Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಘಮ

ನಿನ್ನ ದೇಹದ ಘಮ
ನನ್ನ ಮೈಯಿಂದ ಇನ್ನೂ
ಮಾಸಿಲ್ಲ..
ಇಲ್ಲಿ ಆಗಲೇ
ನನ್ನ ಕಫನದ ಬಟ್ಟೆಗೆ
ಕರ್ಪೂರ ಹಚ್ಚುತ್ತಿದ್ದಾರೆ...

- ಸುಲ್ತಾನ್ ಮನ್ಸೂರ್

31 May 2016, 12:17 pm

ನೆನಪಿದ್ಯಾ!

ನಾ ನಿನ್ನ ಮರೆಯಲಾರೆ
ನಿನ್ನ ಬಿಟ್ಟು ಇರಲಾರೆ
ಅಂತಿದ್ದೆ ಏನಪ್ಪ ಇದೇನಾ ಅಂದ್ಲು,
ಅದಕ್ಕೆ, ನಾನಂದೆ
ಮರೆತಿದ್ದರೆ ತಾನೆ ನೆನೆಸಿಕೊಳ್ಳೋಕೆ!


- ಪರಮ್

- ಪರಮ್

31 May 2016, 07:40 am

ಈಗಿನ ಹುಡುಗಿಯರು.

ಈಗಿನ ಹುಡುಗಿಯರಿಗೆ ಸುಮ್ ಸುಮ್ಮನೆ
ನಗೋದು ಒಂದು ಫ್ಯಾಷನ್.ಅವರಿಗೇನು
ಗೊತ್ತು, ಹುಡುಗರಿಗೆ ಆಗುವ ಟೆನ್ಶನ್

- Muthappahd

30 May 2016, 12:17 pm

ಆಕರ್ಷಣೆ

ಕಣ್ಣೆದುರು ನೀ ಬಂದ ಆ ಒಂದು ಕ್ಷಣ
ಎದೆಯಲ್ಲಿ ಆದ ಆ ತಲ್ಲಣ
ನೆನೆಯುವಂತಾಗಿದೆ ಪ್ರತಿಕ್ಷಣ
ಮರೆಯಲಾಗದು ಇರುವವರೆಗು ಈ ಪ್ರಾಣ.


-ಪರಮ್

- ಪರಮ್

30 May 2016, 08:21 am

ಪ್ರೀತಿಯ ಅಮ್ಮ

ಸಾವಿರಾರು ಮೈಲಿ ದೂರ ಕಳುಹಿಸಿದೆ ನೀ ನನ್ನ
ಹಾಗಿದ್ದರು ಸಾವಿರಾರು ಕ್ಷಣಗಳು ನಾ ನೆನೆಯುವೆ ನಿನ್ನ
ನಿನ್ನ ಪ್ರೀತಿಯು ಆಕಾಶದಲ್ಲಿರುವ ತಾರೆಗಲಿಗಿಂಥ ಚೆನ್ನ
ಆದರಿಂದ ನೀನೆ ನನ್ನ ಮುದ್ದಿನ ರನ್ನ

- Beena

28 May 2016, 03:00 am

ನನ್ನ ಬಾಳ ಭಾಗ್ಯದೇವಿ

ನಗುವ ಒಲವ ಮೀಟಿ
ಹೃದಯ ಬಡಿತ ದಾಟಿ
ನೀ ಬಂದೆ ನನ್ನ ಬಾಳಲಿ
ಮಮತೆ ನೀ ತಂದೆ ತೋಳಲಿ...!!ಪ!!

ನೋವಿನ ಕಡಲು ದಾಟುತ
ಮೀನಿನ ಹೆಜ್ಜೆ ಹಾಕುತ
ಕಂಡೆ ಬಾಳಲ್ಲಿ ಬೆಳಕನ್ನು
ನಿನ್ನ ಜೊತೆಗೂಡಿ ನಾ ಸಾಗಲು

ಉಸಿರು ಬಿಸಿಯಾಗಿ ನಿನ್ನದೆ ನೆನಪಾಗಿ
ಸಾಗಿತು ಈ ಬದುಕಿನ ದೋಣಿಯು
ಸಾರಥಿಯು ನೀ ನನ್ನ ಜೊತೆಗೂಡಲು
ಬಯಲಾಯಿತು ಭಯವೆಂಬ ಈ ಕತ್ತಲೆಯು

ನೂರು ಜನ್ಮ ಕಳೆದರು
ಬೇಡುವೆ ನಿನ್ನ ವರವಾಗಿ
ಆ ದೇವ ನಮ್ಮ ನೋಡುತ
ಹರಸಲಿ ನಮ್ಮ ಬಾಳ್ವೆಗೆ
ಸುಖ ಶಾಂತಿ ನೆಮ್ಮದಿಯ ನೆಲೆ ನೀಡುತ....

- Irayya Mathad

23 May 2016, 05:22 am

ದೇವರ ವಾಕ್ಯವು..

