Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೊನೆಯಾಗೊ ನನ್ನ ಉಸಿರು

ಕೊನೆಯಾಗೊ ನನ್ನ ಉಸಿರಿನ ಕೊನೆವರೆಗು
ಬದುಕುವ ಆಸೆ ನಾ ನಿನ್ನೊಡನೆ
ಸಾವಿನ ಅಂಚಲಿ ಕೂದ
ನಿನ್ನ ಹೆಸರು ನೆನೆದು
ನಾ ಕೊನೆಯ ಉಸಿರ ನೀಗುವೆ ಗೆಳತಿ
ಪ್ರೀತಿ ಕೊಟ್ಟಾ ದೆವತೆ ನೀನು
ಪ್ರೀತಿಯ ಮರೆತು ದೂರ ಸರಿಯ ಬೇಡ ಗೆಳತಿ......

- Pp

06 Aug 2016, 09:19 am

ಅವ್ವ

ದೇವರು ಕಾಣಲ್ಲ ನಿಜ, ,,ತಾಯಿ ಕಾಣಲ್ವ
ತಾಯಿ ಕಂಡ ಮೇಲೆ ದೇವರು ಕಂಡಂಗಲ್ವ

,,,,,,,,,,,,,,,,,,,,,,,,,,,,,,,,,,,,,,,,,

ಹೆತ್ತವಳ ಪಾದದಡಿಯೇ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟು, ,,,,,,,,,,,,,,,,,,,,,,,,,,,,,,,,,,,,,,,,,

- simha shivu

04 Aug 2016, 07:39 pm

ನಾನು

ಬಂಗಾರದ ಬಾಲ್ಯದಲಿ ಕನಸುಗಳ ಬವಣೆ ಕಟ್ಟಿ ,
ಯಶಸ್ಸಿನ ಹಿಂದೆ ಯೌವನ ಸವೆಸುವ
ಯೋಗಿ ನಾನಲ್ಲ ,

ಯಾಕೆಂದರೆ ಯಶಸ್ಸು ಕನಸಲ್ಲ !!!!!

- Prabhath

04 Aug 2016, 11:58 am

ನಾವೆಲ್ಲರೂ ಒಂದೇ..

ಹಿಂದೂಗಳೇ
ದೇವಸ್ಥಾನಗಳ ಬಿಟ್ಟು ಬನ್ನಿ
ಮುಸ್ಲಿಮರೇ
ಮಸೀದಿಗಳ ಬಿಟ್ಟು ಬನ್ನಿ
ಕ್ರಿಶ್ಚಿಯನ್ನರೇ
ಚರ್ಚುಗಳ ಬಿಟ್ಟು ಬನ್ನಿ
ಎಲ್ಲರೂ ಒಂದಾಗಿ ಒಟ್ಟಾಗಿ ಭಾರತಾಂಬೆಯ ಆರಾಧಿಸೋಣ


ಎಲ್ಲರು ಉಸಿರಾಡುವ ಗಾಳಿಯೂ ಒಂದೇ
ಎಲ್ಲರು ಕುಡಿಯುವ ನೀರು ಒಂದೇ
ಎಲ್ಲರ ಮೇಲೆ ಬೀಳುವ ಸೂರ್ಯ ಕಿರಣ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ

ಎಲ್ಲರ ದೇಹದೊಳನ ರಕ್ತದ ಬಣ್ಣ ಒಂದೇ
ಹೋಡೆದಾಡಿದಾಗ ಉಂಟಾಗುವ ನೋವು ಒಂದೇ
ಸತ್ತಮೇಲೆ ಎಲ್ಲರೂ ಸೇರುವ ಜಾಗವೂ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ

ಜನನ ನಿಯಮ ಎಲ್ಲರಿಗೂ ಒಂದೇ
ಮರಣ ನಿಯಮ ಎಲ್ಲರಿಗೂ ಒಂದೇ
ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ

