Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದಾಳದ ಮಾತು...

ಹುಡುಕುವ ಪ್ರೀತಿಗಿಂತ ಜೋತೆಗಿರುವ ಸ್ನೇಹ ಚಂದ
ಕಾಣುವ ಕನಸಿಗಿಂತ ಕಾಣದೆ ಇರುವ ಕಲ್ಪನೆ ಚಂದ
ಬರೆಯುವ ಬರಹಕಿಂತ ಅಳಿಸಲಾಗದ ನಿಮ್ಮ ನೆನಪು ಚಂದ...!

- ಶಿವು ಬಿ ಎಸ್

09 Jul 2016, 07:19 pm

ಋಣ

ಮುನಿಸಿಕೊಂಡ ನಲ್ಲೆಯ
ನೋವಿನ ಸಂತೈಕೆಯ
ನೆಪದಲಿ ಅವಳ
ಹೃದಯಕ್ಕಿನ್ನೂ
ಹತ್ತಿರವಾಗಿಸಿದ ಕಾರಣ
ನೋವೇ ........
ನಿನಗೆ ನಾ ಚಿರ ಋಣಿ!

- ashfaq peerzade

09 Jul 2016, 01:42 pm

ನನ್ನ ಪ್ರೀತಿ

ಓ ನನ್ನ ಪ್ರಿಯೇ
ನಿನ್ನ ನೋಡಿದಾಗ ನನ್ನ ಹೃದಯ
ಡವ ಡವ ಅನ್ನುತ್ತದೆ.......

ನಿನ್ನನು ಶಾಪಿಂಗ್ ಕರೆದುಕೊಂಡು
ಹೋಗೋಣ
ಅಂದ್ರೆ ನನ್ನ ಪರ್ಸ್ ಜಿಗಿದು ಓಡುತ್ತದೆ

- ಸಮದ್ ಪುತ್ತೂರು

09 Jul 2016, 11:25 am

ನನ್ನ ಪ್ರೀತಿಯ ಅರಿಯಲಿಲ್ಲ ನೀ

ನಗುವ ಹಿಂದಿನ ಕಣ್ಣಿರ ಕಂಡೆ, ಕಣ್ಣಿರ ಒಳಗಿನ ನೋವ ಕಂಡೆ, ನೋವ ಮರೆಸುವ ನಗುವಾದೆ,
ಆ ನಗು ಸದಾ ಇರಲೆಂದು ನಾ ಹರಸಿದೆ. ತಿಳಿಯದೇ ಹೋದೆ ನನ್ನ ಮಾನವ ನೀ ಇಂದು. ಬೇಸರದಲ್ಲಿ
ಹೇಳಿರುವೆ ನೀ ಇಂದು, ನಾನಿನ್ನ ಮಾನಸ ಅರಿತಿಲ್ಲವೆಂದು. ಒಡೆದ ಮನಸಲ್ಲು ಪ್ರೀತಿಸುವೆ ನಾ ಇಂದು,
ಬೇಸರದಲ್ಲಿ ಮರುಗಬೇಡ ನೀ ಎಂದು. ಬಾ ನನ್ನ ಮನಸೊಳಗೆ ಇಂದು, ಸಂತಸದಿ ನಲಿಯುತ್ತಾ
ಇರಲೆಂದು. ನಿನ್ನ ಮಾನಸ ಅರಿಯದೆ ಹೋದರೆ ನಾ ಇಂದು, ಪ್ರೀತಿಗೆ ಅರ್ಥವಿಲ್ಲದಂತೆ ತಿಳಿ ನೀ ಇಂದು.
ಅರ್ಥವಿಲ್ಲದ ಮಾನಸ ನನಗೇಕೆ, ನಿನ್ನ ಪ್ರೀತಿಯ ಅರಿಯದ ಈ ಜೀವನ ನನಗೆ ಬೇಕೇ?

- ss

08 Jul 2016, 09:20 pm

ಮನದ ಮಾತು.

