Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೋಡ ಕಪ್ಪಾದಾಗ ಮಳೆಹನಿ
ಮನಸ್ಸು ಕಪ್ಪಾದಾಗ ಕಂಬನಿ
ಮಳೆ ನಿಂತರೂ ಮಳೆಹನಿ ನಿಲ್ಲಲ್ಲ
ಗಾಯ ವಾಸಿಯಾದರೂ ಕಲೆ ಮಾಸಲ್ಲ !!
- ಸಾಗರ್ ಸಿದ್ದು
24 Jun 2016, 01:57 pm
ಕೋಗಿಲೇಯ ಕೂಗು ಚಂದ
ನವಿಲಿನ ನೃತ್ಯ ಚಂದ
ನಿನ್ನ ಗಜ್ಜೆಯ ನಾದ ನನ್ನಗೆ ಚಂದ
- Mareppa manegar
24 Jun 2016, 01:04 pm
ಮರೆಯುವುದೆಂತು ನೀ ಕೊಟ್ಟ ಪ್ರೀತಿ
ಕಣ್ಮರೆಯಾಗಿದೆ ನಾ ನಗುವ ರೀತಿ
ಬಯಸುವುದೊಂದೆ ನೀನೆ ನನ್ನ ಬಾಳ ಸಂಗಾತಿ
ನೀನಿಲ್ಲವಾದರೆ ಯಾರೂ ಊಹಿಸಲಾರರು ನನ್ನ ಪಜೀತಿ...!!!
- ಸಾಗರ್ ಸಿದ್ದು
24 Jun 2016, 11:51 am
ಅಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ...
ಕೈ ಮೇಲೆ ಕೈ ಇಟ್ಟು ಆಣೆ ಮಾಡಿದೆ...
ಉಸಿರಿರೊವರೆಗು ಜೋತೆ ಇರುವೆನೆಂದು ನುಡಿದೆ...
ನಲ್ಲ ಇಂದೇಕೆ ಕೊಟ್ಟ ಭಾಷೆಯಿಂದ ದೂರ ನಡೆದೆ...
- Priyanka Tuppad
24 Jun 2016, 10:20 am
ಅಮ್ಮ ಅನ್ನೋ ನಿಜ ದೈವ ಇರುವಾಗ ಇಲ್ಲಿ
ನೀ ಗುಡಿ ಗೋಪುರ ಗಿರಿ ಶಿಖರ ಅಲೆಯೋದ್ಯಾಕ್ ಅಲ್ಲಿ....
ಹೆತ್ತೋಳ ಕಾಲಡಿಯಲಿ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟು....
- ameen
23 Jun 2016, 11:00 pm
ಕವನ
ಅದೊಂದು ನಯನ
ಭಾವನಾ ಲೋಕದಲ್ಲಿ
ರಾಜನಾಗುವುದು ಕವನ
ನಗೆ - ಮುನಿಸಿಗೂ
ದುಃಖ - ದುಮ್ಮಾನಗಳಿಗೂ
ಸಂತೋಷ ವೇಳೆಯೂ
ಹಾಜರಾಗುವುದು ಕವನ
ಪ್ರಾಚೀನ ಇತಿಹಾಸ,
ನವಯುಗದ ಪರಿಸರ,
ಭವಿಷ್ಯದ ವಾಣಿಯನ್ನೂ
ನುಡಿಯುವುದು ಕವನ
ಕವನದ ಮನನ
ಯಶಸ್ವಿಗೆ ಜನನ
- ಶಾಹಿದ್ ಉಪ್ಪಿನಂಗಡಿ
23 Jun 2016, 02:58 pm
ಸುಂದರ ಬದುಕಿದು
ಕಲ್ಪನೆಗೆ ಎಟುಕದು
ನಗುವಿದೆ-ಅಳುವಿದೆ
ಪ್ರೀತಿಯ ಜೀವಗಳ ಸ್ವರ್ಗವಿದೆ
ಬಣ್ಣ-ಬಣ್ಣದ ಭಾವನೆಗಳ
ಮುಗ್ದ ಮನಸುಗಳ ಅಂತರಾಳ
- ಸಾಗರ್ ಸಿದ್ದು
23 Jun 2016, 01:37 pm
ಕಣ್ಣ ಸನ್ನೆಯಿಂದ ಪರಿಚಿತರಾದೆವು ನಾನು-ನೀನು...
ಆಗ ನಿನ್ನ ಹೆಸರು ಬಿಟ್ಟು ಗೊತ್ತಿರಲ್ಲಿಲ್ಲ ಬೆರೇನು...
ಈಗ ಇಬ್ಬರ ಉಸಿರು ಬೆರೆತಂತ್ತಾಗಿದೆ ಹಾಲು-ಜೇನು...
ಇನಿಯ ನೀನಿಲ್ಲದೆ ನಾನು ನೀರಿಲ್ಲದ ಮೀನು...
- Priyanka Tuppad
22 Jun 2016, 11:24 pm
ಸಿದಾ-ಸಾದಾ ಕನಸಿನಲ್ಲಿ...
ನಿನ್ನದೆ ರಾಯಭಾರ ಅಲ್ಲಿ...
ಓಡಿ ಹೋಗಲು ಅತ್ತ-ಇತ್ತ ಇಣಕುವೆ ಎಲ್ಲಿ...
ನಿನ್ನನ್ನು ಬಿಗಿಯಾಗಿ ಅಪ್ಪಿಕೊಂಡಿರುವೆ ನನ್ನ ಮನದಲ್ಲಿ ...
- Priyanka Tuppad
21 Jun 2016, 06:48 pm
ಹೇಳದೆ ಹೊದೆಯ ನನ್ನೊಲುಮೆಯ ಇನಿಯ...
ಕೇಳುತ್ತಿಲ್ಲವೆ ನಿನ್ನಗೆ ನನ್ನ ಪ್ರೀತಿಯ ದನಿಯ...
ಒಮ್ಮೆ ಆದರು ಒರಿಸುಬಾ ಈ ಕಂಬನಿ ಹನಿಯ...
ಮನಸಲ್ಲೆ ಇರಿಸಿರುವೆ ನಿನ್ನನ್ನು ಕಟ್ಟಿ ಮನೆಯ...
- Priyanka Tuppad
21 Jun 2016, 02:42 pm