ಹಿಂದೂಗಳೇ
ದೇವಸ್ಥಾನಗಳ ಬಿಟ್ಟು ಬನ್ನಿ
ಮುಸ್ಲಿಮರೇ
ಮಸೀದಿಗಳ ಬಿಟ್ಟು ಬನ್ನಿ
ಕ್ರಿಶ್ಚಿಯನ್ನರೇ
ಚರ್ಚುಗಳ ಬಿಟ್ಟು ಬನ್ನಿ
ಎಲ್ಲರೂ ಒಂದಾಗಿ ಒಟ್ಟಾಗಿ ಬದುಕೋಣ

ದೇಶಕ್ಕಾಗಿ ದುಡಿಯೋಣ
ದೇಶಕ್ಕಾಗಿ ಮಡಿಯೋಣ
ದೇಶ ಇರುವವರೆಗೂ
ದ್ವೇಶವ ಮರೆಯೋಣ

- ಚೇತನ್ ಬಿ ಸಿ

03 Aug 2016, 02:23 am

ಪ್ರೀತಿ ???

ಜೀವ ಕಣದಿ ಪ್ರೀತಿ ಪರಿಯ ಹುಡುಕಿದೆ ನಾನು ನಿನ್ನಲೇ
ನನ್ನ ಮನಸು ನಿನ್ನ ಹೆಸರೇ ಜಪಿಸಿದೆ ಹೃದಯವೆಂಬ ಗೂಡಲಿ
ಸಖಿ ನೀನು ಎಲ್ಲಿ ಇರುವೆ ನನ್ನ ಒಲವ ಪಯಣದಿ
ನಿನ್ನ ಬಿಟ್ಟು ಯಾರು ಇಹರು ನನ್ನ ಬಾಳ ಪುಟದಲಿ.

- Kiran

03 Aug 2016, 12:34 am

ಅಬ್ಯಾಸ

ಕನಸು ಕಾಣುವ ಅಭ್ಯಾಸ ನನ್ನದು
ಅದನ್ನು ದ್ವೇಷಿಸುವ ಮನಸ್ಸು ನಿನ್ನದು
ಹೇಗೇ ಮರೆಯಲಿ ಅ ಸುಂದರ ಸ್ವಪ್ನವನ್ನಾ
ಹೇಳಿ ಬಿಡು ಗೆಳತಿ ಅದೆಲ್ಲಾ ಅದೆಲ್ಲಾˌˌˌˌ
ಕನಸಲ್ಲಾ ನನಸು ಎಂಬುದನ್ನ

- ಪುನೀತ್ ಸಿ

02 Aug 2016, 04:05 pm

ಕಾಯುತ್ತೇನೆ ನಾನು..

ಹೂವು ನನ್ನತ್ತ ತಿರುಗ ಬಾರದೆ ಎಂದು,
ತಿರುಗುವ ಮನಸು ಹೂವಿಗೆ ಇಲ್ಲವಾದರೂ
ಗಾಳಿಯ ನೆವಕ್ಕಾದರೂ ಕೊಂಚ
ಹೊರಳ ಬಾರದೆ ಇತ್ತ ?

ಕಣ್ಣೆತ್ತಿ ನೋಡದ ಹೂವಿನ ಸುತ್ತ
ಗಿರಕಿ ಹೊಡೆವ ದುಂಬಿಗಳ ದಂಡು
ಚಿತ್ತ ಚಂಚಲವಾಗಿಲ್ಲ ಕಿಂಚಿತ್ತೂ
ಹೂವಿಗೆ ನೂರು ದುಂಬಿಗಳ ಕಂಡು

ನೂರೊಳಗೊಬ್ಬ ನಾನಾಗಿ
ಹೂವ ಬನದೊಳಗೆ
ಬರಿಗೈಲಿ ಕಳೆದು ಹೋಗಿ
ಹೂವ ಕಂಪಲ್ಲೇ ಹೃದಯ ನಿಂತು ಹೋಯ್ತಲ್ಲೇ

ತಿರುಗಲಿಲ್ಲ ಹೂವು
ದುಂಬಿಯ ಹೆಣ ಕಂಡೂ
ಕದಡಲಿಲ್ಲ ಮನ
ಮುತ್ತಿಕೊಂಡರೂ ದುಂಬಿಗಳ ಹಿಂಡು !