ತಂಪಾದ ಸವಿ ಹೊತ್ತಿನಲ್ಲಿ, ರಾತ್ರಿಯ ಕತ್ತಲೆಯ ನಡುವಲ್ಲಿ, ಬೆಚ್ಚಗೆ ಮಲಗಿಹೆನು ನಾನು, ನಿದಿರೆಯು ಏಕೋ ಬಾರದು ನನಗಿನ್ನೂ,
ಮನದಲ್ಲಿ ಕೂತು ನೀ ಕಾಡುತ್ತಿರುವೆ, ಕಣ್ಣ ಮುಚ್ಚಿದರೆ ನೀ ಬರುವೆ, ನನ್ನಲ್ಲಿ ಮುಗುಳ್ನಗೆಯ ಹೊತ್ತು ತರುವೆ. ಹೇ ನಲ್ಮೆಯ ನಲುಮೆಯೇ, ಏಕೆ ನನ್ನ ಕೊಲ್ಲುವೆ ಪ್ರೀತಿಯ ವಿಷವ ಬಿತ್ತಿ, ತಾಳಲಾರೆನು ಇ ಮಧುರ ನೋವನ್ನು, ಕಾಣಬಯಸುವೆ ನಿನ್ನದೆ ಕನಸನ್ನು. ಎಸ್ಟೇ ಸಲ ತಿವೀದರು ನೀನು, ಜಾಗವಿಹುದು ನನ್ನ ಹೃದಯದಲ್ಲಿ ಇನ್ನೂ. ಸವಿ ಪ್ರೀತಿಯ ಇರಿತಕ್ಕೆ ಕಾದು ಕುಳಿತಿರುವೆ, ನಲ್ಲೇ ಬಾ ಕೊಲ್ಲು ಒಮ್ಮೆ ನನನ್ನು. ಮನಸು ಕೋರಿದೆ ಜಾಗವನ್ನು, ನಿನ್ನ ಮನಾದರಾಸನಗಲು ಎಂದು. ರಾಜನಾದರೂ ಸವಿಯೆ, ಕೂಲಿಯಾದರೂ ಸವಿಯೆ, ಕೊಟ್ಟು ನೋಡು ನೀ ಜಾಗವನ್ನು, ಮರೆತೇ ಬಿಡುವೆ ನೀನನ್ನು ನೀನು.

- ss

08 Jul 2016, 02:20 pm

ಗೆಳೆತನ...

ಗೆಳೆತಿಯರೇ ನಿಮ್ಮ ಗೆಳೆತನ ಎಷ್ಟು ಸುಂದರ
ಹಾಳೆಯಾದರೇ ಅಂಬರ
ಮಶಿಯಾದರೇ ಸಾಗರ
ಬರೆಯಲು ಸಾಲದು ಅಕ್ಷರ...!

- ಶಿವು ಬಿ ಎಸ್

08 Jul 2016, 01:41 pm

ಮಾಯಜಿಂಕೆ

ಬಯಸದೇ ಬಂದೆ ನೀ ನನ್ನ ಕಣ್ಣು ಮುಂದೆ
ಆಮಂತ್ರೀಸದೇ ಬಂದೇ ನನ್ನ ಪ್ರೇಮದ ಗುಡಿಗೆ
ಬಿತ್ತಿದೆ ಒಲವಿನ ಬೀಜವ
ಪ್ರೇಮದ ಮುಂಗಾರು ಶುರುವಾಗುವ ಹೊತ್ತಿಗೆ
ಮರೆಯಾದೆ ಏಕೆ? ಇಂದು ನೀ
ಪ್ರೇಮದ ಲತೆ ಹೂ ಬಿಡುವ ಮುಂಚೆಯೇ
ಹೇ ನನ್ನ ಮಾಯಜಿಂಕೆಯೇ.

- ಕೃಷ್ಣ

07 Jul 2016, 08:29 pm

ನಿರೀಕ್ಷೆ

ಅವಳಂದು
ಕೈಬೀಸಿ ಹೋದಳು
ಹಿಂದಿರುಗಿ ಬಾರದ ಜಾಗಕ್ಕೆ
ಎಂಥ ಹುಚ್ಚ ನಾನು
ಇವತ್ತಿಗೂ ಕಾಯುತ್ತಿದ್ದೇನೆ
ಕನಸಿನಲ್ಲಾದರೂ
ಒಮ್ಮೆ ಬರುವಿ ಎಂದು !?

- ashfaq peerzade

06 Jul 2016, 08:36 am

ಪ್ರೇಮ ಸಿಂಚನ

ಭೂದಾಯಿಗೆ
ಮುಗಿಲ ಸುರಿಸೋ
ಧಾರಕರ ಮಳೆ
ಪ್ರೀತಿ ಸಿಂಚನವಷ್ಟೆ
ಸೋಲಬಹುದು ಆಕಾಶ
ಸೋಲಲಾರಳು ಧರೆ !

- ashfaq peerzade

05 Jul 2016, 11:43 am

ಕಾಲ್ಪನಿಕ ಬದುಕು

ನಮ್ಮನ್ನ ಮರೆತವರನ್ನೂ
ಮರೆಯದಿದ್ದರೂ
ಮರೆಯಾಗಿ
ಮರೆತಂತೆ
ಮೆರೆಯುವ
ಬದುಕು ಕಾಲ್ಪನಿಕ !!

- ಸಾಗರ್ ಸಿದ್ದು

05 Jul 2016, 07:57 am