Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರಿಗೆ ಯಾರುಂಟು......???

ಯಾರಿಗೆ ಯಾರುಂಟು......???

ಯಾರಲ್ಲಿ ಯಾರಿಹರು
ಯಾರು ಯಾರಲ್ಲಿಹರು....

ಯಾರಿಗೆ ಯಾರೋ
ಯಾರು ಯಾರಿಗೋ.....

ಯಾರನ್ನು ಯಾರು....
ಯಾರು ಯಾರನ್ನು ನೆನೆವರು....??

ಯಾರಿಗೆ ಯಾರಾಗುವರೋ.....
ಯಾರ ಋಣ ಯಾರಲ್ಲಿದೆಯೋ....
ಯಾರ ಮನ ಯಾರಲ್ಲಿ ಕರಗುವುದೋ....

ಯಾರು ಅರಿಯರು...... ??


ಯಾರೂ ಅರಿಯದು...
~ಪ್ರವೀpk

- PraVeeN Jpk

08 Jun 2016, 05:38 am

“«ಪ್ರತಿಬಿಂಬ» ”

ಸೂರ್ಯೋದಯ ಸೊಂಪಾದ ಸೌಂದರ್ಯ
ದಿನದಾರಂಭದ ನವೋಲ್ಲಾಸ
ಕಡಲತೀರದಲಿ ಹಿತವಾದ ಕಣ್ಣೋಟ
ಕುಂಕುಮ ಚೆಲ್ಲಿ ಕೆಂಪಾದ ಕಡಲಾಗಸ
ಸೂರ್ಯಾಸ್ತ ಕೇಳಲಿಂಪಾದ ಔದಾರ್ಯ
ನೇಸರನಿಗೆ ಆಗಸಬಿಟ್ಟ ಸಂತಸ
ಚಂದಿರಗೆ ಸೂರ್ಯನ ಕೊಲ್ಲುವ ಆಟ
ರಕ್ತ ಚೆಲ್ಲಿ ಕೆಂಪಾದ ಕಡಲಾಗಸ

ಕಣ್ಣಿಗೆ ಸೌಂದರ್ಯ ಸವಿದ ಸುಖ
ನೇಸರಗೆ ಉಪಕಾರದ ಸುಖ
ಚಂದಿರಗೆ ಪ್ರತಿಕಾರದ ಸುಖ
ಕಡಲು-ಆಗಸಕೆ ಪ್ರತಿಬಿಂಬಿಸಿದ ಸುಖ

~ಪ್ರವೀpk

- PraVeeN Jpk

08 Jun 2016, 05:35 am

ಗೋಡೆ

ಗೋಡೆಯ ಮೇಲೆ
ಜೊತೆಯಲ್ಲೇ ಹೃದಯದ
ಚಿತ್ರ ಕೆತ್ತಿದ್ದವಳು
ಈಗ ಹೃದಯವನ್ನೇ
ಗೋಡೆಯಂತೆ
ಕೆತ್ತಿ ಹೋದಳು....;-(

- Gangu Dmk

07 Jun 2016, 05:31 pm

ಪ್ರೇಮದ ಪರಿ

ಸಾವಿರಾರು ಕನಸುಗಳು ನಿನ್ನೊಂದಿಗೆ
ಜೊತೆಗೂಡಿ ಸಾಗಿದೆ
ಈ ನನ್ನ ಪಯಣ,
ಮನಸ್ಸಿನ ವೇದನೆಯನ್ನು
ನಿನಗೆ ಹೇಗೆ ತಿಳಿಸಲಿ ?
ಹೃದಯವು ಹಳೆಯ ನೆನಪುಗಳನ್ನೇ ಕಾಡುತ್ತಿದೆ,
ಅವಳನ್ನು ಮರೆತು ನಿನ್ನೊಂದಿಗೆ
ನಾ ಹೊಸ ಜೀವನ ಶುರು ಮಾಡಬೇಕಾಗಿದೆ.
ದಯಮಾಡಿ ಈ ನನ್ನ ಪ್ರೇಮದ ಪರಿಯನ್ನು
ಅರಿತು ಗೆಲುವಿನ ದಡ ಸೇರಿಸ್ಸು.

- Ranganath KS

06 Jun 2016, 02:13 am

ವರದಕ್ಷಿಣೆ ಒಂದು ಭಿಕ್ಷಾಟನೆ

ತಿಂಗಳು ಹೊತ್ತಲು ಅಮ್ಮ
ನನ್ನ ಬರುವಿಕೆಗೆ ಕಾದರು ಎಲ್ಲ
ನಾ ಬಂದೆ ಧರೆಗೆ ಸಂಭ್ರಮದಿ
ಅಂದೆಲ್ಲರ ಮನದಲಿ ಹಬ್ಬವೋ ಹಬ್ಬ

ಕಾದು ಕುಳಿತಿರುವರೆಲ್ಲಾ
ಯುವರಾಜ ಬರುವನೆಂದು
ಎಲ್ಲವ ಹುಸಿಗೊಳಿಸಿ
ನಾ ಬಂದೆ ಹೆಣ್ಣಾಗಿ

ಬೆಳೆದು ಬಂದೆ ನಾ ಕೌಮಾರಕ್ಕೆ
ತೊಡಗಿದರು ಹುಡುಕಲು ಕುಮಾರನನ್ನು
ಹುಡುಕಿ ಹುಡುಕಿ ಸಾಕಾಯಿತು ಅವರಿಗೆ
ವರದಕ್ಷಿಣೆ ವಿರೋಧಿ ವರನನ್ನು

