರಿಯಲ್ಲಿ
ಮುನ್ನಡೆಸುತ್ತಾ
ನನ್ನ ಜೀವನದಲ್ಲಿ ತೋರು ಅಚ್ಚರಿಯ ಬೆರಗು!!!
ಮೂರಂಕಿ ನಾಲ್ಕಂಕಿ ಎಂಟಂಕಿ ಲೆಕ್ಕವ ನಾನೊಲ್ಲೆ
ಅಗೆದಗೆದು ತೆಗೆದ ಸಂಪತ್ತಿನ ಸೂರು ನಾನೊಲ್ಲೆ
ಮಾನ ಸನ್ಮಾನಗಳ ಹೊರೆಯು ನಾನೊಲ್ಲೆ
ಇರುವ ಈ ಮೂರು ದಿನದಲ್ಲಿ ಪರಧನ ಪರಕಾಯದ
ಮೋಹವ ನಾನೊಲ್ಲೆ
ಮಣ್ಣಲ್ಲಿ ಹುಟ್ಟಿ ಮಣ್ಣಾಗಿ ಹೋಗುವ ಈ ದೇಹಕೆ
ಮಣ್ಣಿನ ಋಣ ತೀರಸುವ ಭಾಗ್ಯವ ನೀಡೆನಗೆ ಶ್ರೀ ಹರಿಯೆ ಸಾಕೆನಗೆ ಆಸೆಗಳ ಗಾಳಿ ಗೋಪುರವ...
ಅ ಕನಸ್ಸಿನ ಮೇಲೆ ತುಂಬಾ ಕೋಪ
ಅವಳು ಕಾಣುವ ಕನಸ ನನ್ನ ಬಳಿ ಹೇಳಲಿಲ್ಲ
ನಾನು ಕಂಡ ಕನಸಲ್ಲಿ ಅವಳಿರಲಿಲ್ಲ ಬರಿ ಕಪ್ಪು ಬಿಳುಪು
ಅವಳ ಕನಸ ನಾ ಅರಿಯಲು ಗೊತ್ತಾಗಲಿಲ್ಲ
ಅವಳಿದ್ದ ಕ್ಷಣವಷ್ಟೆ ಕಣ್ಣಾ ಮುಂದೆ
ಕನಸ್ಸಿಗೆ ಜಾಗವಿರಲಿಲ್ಲ
ಅವಳು ಮಾತ್ರ ಕನಸ್ಸಲ್ಲಿ ನನ್ನ ಒಡೆಯನಾಗಿಸಿದಳು
ಹತ್ತಿರ ಬಂದರೆ ಕಿರು ನಗೆ ಬೀರಿ ಜಾರುವಳು
ನನಗೆ ಮಾತ್ರ ಕನಸ ಕಾಣುವ ಹಕ್ಕಿಲ್ಲ. ಅವಳ ಪ್ರಕಾರ....