Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಭೂದಾಯಿಗೆ
ಮುಗಿಲ ಸುರಿಸೋ
ಧಾರಕರ ಮಳೆ
ಪ್ರೀತಿ ಸಿಂಚನವಷ್ಟೆ
ಸೋಲಬಹುದು ಆಕಾಶ
ಸೋಲಲಾರಳು ಧರೆ !
- ashfaq peerzade
05 Jul 2016, 11:43 am
ನಮ್ಮನ್ನ ಮರೆತವರನ್ನೂ
ಮರೆಯದಿದ್ದರೂ
ಮರೆಯಾಗಿ
ಮರೆತಂತೆ
ಮೆರೆಯುವ
ಬದುಕು ಕಾಲ್ಪನಿಕ !!
- ಸಾಗರ್ ಸಿದ್ದು
05 Jul 2016, 07:57 am
ಸಮುದ್ರದೊಳ್ ಆಳವೋ ಆಳದೊಳ್ ಸಮುದ್ರವೊ...
ಸೂರ್ಯನೋಳ್ ಅನಲನೋ ಅನಲನೋಳ್ ಸೂರ್ಯನೋ...
ಸುಳಿಯೊಳು ಸೆಳೆತವೋ ಸೆಳೆತದೊಳ್ ಸುಳಿಯೋ..
ಸುಪ್ತಮನದಿಂದ ಭಾವನೆಗಳೋ ಸುಪ್ತಭಾವನೆಗಳಿಂದ ಮನವೋ....
ಅನಲ-ಅಗ್ನಿ
- medhini
04 Jul 2016, 11:31 pm
ಏನೆಂದು ಬರೆಯಲಿ
ಏನೆಂದು ತಿಳಿಸಲಿ
ನೀ ನನ್ನೊಂದಿಗೆ ಇದ್ದ
ಮಧುರ ಕ್ಷಣಗಳನು ಬರೆಯಲಾ
ನೀ ಇಲ್ಲವೆಂಬ ವಿಷಾದವನು ಹೇಳಲಾ
ಈ ನನ್ನ ಅರ್ಥವಿಲ್ಲದ ಜೀವನಕೆ
ಜೀವ ತುಂಬಲು ಮರಳಿ ಬಾ ಎನ್ನಲಾ......
ಈ ನನ್ನ ಪ್ರಶ್ನೆಗಳಿಗೆ ಉತ್ತರಗಳನು ತಾ ಎಂದು ಅಪೇಕ್ಷಿಸಲಾ.....
ಬಾ ಮರಳಿ ಬಂದು ನನ್ನ ನೋಡು...
- Vs
04 Jul 2016, 09:14 pm
ಎಲ್ಲಿಯವರೆಗೂ ಈ ನಿನ್ನ ಮೌನ ಬೆಂಕಿಯಲ್ಲಿ ಬೆಂದು ಹೋಗುತ್ತಿದೆ ನನ್ನೀ ಮನ
ನೀಡಬಾರದೆ ಇನ್ನೊಮ್ಮೆ ಈ ಮನಸ್ಸಿಗೆ ಮರು ಜನನ
ಕಾಯುತ್ತಿರುವೆ ಗೆಳತಿ ನೀ ಬರುವ ದಾರಿಯನ್ನ
ಮರೆಯಬೇಡ ನೀ ನನ್ನ ಪ್ರೀತಿಯನ್ನ
ತಾಳಲಾರೇನು ನಾನು ಈ ನೋವನ್ನ
ಅರಿಯದೆ ಮಾಡಿದೆ ನಿನ್ನ ಪ್ರೀತಿಯನ್ನ ಮಾಡಬೇಡ ನನಗೆ ನೀ ಮೋಸವನ್ನ
ಆ ದೇವರು ಕೂಡಾ ಕ್ಷಮಿಸೊಲ್ಲ ನಿನ್ನ
@ ಸಿಂಗಲ್ ಶಿವ @
- ಶಿವು
04 Jul 2016, 09:05 pm
ಮುಪ್ಪು
ದೇಹಕೆ ,
ಯೌವ್ವನ
ಮನಸ್ಸಿಗೆ !
ಕಾಮ
ಕಾಯಕೆ ,
ಪ್ರೇಮ
ಹೃದಯಕೆ !!
- ashfaq peerzade
04 Jul 2016, 04:49 pm
ಪ್ರಶ್ನೆಗಳ ಸರಣಿ
ಸಿಗುತ್ತಿಲ್ಲ ಉತ್ತರಗಳ ಭರಣಿ
ಬದುಕು ಎನ್ನುವುದು.....
ಒಮ್ಮೆ ಕರಣೀ
ಮತ್ತೊಮ್ಮೆ ಮುತ್ತಿನ ಮಣಿ...