ಓ ನನ್ನ ದೇವರೇ ನಿನ್ನ ವಾಕ್ಯವು..
ಸುಡುವ ಬಿಸಿಲಿನಲ್ಲಿ ‌ತಂಪಾದ ನೆರಳಂತೆ
ಕಡು ಭೈಗುಳ ನಡುವೆ ಸಮಾಧಾನದ ಮಾತಿನಂತೆ
ಗಾಡಾಂಧಕಾರದಲ್ಲಿ ನಂಬಿಕೆಯ ಬೆಳಕಿನಂತೆ
ದಾಹದ ಸಮಯದಲ್ಲಿ ಜೀವ ಜಲದ ಬುಗ್ಗೆಯಂತೆಯು ಇದೆ.

- Madan R

22 May 2016, 12:01 pm

ಖಾಲಿಹಾಳೆ

ಬರೆಯುವುದಕ್ಕೆ ಸಾಲುಗಳಿಲ್ಲ ಆದರು ಅವಳೆ ನಾಯಕಿ
ಕನಸುಗಳು ಸ್ಪಷ್ಟವಾಗಿಲ್ಲ ಆದರು ಅವಳೆ ಅಲ್ಲು
ನೆನಪುಗಳು ಮಾಸಿಲ್ಲ ಅವಳಿಲ್ಲದೆ
ಮೊದಲ ಪುಟವೆ ಖಾಲಿಹಾಳೆ
ಮುನ್ನುಡಿಯು ಅವಳೆ ಖಾಲಿಯಾಗಿಯೆ
ಎಲ್ಲವು ಅಸ್ಪಷ್ಟ ಅವಳ ನಗುವೊಂದಿಗೆ
ಏನು ಹೊಳೆಯದು ಬರೆಯಲು ಆದರು ಬರೆಯೊ ಚಪಲ
ಎಲ್ಲವೂ ಅವಳಿಂದಾನೆ ಬರೆದೆ ಬರೆದೆ ಅಂತ್ಯವೇ ಇಲ್ಲ
ಗೀಚಿದೆ ಬಿಳಿಯ ಹಾಳೆಯ ಮೇಲೆ
ಅದು ಬಣ್ಣ ಬಳಿದೊಡನೆ ಕುಣಿದಾಡಿತು
ಮುನ್ನುಡಿ ಖಾಲಿ ಹಾಳೆಯಾದರು
ಕಥೆಗೆ ಅಂತ್ಯ ಕಾಣಲಿಲ್ಲ...

- ರವಿಕುಮಾರ

17 May 2016, 03:52 pm

ಅವಳು ಮೌನ

ಕವಿತೆಯ ಪದಗಳೆಲ್ಲವು ಖಾಲಿಯಾದವು
ಅವಳ ವರ್ಣನೆಯ ವಾಕ್ಯಗಳೆಲ್ಲವು ಮುಗಿದುಹೋದವು
ಇನ್ನು ಮುಂದೆ ಅವಳು ಮತ್ತು ನಾನೆ
ಖಾಲಿ ಹಾಳೆಗಳೆ ಸಂಭಾಷಣೆ
ಉಳಿದಿದ್ದ ಪದಗಳ ಹುಡುಕಾಟ
ಬಿಳಿ ಹಾಳೆಯು ಬಣ್ಣ ಬಳಿದುಕೊಳ್ಳುತ್ತಿತ್ತು
ನನ್ನ ಲೇಖನಿ ನಿಂತು ನೋಡುತ್ತಿತ್ತು
ಬರೆಯಲು ಕೈ ಚಾಚಲಿಲ್ಲ
ಅವಳು ಮೌನವಾಗಿದ್ದಳು...

- ರವಿಕುಮಾರ

16 May 2016, 02:13 pm

ಮುದ್ದು ಪ್ರೇಮ

ಅವನು ಬಲು ಮುದ್ದಾದ ಹುಡುಗ
ಅವಳ ಕನಸಿಗೆ ಇವನೆ ಪಯಣಿಗ ಪ್ರೇಮದ ಹೂವುಗಳ ಮಳೆಗೆ
ಇಬ್ಬರ ಒಲವಿನ ಅಪ್ಪುಗೆಗೆ
ಆ ಚಂದ್ರನು ತನ್ನ ಕಾಂತಿಯ
ಸೊಗಸಾದ ನಗುವನ್ನು ಚೆಲ್ಲುತಿರುವನು!!!

ಮೌನದ ಹುಡುಗಿ ನಾಚುತ್ತಿರಲು
ಚೆಂದದ ಹುಡುಗ ಸೊಲುತ್ತಿರುವನು
ಕಣ್ಣುಗಳು ಅರಿಯದ ಮಾತನ್ನು
ಹೃದಯ ಕೂಗಿ ಹೇಳುತಿದೆ
ಕಳೆದುಕೊಂಡ ಮನಸ್ಸುಗಳನ್ನು ಹುಡುಕುವ ಈ ಜೋಡಿ
ಪ್ರೀತಿ ಇವರಿಗೆ ಮಾಡಿತೆ ಮೊಡಿ!!!!!!

- Ranjitha

15 May 2016, 04:35 pm