ಅಮ್ಮ .........ಊರೇನೇ ಅಂದರೂ
ನೀ ನನ್ನ ದೇವರು ...!
ಜ್ಞಾನಕ್ಕೂ ದೊಡ್ಡದು ಮಣ್ಣಿನ ಋಣ
ಪ್ರಾಣಕ್ಕೂ ದೊಡ್ಡದು ತಾಯಿಯ ಋಣ...!
ಓ ಜನನಿ ಜೀವಕ್ಕೆ ಮೂಲ ನೀ
ತ್ಯಾಗಕ್ಕೆ ಕಳಸ ನೀ........!
ಓ ಜನನಿ ಎಲ್ಲಕ್ಕೂ ಮೊದಲು ನೀ
ಪ್ರೇಮಕ್ಕೆ ಕಡಲು ನೀ ......!
ಜಗಕ್ಕೆ ಮುಕ್ಕೋಟಿ ದೇವರು
ನೀ ನನ್ನ ದೇವರು ..........!
ಇಂತಿ ನಿಮ್ಮ ಮಗ
- ಯಲ್ಲು ....!
ಕಂಜಸಖನ ಕಣ್ಣಿನ ತೇಜದಂತೆ
ಚಂದಿರನ ಮುಗ್ಧ ನಗುವಿನಂತೆ
ಕಮಲದ ಕಾಂತೀಯ ಕುಡಿಯಂತೆ
ಹುಣ್ಣಿಮೆಯ ಬೆಳಕಿನ ದೀಪದಂತೆ
ಬಾನಾಡಿಯಲ್ಲಿ ತೇಲಾಡುವ ಬೆಳ್ಳಕ್ಕಿಯಂತೆ
ಕಾಮನಬಿಲ್ಲಿನ ಬಣ್ಣದೋಕುಳಿಯಂತೆ
ವಸಂತ ಮಾಸದಿ ಹಾಡುವ ಕೋಗಿಲೆಯಂತೆ
ನನ್ನೆದೆಯಲಿ ಬೀಸಿದ ಪ್ರೀತಿಯ ತಂಗಾಳಿಯಂತೆ
ಸೌಂದರ್ಯವೆಂಬ ಇಂದ್ರಜಾಲದ ಮಂತ್ರದಂತೆ
ಕಾಡದಿರು ಕನಸಲಿ ನನ್ನ ದೇವಲೋಕದ ಕನ್ಯೆಯಂತೆ
ಮಧುರ ಮಾತಿಗೆ ಮಾರುಳಾದೆ
ಬೆಳದಿಂಗಳ ಬೆಳಕಿನ ಚಿತ್ತಾರ ನೀನಾದೆ
ಪೂರ್ಣ ಚಂದ್ರನ ಕಾಂತೀಯ ಹೂವಾಗಿ
ಬಂಗಾರದೆಲೆಯ ಮೇಲೆ ನಸು ಇಬ್ಬನಿ ನೀನಾದೆ
ಕಾಣದ ಕಂಗಳಿಗೆ ದೇವತೆ ನೀನಾದೆ
ಪ್ರೀತಿ ಮಮತೆಯ ಸಾಕಾರ ರೂಪವಾದೆ
ತಂಗಾಳಿಯ ತಿಳಿ ಕಂಪಿನ ನಾದ ನೀನಾದೆ
ಪ್ರೀತಿಯ ಅರಮನೆಗೆ ಮಹಾರಾಣಿ ನೀನಾದೆ
ಅರಿಯದೆ ಕದ್ದ ನನ್ನ ಹೃದಯಕೆ ಒಡತಿ ನೀನಾದೆ
ಬಂದೆಯಾ ನನ್ನ ಕನಸಿನ ರಾಣಿ ನೀನಾಗಿ ಓ ರತಿಯೆ....