ಸೂಚನೆ:
ಕರಣೀ- surds or irrational... ( ಅ ಭಾಗಲಬ್ಧ)
- medhini
03 Jul 2016, 11:10 pm
ನಂಜುಗುಳುವ ನಾಲಿಗೆಯ ನುಡಿ ಮುಳ್ಳುಗಳು
ಮುಡಿದ ನಿಂತೊಲವು
ಸುಮಂಗಲೆಯಾಗಿಯೂ
ವಿಧವೆ ಜೀವನ ಬದುಕುತಿದೆ.
- ashfaq peerzade
03 Jul 2016, 09:16 pm
ಅತಂತ್ರ ಬದುಕಿನ ದಾರಿಯಲಿ....
ಎನ್ನೆದೆಗೊರಗಿ ಮಗುವಾಗಿ ಮಲಗಿ ನೋಡೊಮ್ಮೆ ಸಾಕು
ಎದೆಗೂಡಲ್ಲಿ ಕದಲುವ ಮೌನಮಿಡಿತ ಆಲಿಸೊಮ್ಮೆ ಸಾಕು
ನಿನ್ನ ಕೇಶರಾಶಿಯಲಿ ಎನ್ನ ಬೆರುಳುತುದಿ ಮೀಟುತಿರಲಿ ಪ್ರೇಮರಾಗ
ಹೃದಯ ಹಾಡು ಮೂಕಾಗಿ ರೋಧಿಸುವುದು ಆಲಿಸೊಮ್ಮೆ ಸಾಕು
ಇಲ್ಲಿ ತೊಟ್ಟಿಕ್ಕುವ ರಕುತದಲಿ ಕೆಂಗುಲಾಬಿ ಬಿರಿಯುತಿದೆ
ಕಾವ್ಯ ಕೆಂದುಟಿಗಳಿಂದ ಸ್ರವಿಸುವ ರಕ್ತಗಾನ ಆಲಿಸೊಮ್ಮೆ ಸಾಕು
ಬೊಗಸೆಯಿಂದ ಸೋರಿ ಹೋಗುತಿದೆ ಮರಳಿನಂತೆ ಬದುಕು
ಮರಳಗಾಡಿನಲ್ಲಿ ನಿಟ್ಟುಸಿರುಗಳು ಬೇಯುವ ಸದ್ದು ಆಲಿಸೊಮ್ಮೆ ಸಾಕು
ನಿನ್ನಲ್ಲಿ ನೂರಾರು ಕನಸಗಳು, ಸಾವಿರಾರು ಪ್ರಶ್ನೆಗಳು ಅಲೆಮಾರಿ ಬದುಕಿನ ಚಿಂತೆ
ಬಿರುಗಾಳಿಯಲೆಗೆ ತತ್ತರಿಸುವ ಹಾಯದೋಣಿ ಶಬುಧ ಆಲಿಸೊಮ್ಮೆ ಸಾಕು
ದುಃಖದುಮ್ಮಾನಗಳು ಬಂದು ಹೋಗುವಂತೆ, ಸುಖಸಮ್ಮಾನಗಳು ಸರಿದ್ಹೋಗುತ್ತವೆ
ಕಾಲಡಿ ಕುಸಿಯುವ ಅತಂತ್ರ ದಾರಿಯಲಿ ಗುರಿಯತ್ತ ಪಯಣಿಸುವ ಹೆಜ್ಜೆ ಸಪ್ಪಳ ಆಲಿಸೊಮ್ಮೆ ಸಾಕು.
- ashfaq peerzade
03 Jul 2016, 09:01 pm
"ಪ್ರತಿರೋಧನೆ"
ಅವಳೆದೆಯ ಇಳಿಬಿದ್ದ
ಮಾಂಸದ ಮುದ್ದೆಗಳಂತೆ
ಗತ ವೈಭವದ ಪ್ರೀತಿ
ಬೆರಳು ಬೆಚ್ಚಗಿನ
ಬಯಕೆಗಳು ತಣ್ಣಗಾಗಿ
ಚಿರ ನಿದ್ರೆಗೆ ಜಾರಿವೆ
ಕಾವು ಕಳೆದಕೊಂಡ ಕಾಯ
ಪಡೆದ, ಕಳೆದುಕೊಂಡದ್ದರ
ಕುರಿತು ಲೆಕ್ಕಾಚಾರ ನಡೆಸಿದೆ
ಸೋತ ಕಂಗಳ ಕಣ್ಣೀರು
ಮೈಮೇಲಿನ ಗೀರು,
ಗಾಯದ ಗುರ್ತುಗಳು
ಎದುರಿಟ್ಟುಕೊಂಡು
ಪಂಚನಾಮೆಗೆ ತೊಡಗಿದೆ
ಭಗ್ನಾವಶೇಷ ಹೃದಯ
ಗುಮ್ಮಟದಲ್ಲಿ ಈಗ
ಬರೀ ಪ್ರತಿಕಾರದ ಧ್ವನಿ
ಪ್ರತಿರೋಧಿಸುತಿದೆ.
- ashfaq peerzade
03 Jul 2016, 08:56 pm