Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಣ್ಣಲ್ಲಿ ಕಣ್ಣಗಿ ಕಾವಲು
ನನಗೆ ನನ್ನ ಗೆಳಯ..
- Mamatha
27 Jul 2016, 03:52 pm
ಸದ್ದಿಲ್ಲದೆ ಮರೆಯಾಗಿ ಸುದ್ದಿ ಮಾಡಿದೆ
ಆ ಸುದ್ದಿಯಲ್ಲು ನಿನ್ನ ನೆನಪಾಗಿದೆ
ಸುಟ್ಟು ಮಣ್ಣಿಗೆ ಮಣ್ಣಾದರು ನೆನಪಳಿಸದು
ಅವಳ ನೆನಪಲ್ಲೆ ಜೀವ ಬಿಡೊ ಈ ಜೀವ ನನ್ನದು.
- dinesha k y
27 Jul 2016, 06:46 am
ನನ್ನ ಬಯಕೆಯ ಹೂಗಳು
ಬತ್ತಿ ಹೋಗಿದೆ
ಇರುಳು ಮುಗಿಯದೆ ಹಗಲು ಮುಡದೆ
ಈ ಜೀವನ ಬೆೇಡವಾಗಿದೆ.
- dinesha k y
27 Jul 2016, 06:02 am
ಓ ನನ್ನ ಕನಸಿನ ರಾಣಿ
ನೀನಾಗ ಬೇಡ ಬೇರೇಯವರ ಏಣಿ
ಒಂದು ವೇಳೇಯಾದರೆ....
ಮುಳುಗುವುದು ನನ್ನ ಪ್ರೀತಿಯ ದೋಣಿ..!
- ವಲ್ಲಭ..
27 Jul 2016, 10:00 am
ನಿ ಬಿಟ್ಟು ಹೋದ
ಸಾವಿರಾರು ಸವಿ ನೆನಪುಗಳು
ಜೊತೆಯಲ್ಲಿ ಇದ್ದರೂ
ನಾ ಇನ್ನು ಏಕಾಂಗಿಯಾಗಿರುವೆ
- ಸನಿಹ
27 Jul 2016, 09:44 am
ತಾಯಿ ನಾನು ನಿನ್ನ ತೃಣಕೆ
ಸಮಾನಾಗಿರುವೆ ನಿನ್ನ ಪಾದಗಳಿಗೆ.
ತಾಯಿ ನಾನು ನಿನ್ನ ರೆಪೆಗಳಾಗಿರುವೆ
ನಿನ್ನ ಕಣ್ಣುಗಳಿಗೆ..
ತಾಯಿ ನಾನು ನಿನ್ನ ಕೂಸಾಗಿರುವೆ
ನಿನ್ನೆಲ್ಲಾ ಕನಸುಗಳಿಗೆ..
ತಾಯಿ ನಾನು ವೀರನಾಗುವೆ
ನಿನ್ನ ಮಡಲಿಗೆ..
ತಾಯಿ ನಾನು ನಿನಗೆ ಮಗನಾಗಿರುವೆ
ಈ ಜನ್ಮದವರಿಗೆ..
ತಾಯಿ ನೀನಾಗು ನನಗೆ ಮಾತೃದೇವತೆ
ಏಳೇಳು ಜನ್ಮದವರೆಗೆ..!
- ವಲ್ಲಭ..
26 Jul 2016, 09:52 am
ಚಂದನದ ಬಾಳು
ಸುಂದರದಿಂದ ಬಾಳು
ಹಸಿರಾದ ಬಾಳನ್ನು
ಕೊಸರಿಗೆ ನೊಕ ಬೇಡ ಗೆಳತಿ
ಕೊಸರು ಕೊಸಾರಾಗಿ ಇರಲಿ
ಹಸಿರು ಹಸಿರಾಗಿ ಅರಳಲಿ......