ಕೊನೆಗೂ ಲಭಿಸಿದನೊಬ್ಬ ವರ
ಪಡೆದ ಒಂದಿಷ್ಟು ಭಿಕ್ಷೆ
ಮುಗಿಸಿ ಶುರುವಾಯಿತು ಶಿಕ್ಷೆ
ನನ್ನ ಅಂತ್ಯದಲ್ಲೇ ಮುಗಿಯಿತು ಲಕ್ಷ್ಯ

- siyab

04 Jun 2016, 12:15 am

ಕೋಗಿಲೆ

ವಸಂತ ಋತುವಿನಲಿ
ನಿನ್ನ ದನಿಯ ಕೇಳುತ ಮರೆತೆನು
ನಾ ನನ್ನನೆ - ಓ ಕೋಗಿಲೆ...
ಹೋಲಿಕೆಯಲಿ ನೀ ನೋಡಲು ಕಾಕನಂತಿದ್ದರೂ,
ನಿನ್ನ ದನಿಯೇ ಅತಿಮಧುರ...
ಮಾವಿನ ಚಿಗುರ ತಿಂದು ನೆಲೆಸಿರುವೆ
ನೀ ಕಾನನದಲ್ಲಿ...
ನಿನ್ನ ದನಿಗೆ ಮರುಳಾಗದಿಹನಿಲ್ಲ
ಈ ಜಗದಲ್ಲಿ....
ಏನಿದ್ದರೂ ಸಾಕಿಲ್ಲವೆಂಬಂತೆ ಬದುಕಿಹೆವು ನಾವಿಲ್ಲಿ....
ನೀಡು ನಿನ್ನ ಸೌಮ್ಯತೆ
ಈ ಜನರಲ್ಲಿ....
ನಿನಗಾರು ಸಾಟಿಯೇ ಕೋಗಿಲೆ...
ನಿನಗೆ ನೀನೇ
ಸಾಟಿಯು - ಓ ಕೋಗಿಲೆ...
ಬಂದೊಮ್ಮೆ
ಹಾಡೇ - ಓ ಕೋಗಿಲೆ.....

- Rohit

03 Jun 2016, 05:12 pm

ಹುಚ್ಚು ಪ್ರೇಮಿ..

ನಾನೀದ್ದೇ ನನ್ನದೇ ಗುಂಗಿನಲಿ,
ನೀನೇಕೆ ಬಂದೆ ಎನ್ನ ಮನಸಿನಲಿ,
ಹುಚ್ಚು ಹಿಡಿಸುವ ಮುನ್ನ,
ಬಿಚ್ಚಿ ಹೇಳು ನನ್ನ ಹುಚ್ಚು ಗೆಳತಿ,
ನೀನಾಗಿ ಬಾ ನನ್ನ ಬಾಳ ಸಂಗಾತಿ,
ಇದೇ ನನ್ನ ಕೇೂನೆಯ ವಿನಂತಿ.

- F. K. GOUDRU

03 Jun 2016, 11:07 am

ನಾಚು-ನಡುಗು

ಅವಳಲ್ಲಿ ಹಸೆಮಣೆಯಲ್ಲಿ
ಕುಳಿತು ನಾಚುತ್ತಿದ್ದಾಳೆ...
ನನಗಿಲ್ಲಿ ಶವಪೆಟ್ಟಿಗೆಯೊಳಗೆ
ಮೈನಡುಗುತ್ತಿದೆ....

- ಸುಲ್ತಾನ್ ಮನ್ಸೂರ್

02 Jun 2016, 01:36 pm

ಕಂಗಳ ಲೇಪನ

ಮುಸುಕಿನ ವೇಳೆಯಲಿ ನಡೆಯುವಾಗ
ಬಳ್ಳಿಯನು ಕಂಡು
ತಣ್ಣಗೆ ಬೀಸುವ ಗಾಳಿಗೆ ಬಳ್ಳಿ
ಬಳುಕುವ ಪರಿಗೆ ಮುದಗೊಂಡು
ನಿಂತ ನನಗೆ,
ಅದಕ್ಕಿಂತ ಸರಿಸಾಟಿ ನಾನಿಲ್ಲವೆ!
ಎಂಬಂತೆ ನಿನ್ನ ರೂಪು ನನ್ನ ಕಣ್ಣಿಗೆ ಲೇಪಿಸಿತು.

- ಪರಮ್

02 Jun 2016, 12:11 pm

ಮುಗ್ದ ಪ್ರೇಮ

ಬರಿ ದೇಹ ನಾನು
ನನ್ನುಸಿರು ನೀನು

ಬರಿ ಕಣ್ಣ ರೆಪ್ಪೆ ನಾನು
ನನ್ನ ಕಣ್ಣ ಬೆಳಕು ನೀನು

ಬರಿ ಹೃದಯ ನಾನು
ಅದರೊಳಗಿನ ಬಡಿತ ನೀನು

ಈ ಬದುಕಿನಲ್ಲಿ ನಿನ್ನ
ಬಿಟ್ಟ ನಾನು ನೀರಿಲ್ಲದ ಮೀನು

- Harsha

02 Jun 2016, 09:19 am