- ಶ್ರೀಗೋ.

02 Aug 2016, 11:57 am

ಮಂದಾರ

ಹಸಿರು..ಉಸಿರ ನಡುವೆ
ಕಂಗೊಳಿಸುತಿದೆ
ನಳನಳಸುತಿದೆ..ಪ್ರಕೃತಿ
ತಂಪಾದ ತಿಳಿಗಾಳಿ
ಘಮ್ಮೆನುವ..ಹೂ ಪಕಳೆ
ಮೆಲುದನಿಯ..ಗಿಳಿ.ಮೈನಾಗಳ
ನಿನಾದದೊಳು..
ಮೆಲಕು ಹಾಕಿವೆ ಮನಸುಗಳು
ಕಣ್ ರೆಪ್ಪೆ ಮುಚ್ಚದಲೆ
ಹೊಯ್ದಾಡುತಿವೆ...
ಕೂಡಿಟ್ಟ ಕನಸುಗಳು..
ಕರದಲ್ಲಿ ಕರವಿಟ್ಟು
ಅಂದು ನಾವಿಟ್ಟ ಸಪ್ತಪದಿ
ನಾ ಮುಂದೆ ನೀ ಹಿಂದೆ
ಇಂದು ನೀ ನಡೆಸುತಿಹೆ ಎನ್ನ
ಅದರರ್ಥ.ಅರ್ಧಾಂಗಿ..
ಏಳು ಬಣ್ಣಗಳ ಸಮ್ಮಿಲನದೆ
ಹೊರ ಹೊಮ್ಮುತಿದೆ ಸದಾ
ನಮ್ಮೊಲವ ಮಂದಾರ..

- a.n.k.murthy

02 Aug 2016, 11:55 am

ಮಗಳು

ಮಗಳ ಮೊದಲ ಮಾತು ಅದು ಹೂ ಮಲ್ಲಿಗೆ ...
ಕೇಳಲು ಕಾದಿಹ ಕಿವಿಗಳಲಿ ನೀ ಹೇಳು ತುಸು ಮೆಲ್ಲಗೆ .....

ಮಲಗುವ ಮುನ್ನ ಮಾಡುವ ಅವಳ ರಂಪಾಟ ಅದು ಬರೀ ಹುಸಿ ಕೋಪದ ಪರಿಪಾಠ....
ಅವಳ ತುಂಟಾಟದ ಓಟ ಅದು ನಮಗೊಲವಿನ ಪ್ರೀತಿಪಾಠ....

ಆಟವ ಆಡಿಸಿ ಪಾಠವ ಕಲಿಸಿ ಮುದ್ದಿಸುವ ಮಗುವಿಗೆ ಶುಭರಾತ್ರಿಯ ಸಿಹಿಮುತ್ತುಗಳು...

ಮಗುವಿನ ನಗುವಲಿ ನೋವೆಲ್ಲಾ ಮರೆಯುವ ಮಡದಿಗೆ ಮನಸಾರೆ ಜೋಡಿಮುತ್ತುಗಳು....

- shashidhar

02 Aug 2016, 10:03 am

ಗೆಳತಿ

ಹಣೆಗೆ ಕುಂಕುಮ ಚೆಂದ
ಮೂಗಿಗೆ ಮೂಗುತಿ ಚೆಂದ
ಕೈಗೆ ಬಳೆ ಚೆಂದ
ಕಾಲಿಗೆ ಕಾಲುಂಗುರ ಚೆಂದ
ಗೆಳತಿ
ನನಗೆ ನೀನು ಚೆಂದ ನಿಂಗೂ

- anand

02 Aug 2016, 08:10 am