Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತರ್ಕ

ಮದ್ದಿಲ್ಲ, ಮತ್ತಿಲ್ಲ....
ಮನದ ಮದಕೆ ಮುಪ್ಪಿಲ್ಲ...
ಮಂತ್ರಕ್ಕೂ ತರ್ಕಕ್ಕೂ ಮರುಗೋಲ್ಲ...
ವಾದಕ್ಕೆ ಓಪ್ಪೋಲ್ಲ, ಓಪ್ಪಿಗೂ ವಾದಿಸೊಲ್ಲ!

ಈ ಮನಮರ್ಕಟಕ್ಕೆ ಮಣಿಯಲು ಹಾಳಾದ್ದು ಬರೋದೇಯಿಲ್ಲ...!!!
-ಮನರಂಗ

- ಮನರಂಗ

14 Jun 2016, 02:36 am

ಜಾನಕಿ

ನಾನು ನಿನ್ನ ಮಡಿಲಲ್ಲಿ
ನೀನೋ ನನ್ನ ಖಣಿಯಲ್ಲಿ
ವ್ಯವಹಾರವೆಂದನಿಸಿದರೆ
ಸುಟ್ಟಾಕು ನನ್ನ ದೇಹವ
ಮರಳಿ ಬೇಡಲಾರೆ ಈ ಜಗವ...

- Ravi Rock

14 Jun 2016, 01:55 am

ಕನಸು

ಸುರ್ಯನ ಮರನ
ಚಂದ್ರನ ಜನನ
ತಾರೆಗಳ ತೋರನ
ರಾತ್ರಿಯ ಸಿಂಚನ
ತಂಗಾಳಿಯ ತಂಪನ
ಒಮ್ಮೆಯಾದರೂ ಕಾನು
ಕನಸಿನಲ್ಲಿ ನನ್ನನ...


ಅರುಣಕುಮಾರ..

- arun

13 Jun 2016, 04:44 pm

ನಿನಗಾಗಿ ಕಾದಂಬರಿ

ಏನೆಂದು ಬಣ್ಣಿಸಲಿ ನಿನ್ನ ಪ್ರೀತಿಯ
ಪರಿ, ನಿ ಬಂದಿರುವೆ ಮುಡಿದು ಕನಕಾಂಬರಿ,
ನೀ ನನ್ನ ಕರಿ, ನಾ ಬರುವೆ ಹಾರಿ, ಓ...
ಪ್ರೀಯತಮೆ ನಿನಗಾಗಿ ನನ್ನೀ...
ಕಾದಂಬರಿ...

- ಶಶಾಂಕ್.ಅಂಗಡಿ

13 Jun 2016, 06:27 am

ನೀನೊಮ್ಮೆ ಬರಬಾರದೇ ?

ಒಡಲ ನೋವಿಗೆ ಸ೦ತೈಕೆಯೇ ಇರದೆ
ನಾ ಸೋತು ಹೋಗುವ ಮುನ್ನ..
ಕನಸು ಕಲ್ಪನೆಗಳ ನಡುವೆ
ನಾ ಬೆಂದು ಹೋಗುವ ಮುನ್ನ..
ಸಾವಿರಾರು ಭಗ್ನ ಪ್ರೇಮಿಗಳಲ್ಲಿ
ನಾನೋಬ್ಬನಾಗುವ ಮುನ್ನ..
ನೀನಿಲ್ಲದೆ ಬರುವ ನಾಳೆಗಳ ನೆನೆದು
ಅತ್ತು ಅತ್ತು ನಿದ್ದೆ ಬರುವ ಮುನ್ನ
ನೀನೊಮ್ಮೆ ಬರಬಾರದೇ ?

- nawaz saziya

10 Jun 2016, 04:33 pm

ಕನ್ನಡ

ಓ ಮನವೇ ಚೈತನ್ಯ ತುಂಬಿ
ಕನ್ನಡಾಂಬೆಯ ಹೆಮ್ಮೆಯ ಪುತ್ರನು ನೀನಾಗು

ಉತ್ತರ , ದಕ್ಷಿಣ , ಮಧ್ಯೆ , ಕರಾವಳಿ ಏನ್ನದೇ
ಹೈದರಬಾದ್ , ಮುಂಬೈ ಕರ್ನಾಟಕ ಏನ್ನದೇ
ಎಲ್ಲವನ್ನೂ ಒಗ್ಗೂಡಿಸುವ ಕನ್ನಡದ ಕಟ್ಟಾಳು ನೀನಾಗು

