Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪು...

ಉಸಿರ ಸೆಳೆತಕೆ ಸಿಕ್ಕ
ಪುಟ್ಟ ನೆನಪು ಮೆಲ್ಲ
ಮಾತನಾಡಿತು ಮೊನ್ನೆ..

ಪ್ರೇಮ ಪಲ್ಲವಿಸಿದ ಆ
ಮರುಗಳಿಗೆ ನಾ ನಿನ್ನ
ಎದೆಯ ಸೇರಿದೆನೆಂದು..



ಮಂಜುನಾಥ್ ಹಂದೆ

- Manjunath

26 Jun 2016, 10:32 pm

ಮೊದಲ ಮಳೆ

ಮಿಂಚು ಹೊಡೆಯಿತು ಮೋಡ ಸರಿಯಿತು ತಂಪಾದ ಗಾಳಿ ಬೀಸಿತು
ಮನವು ತಣಿಯಿತು ವನವು ನೆನೆಯಿತು
ಜೋರಾದ ಮಳೆಯು ಸುರಿಯಿತು

ಕೆರೆಯು ತುಂಬಿತು ಕಪ್ಪೆಯು ಜಿಗಿಯಿತು
ಸಮುದ್ರವು ಉಕ್ಕಿ ಹರಿಯಿತು
ಹೂವು ಅರಳಿತು ನೋವು ಕರಗಿತು
ಮಣ್ಣು ಪರಿಮಳ ಬೀರಿತು

- ಚಂದ್ರು ಕುಮಟಾ

26 Jun 2016, 08:29 pm

ಗೆಳತಿ

ಕ್ಷಣ ಕ್ಷಣ ನಿನ್ನ ನೆನಪು
ಮರೆತು ಬಿಟ್ಟಾ ಗೆಳತಿ ಆ ಸವಿ ಕನಸು
ನಿನ್ನ ಪ್ರೀತಿಯ ಮರೆತಿಲ್ಲ ನನ್ನ ಮನಸ್ಸುˌˌˌˌˌˌˌˌ

- ಪುನೀತ್ ಸಿ

26 Jun 2016, 07:53 pm

ಮೊಬೈಲ್

ಅಂದು ಎಲ್ಲಿ ನೋಡಿ ದರಲ್ಲಿ ಗುಡಿ ಗೋಪರಗಳು .
ಇಂದು ಎಲ್ಲಿ ನೋಡಿ ದರಲ್ಲಿ ಮೊಬೈಲ್ ಟವರ್ ಗಳು .
ಅಂದು ಎಲ್ಲಿ ಕೇಳಿದರಲ್ಲಿ ಗುಡಿ ಗೋಪುರದಲ್ಲಿ
ಘಂಟಾ ನಾದ
ಇಂದು ಎಲ್ಲಿ ಕೇಳಿದರಲ್ಲಿ ಮೊಬೈಲ್ ರಿಂಗ್ ನ ನಿನಾದ

- gireesha

25 Jun 2016, 03:43 pm

ಕನಸು-ನನಸು

ಒಂಟಿತನಕೆ ಜಂಟಿಯಾಗಿ ನಿಂತಳು
ನನ್ನೀ ಬದುಕಿಗೆ ಜೊತೆಯಾಗಿ ಬಂದಳು
ನಡುಗುವ ಚಳಿಗೆ ಹೊದಿಕೆಯಾದಳು
ಸುಡುವ ಬಿಸಿಲಿಗೆ ನೆರಳಾದಳು
ಇವೆಲ್ಲವೂ ಬರೀ ಕನಸಾಗಿದ್ದರೆ ಕಣ್ ತೆರೆಯಲಾರೆ
ನನಸಾಗಿದ್ದರೆ ಕಣ್ ಮುಚ್ಚಲಾರೆ..!!!!

- ಸಾಗರ್ ಸಿದ್ದು

25 Jun 2016, 12:59 pm

ಕರುಣೆ ಇಲ್ಲವಾ..

ನನ್ನ ಕಣ್ಣಿನಲ್ಲೇ ಎಲ್ಲಾ ಕನಸುಗಳ
ಕೊನೆಯ ಅಂತ್ಯಕ್ರಿಯೆ
ನಡೆಯುತ್ತಿದ್ದರು ನೋಡುತ್ತ
ಸುಮ್ಮನೆ ಕುಳಿತಿರುವ
ಆ ದೇವರಿಗೆ ಕರುಣೆ ಇಲ್ಲವಾ....?