- chandu
25 Jul 2016, 06:50 pm
ಮನಸ್ಸು,ಇರಬೇಕು ಇದ್ದಂತೆ ಹಲಸು
ಇದ್ದರೂ, ಮೇಲ್ನೋಟಕ್ಕೆ ಮುನಿಸು,
ಒಳ ಹೋದಂತೆ ಕಾಣಸಿಗಬೇಕು ಸೊಗಸು,
ಅನುಭವಕ್ಕೆ ಬಂದಂತೆ ತಿಂದಾಗ, ಸಿಹಿಯಾದ ತಿನಿಸು
- raj
25 Jul 2016, 04:51 pm
ನನ್ನ ಸುತ್ತ ಮುತ್ತಲು ಸುತ್ತುತಿಹದು ನಿನ್ನಯ ನೆನಪುಗಳು......
ನಾನು ಕಡು ಬಡವ ......ಗೆಳತಿ
ನಿನಗೆ ಕೊಡಲು ....
ನನ್ನ ಬಳಿ ಏನು ಇಲ್ಲಾ......ಆದರೆ
ನಿನಗೊಂದು....
ಮಾತು ಕೊಡಬಲ್ಲೆ ನನ್ನ ದೇಹದಲ್ಲಿ...... ಉಸಿರು
ಇರೋವರೆಗೂ....
ನಿನ್ನ ನೋಡಿಕೊಳ್ಳುವೆ ಯಾವುದೇ ಕೊರತೆ..
ಬಾರದ ಹಾಗೆ
ನಿನಗೆ ಸರಿ ಅನಿಸಿದರೆ ಬಾ ಈ ಬಡವನ....
ಅರಮನೆಗೆ....
- ಉಮೇಶ ಶಿವಪ್ಪ ಲಮಾಣಿ
25 Jul 2016, 01:12 pm
ಹಚ್ಚು ಬೆಂಕಿ ಬಿಡಬೇಡ ನಾಡಿಗೆ
ಹೊತ್ತಿ ಉರಿಯಲಿ ಬೆಂಕಿ
ಬಿದ್ದಂತೆ ಕಾಡಿಗೆ.
ಕಂಡಲ್ಲಿ ಬಸ್ಸು, ಇನ್ಯಾರದೋ ಕಾರು
ಬೆಂಕಿ ಇಡಲು ಇನ್ನೆಷ್ಟು ಹೊತ್ತು
ಉರಿದು ಹೋಗಲಿ ಯಾರಪ್ಪನ ಸೊತ್ತು?
ಹಚ್ಚು ಬೆಂಕಿ, ಮೂರು ಬಿಟ್ಟ ರಾಜಕಾರಣಿ
ಅಪ್ಪಿ ತಪ್ಪಿ ಜೈಲು ಸೇರಿದಾಗ,
ಯಾವನೋ ಅಧಿಕಾರಿ ತಲೆಕೆಟ್ಟು
ಪ್ರಾಮಾಣಿಕವಾಗಿ ನಡೆದುಕೊಂಡಾಗ.
ಹಚ್ಚು ಬೆಂಕಿ ಪ್ರಜಾ ಪ್ರಭುತ್ವದ ಬುಡಕ್ಕೆ
ಇದು ಧರ್ಮ ಸಾಮ್ರಾಜ್ಯ
ಕೇಳಬಾರದು ಯಾರೂ ನಮ್ಮ ನಡೆಯ
ಕೊಳೆತ ಧರ್ಮ ಗ್ರಂಥವೇ ನಮ್ಮ ಒಡೆಯ.
ಹಚ್ಚು ಬೆಂಕಿ, ಪಬ್ಬಲಿ ಕುಂತ ಹುಡುಗಿಗೆ
ದನ ಕಡಿದು ತಿಂದ ದಲಿತಗೆ
ಮೈ ಮರೆತ ಪ್ರೇಮಿಗೆ,
ಯಾರೂ ಸಿಗದಿದ್ದರೆ ಬಾ
ನಾನೇ ಹಚ್ಚುವೆ ನಿನಗೆ !
- ಶ್ರೀಗೋ.
25 Jul 2016, 08:41 am