ಅಕ್ಕಡ , ಎನ್ನಡ ,ಎಕ್ಕಡ , ಬಯ್ಯ ಎನ್ನದೇ
ಕನ್ನಡ ಮರೆತು ಸತ್ತಿಂತಿಹೀರ ಕನ್ನಡಿಗರನ್ನು ಬಡಿದೆಬ್ಬಿಸಿ
ಕನ್ನಡಾಂಬೆಯ ಸಿಂಗರಿಸುವ ಧೀರ ಕನ್ನಡಿಗಾನು ನೀನಾಗು

ಕುಲವೆನದೇ ಜಾತಿ ಧರ್ಮವೆನದೇ ಕನ್ನಡ ಕಟ್ಟುವ ಕಟ್ಟಾಳು ನೀನಾಗು

ಶರಣ ದಾಸರು , ಸಂತರು ,ಸಾಹಿತಿಗಳ ಕನ್ನಡಾಭಿಮಾನಿ ನೀನಾಗು

ವಿಶ್ವಕ್ಕೆ ಕನ್ನಡದ ಹಿರಿಮೆಯ ಸಾರಿದ ಸಾಧಕರ ಹಿಂಬಾಲಕನು ನೀನಾಗು

ಜೋಗದ ಸಿರಿ ,ಬೇಲೂರು ಶಿಲೆಯಲ್ಲಿರುವ ಕಲೆ
ಮುತ್ತು ರತ್ನಗಳ ಮಾರಿದ ನೆಲೆ
ಅಂಬಾರಿಯ ಗತ ವೈಭವ ಕಡಲತೀರದ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಸಾರುವ ಕನ್ನಡಾಂಬೆಯ ಮಗನು ನೀನಾಗು

ಎಲ್ಲೆ ಇರು ಹೇಗೆ ಇರು ಕನ್ನಡದ ಕೀರ್ತಿ ಪಾತಕೆ ಹಾರಿಸುವ ಕನ್ನಡಿಗನು ನೀನಾಗು

ವಿಶ್ವ ಸಾಧಕರಲ್ಲಿ ನೀನೊಬ್ಬ ಸಾಧಕನಾಗಿ
ಕನ್ನಡನಾಡ ಸಿರಿಯ ಸ್ವೂರ್ತಿ ಚಿಲುಮೆಯು ನೀನಾಗು

ಓ ಮನವೇ ಚೈತನ್ಯ ತುಂಬಿ
ಕನ್ನಡಾಂಬೆಯ ಹೆಮ್ಮೆಯ ಪುತ್ರನು ನೀನಾಗು.

- ಎ ಜಿ ಶರಣ್

10 Jun 2016, 07:52 am

ಆಸೆಯ ಕವಿ

ಇಂಪಾದ ಸಂಗೀತ ನಿನಗಾಗಿ ಚಂದಾ.
ತಂಪಾದ ಗಾಳಿ ನಿನಗಾಗಿ ತಂದಾ.
ನವಿರಾದ ಚಂದಿರ ನಿನಗಾಗಿ ಬಂದ.
ಆಸೆಯ ಕವಿ ನಿನಗಾಗಿ ಬರೆದ.

- Baba jan

09 Jun 2016, 01:42 am

ಏನೇಳಲೇಳ ಗೆಳತಿ

ಧರೆಗೆ ಬಿದ್ದ ಪ್ರೇಮದ ಚರಿಗೆ
ಒಡೆದು ಚದುರಿ ಪ್ರೀತಿಯು ಕರಗಿ
ಕವುಚಿ ಬಿದ್ದಿತಲ್ಲೆ ಮನಸು
ಕಳ್ಳ ನೋವ ಕತ್ತಲೆ ನುಂಗಿ!

ಪ್ರೇಮಸೌಧ ಅಂಗಳ ತುಂಬಾ
ಪಾಚಿ ಪರಿಗೆ ಪರಿ ಪರಿ ಮುಳ್ಳ
ಕಾಡಿನಾಗೆ ಕತ್ತೆಯ ಓಟ
ಕಾಲಿನಡಿಗೆ ರಕ್ಕಸ ಮುಳ್ಳ !

ಗಾಳ ಸಿಕ್ಕಿಕೊಂಡ ಗಡವನ ಗಂಟ್ಲು
ಅಕ್ಕಿ ಇರದ ಮನೆಗೆ ನೂರಾರು ನೆಂಟ್ರು
ತೆಕ್ಕೆ ಬಿಗಿದು ಬಿರಿದು ಬೆತ್ತಲೆ ದೇಹ
ಬಿಟ್ಟು ಬದಿಗೊತ್ತಿ ಮತ್ತೆಲ್ಲೋ ಹೊಂಟ್ಲು!