- ವಿನಯ ಸೋಗೋಡು(ಹೊಸನಗರ)

25 Jun 2016, 08:36 am

ಪ್ರೇಮವೃಕ್ಷದಡಿ

ಒಲವಿನ ಹಾದಿಲಿ ಮಿಟಿದೆ
ಅನುರಾಗದ ನವ ಪಲ್ಲವಿ

ಮೊದಲ ನೋಟಕ್ಕೆ
ಸಂಭ್ರಮದ ಕುಣಿತ
ಕಂಡೆವು ನಮ್ಮಲ್ಲಿ

ರವಿಯ ಕಿರಣಕ್ಕೆ ಮಂಜಿನ ಹನಿಯು ಕರಗುತ್ತಿದೆ
ಚಲವ ಮೊಗಕ್ಕೆ ನನ್ನೆದೆ ಹಾಡುತ್ತಿದೆ ಕೇಳು

ಸಹ್ಯಾದ್ರಿ ಸಾಲುಗಳಿಂದು ಮೋಡಗಳಿಗೆ ಚುಂಬಿಸುತ್ತಿದೆ ನೋಡು
ನಿನ್ನೆದೆಯ ಹೂವಿಗಿಂದು ನಾ ದುಂಬಿಯಾಗಿ ಬಂದು
ನಿನ್ನ ತುಟಿಗಳ ಮೇಲೆ ನನ್ನ ಹೆಸರ ಬರೆಯುವ ಆಸೆ

ಆಕಾಶದಲ್ಲಿಗ ಕಾಮಣ ಬಿಲ್ಲು ಮೂಡಿದೆ
ಮೊದಲನೆ ಬಿಸಿಲು ಮಳೆಗೆ ಪ್ರೇಮದ ಕಲರವ
ಕೇಳು ಬಾ ಪ್ರೇಮವೃಕ್ಷದಡಿ

ಒಲವಿನ ಉಸಿರಿನ ಗಾಳಿಗಿಂದು
ಮೈ ಮನವ ಮರೆತು ಹಾಡುವ
ಇದು ನಮ್ಮ ಒಲವಿನಗೀತೆಯಾಗಿದೆ

ಮಾವಿನ ತೋಟದಲ್ಲಿ ಕೋಗಿಲೆ ಸ್ವರವ
ಮಲ್ಲಿಗೆ ವನದಲ್ಲಿ ಪರಿಮಳವ
ನಮ್ಮ ಪ್ರೀತಿಯ ಹಿತವ
ಬಂಧಿಸಲು ಸಾಧ್ಯವಿಲ್ಲ
ನೀ.. ಚಿಂತಿಸದಿರು

- ದ್ಯಾವನೂರು ಮಂಜುನಾಥ್

- ದ್ಯಾವನೂರು ಮಂಜುನಾಥ್

25 Jun 2016, 07:15 am

ನಲ್ಲ ಎಲ್ಲಿ ಅಡಗಿರುವೆ..? ನನ

ಬಾಳಿನಲ್ಲಿ ಪ್ರೀತಿ ಎಂಬ ಖಾತೆಯನ್ನು ತೆರೆಸಿ...
ಹಗಲೊತ್ತಿನಲ್ಲೆ ಚಂದಮಾಮನನ್ನು ತೋರಿಸಿ...
ಹಿಂಬಾಲಿಸಿ ಬರಬಾರದೆಂದೂ ನಾ ನಿನ್ನನ್ನು ಅರಿಸಿ...
ಅದಕ್ಕೆ ನೀಡಿದೆಯಾ
ಸಿಹಿ ಮುತ್ತಿನಲ್ಲಿ ವಿಷವನ್ನು ಬೆರೆಸಿ...

- Priyanka Tuppad

24 Jun 2016, 11:11 pm

ನನ್ನವಳು

ಓಳೆ ಚುಮುಕಿ ಬಾಳೆ
ನೊಡತವಲೆ ನಲ್ಲೆ
ಮನಸ್ಸು ಯಾಕೋ ಇಲ್ಲೆ
ಹಾಡುತೈತೆ ಕೇಳೆ
ನನ್ನ ಮನಸ್ಸನ್ನು ಕದ್ದವಳು ಇವಲಲ್ವೆ

ಪಿಂಕು ಸ್ಯರಿ ಹುಟ್ಟಿ
ಫ್ಲ್ಯಾಟು ಚಪ್ಪಲಿ ಹಾಕಿ
ಲೂಜೂ ಹೇರ್ ಬಿಟ್ಟಿ
ಒಂದು ಸೈಡು ಲುಕು ಕೊಟ್ಟು
ಹೋಗುತವಲೆ ನೋಡಿ
ಈಗ ನನ್ನಲ್ಲಿ ನಾ ಇಲ್ಲ.
ಈ ಮನಸ್ಸೆಲ್ಲಾ ಅವಲದಲ್ವ

ಕಾಡುವಂತ ಹುಡುಗಿ
ಅವಳು ಇವಳೇ ಅಲ್ವ
ಇವಳ ಮಾತು ಸ್ವೀಟು
ಒಮ್ಮೆ ತಿರುಗಿ ನೋಡು
ನಿನ್ನ ಹೈಟಿಗೆ ನಾನು
ಈಗ ಇಬ್ರಲ್ಲೂ ಲವ್ ಆಗಿದೆ.