- ಶ್ರೀಗೋ.

08 Jun 2016, 04:28 pm

ನೀ ಏಕೆ ಅವಳ ಮನವ ಕಲಕುವೇ...

"ನೀ ಏಕೆ ಅವಳ ಮನವ ಕಲಕುವೇ..??"

ನನ್ನ ನಿನ್ನ ಸ್ನೇಹ
ಅದು ಪ್ರೇಮ ಮೋಹವಲ್ಲ
ಅದು ಕಾಮ ದಾಹವಲ್ಲ
ನಿನ್ನ ನಾ ಕಂಡೆ
ನನ್ನ ನೀ ಕಂಡೆ
ಕಾಣುತ್ತಾ ಏಕೆ ಈ ಮನಸ್ಸಿನಲ್ಲಿ ತಳಮಳ
ನಿನ್ನ ಧ್ಯೇಯ ಒಂದೆ ನನ್ನ ಧ್ಯೇಯ ಒಂದೆ
ಹೀಗಿರಲು ಏಕೆ ಈ ಮನಸ್ಸಿನಲ್ಲಿ ತಳಮಳ

ಜಗತ್ತಿನ ಮೂಲೆಮೂಲೆಯಲ್ಲೂ ಕೇಳುತಿಹುದು
ಈ ಬಗೆಯ ಆರ್ಥನಾಧ
ಓ ಮನಸೇ.........
ನೀ ಏಕೆ ನನ್ನ ಕಲಕುವೆ

ಎಲ್ಲ ಕಡೆ ಗೆಳೆತನವೆಂಬ ಹೂ ಅರಳಿ ನಿಲ್ಲಲಿ.
ಈ ಬಗೆಯ ವಿಷಯಗಳೆಲ್ಲಾ ಅಳಿಯಲಿ ಎನ್ನುವಾಗ
ಓ ಮನಸೇ.........
ನೀ ಏಕೆ ನನ್ನ ಕಲಕುವೆ

ಪ್ರಿಯ ಗೆಳತಿ ನೀ ಜನ್ಮ ತೆಳೆದ ಕಾರಣವೇ ಬೇರೆ
ನಾ ಜನ್ಮ ತೆಳೆದ ಕಾರಣವೇ ಬೇರೆ
ನಿನ್ನ ನನ್ನ ಆಕಾಂಕ್ಷೆ ಬೇರೆಬೇರೆಯೇ
ಅದು ತೀರಿಬರಲಿ
ನಾನು ನಿನ್ನ ಉತ್ತಮ ಗೆಳೆಯನೆಂದು ಅರಿಯಲಿ

ಇದನ್ನರಿತ ನನ್ನ ಮನವೇ.........
ನೀ ಏಕೆ ಅವಳ ಮನವ ಕಲಕುವೇ...??

ಇದು ನ್ಯಾಯವೇ...??
ಇದು ಧರ್ಮವೇ...??
ಇದು ನೀತಿಯೇ...??
ನೀ ಏಕೆ ಅವಳ ಮನವ ಕಲಕುವೇ...??

ಇದೆಲ್ಲಾ ನಿನ್ನ ನಿಶ್ಚಯವಾದರೆ ನನ್ನ ಕ್ಷಮಿಸು ನನ್ನ ಮನವೇ..........
~ಪ್ರವೀpk

- PraVeeN Jpk

08 Jun 2016, 05:47 am

ಬಾಳು ಬಂಗಾರವಾಗಲಿ......

ಬನ್ನಿ ಬಾಂಧವರೆ ಬೆಳಕ
ಹಾದಿಯ ಹುಡುಕುತ ಹೋಗೋಣ
ಬನ್ನಿ ಬದುಕ ಬೆಳಗುವ ಬಾಳು ಬಂಗಾರವಾಗಲಿ......

ಬೆಳಗುವ ಬಿಳಿ ಬೆಳಕ ಬಾಳು
ಕತ್ತಲೆಯ ಕಂಬನಿಯಲಿ ಕವಿದಿಹುದು
ಅಂತರಂಗದ ಅಜ್ಞಾನ ಅಡಗಿ
ಜ್ಞಾನೇಂದ್ರಿಗಳ ಜ್ಞಾನ ಅರಳಿ
ಕಣ್ಕಮಲಗಳರಳಿ ಕತ್ತಲೆ ಕಳೆಯಲಿ
ಬನ್ನಿ ಬದುಕ ಬೆಳಗುವ ಬಾಳು ಬಂಗಾರವಾಗಲಿ......
~ಪ್ರವೀpk

- PraVeeN Jpk

08 Jun 2016, 05:40 am