- ದ್ಯಾವನೂರು ಮಂಜುನಾಥ್

- ದ್ಯಾವನೂರು ಮಂಜುನಾಥ್

24 Jun 2016, 10:11 pm

ಬಾಲಕಾರ್ಮಿಕೆ

ನನ್ನ ಜೀವನವೆಂಬ ಪಯಣ
ಹಾಸಿಗೆಯಿಂದೆದ್ದು- ಪ್ರಾರಂಭಿಸಿದರೆ
ರವಿ ಪಡುವಣದಲ್ಲಿ ಆಡುವವರೆಗೆ
ಸ್ನೇಹಿತರಾದ ಹಾರೆ - ಪಿಕ್ಕಾಸುಗಳೊಂದಿಗೆ
ಅದೆಷ್ಟೋ ವರ್ಷಗಳ ಸರಿಸಿ ಬಿಟ್ಟೆ


ಜೀವನದ ದಡದಿ ಬಡಿದಪ್ಪಳಿಸಿದ ಏರಿಳಿತಗಳ ಗಣಿಸದೆ
ಹತಾಷೆಗೊಂಡು ಮರುಗದೆ
ಜೀವನವನ್ನೇ ಜನಕಲ್ಯಾಣಕ್ಕೆ ಸಮರ್ಪಿಸಿ
ಸುಂದರ ಸ್ವರ್ಗವ ಕನಸು ಕಂಡೆ


ಬಿಸಿಲ ಬೇಗೆಯಲ್ಲಿ ಬೆಂದುಬೆಂಡಾಗಿ ಬಾಸುಂಡೆಯೆದ್ದ ಬೆನ್ನು
ಒಂಟೆ ಗೂನಿನಂತಾದರೂ
ಅದರಲ್ಲೇ ಮುಂದುವರಿಯಲು
ಹೊಟ್ಟೆಯೂ ಪ್ರೇರಣೆಯಾಗಿತ್ತು


ಕೈ - ಕಾಲುಗಳ ಜಜ್ಜಿಕೊಂಡ ದಿನಗಳು
ಕಲ್ಲು- ಬಂಡೆಗಳೊಂದಿಗೆ ಮುನಿಸಿಕೊಂಡಿದ್ದರೂ
ರಾತ್ರಿ ನಿದ್ದೆ ಹತ್ತದೆ ಪರದಾಡಿದ್ದರೂ
ಮರುದಿನ ಪ್ರೀತಿಯ ನಟನೆ ಅನಿವಾರ್ಯವಾಗಿತ್ತು...


ಧನಿಯ ಕೊರಳಲ್ಲಿ ನೇತಾಡುವ
ಇಣುಕಿ ನೋಡುವ ಮುತ್ತುಗಳು
ಸ್ವರ್ಣಾಭರಣ ಮಳಿಗೆಯಿಂದ ಕೊಂಡಿದ್ದರೂ
ಅವು ಮುತ್ತು- ರತ್ನಗಳಾಗಿರಲಿಲ್ಲ
ಹೊರತು ನನ್ನ ಬೆವರ ಹನಿಗಳಾಗಿತ್ತು...


ಹರಿದ ಬಟ್ಟೆಗಳ ಸುತ್ತಿ
ನನ್ನ ನಿತ್ಯ ಪಯಣ
ದೇಶದ ಏಳಿಗೆಗಿರುವ
ನನ್ನ ಅಳಿಲು ಸೇವೆಯಾಗಿತ್ತು...


ವರ್ಷಗಳ ನಂತರ
ಹಿಂತಿರುಗಿ ನೋಡಿದಾಗ
ಇನ್ನಷ್ಟು ಕೆಲಸಗಳು
ಬಾಕಿ ಕಂಡಾಗ
ಬಟ್ಟೆಯಂತೆ ಚಿಂದಿಯಾದ ದೇಹ
ದಣಿವ ಬೇಡುತ್ತಿತ್ತು.....

- ಶಾಹಿದ್ ಉಪ್ಪಿನಂಗಡಿ

24 Jun 2016, 09:28 am