ಅನುಕ್ಷಣವು ನಿನ್ನೊಂದಿಗೆ ಕಳೆದ ನೆನಪುಗಳು,
ನಿನ್ನಂತ ವರನ್ನು ಹುಡುಕಿದರೂ ಸಿಗಲಾರದ ಸ್ನೇಹಿತರು ನನ್ನ ಸುತ್ತ,
ಮನ ಬಯಸುತಿದೆ ನನ್ನ ಪ್ರತಿ ಹೆಜ್ಜೆಯ ಜೊತೆಗೆ ನಿನ್ನ ಮಾತುಗಳು;
ನಿನ್ನ ಬಿಟ್ಟು ಬೇರಾರಲ್ಲಿಯು ಹೇಳಲಾಗದ ಮನಸಿನ ನೋವುಗಳು;
ನೀನಾದರೂ ಸರಿ ನನ್ನವಳು ;
ನಿನ್ನನ್ನೇ ಬಯಸುತ್ತಿದೆ ನನ್ನಿ ಜೀವನದ
ಮುಂದಿನ ಕ್ಷಣಗಳು.
"ಗುರಿಯನ್ನು ಮುಟ್ಟಲು ಏಕೆ ಯತ್ನಿಸಬಾರದು?
ಸೋಲಿನಿಂದ ನಾವು ಹೆಚ್ಚು ಬುದ್ಧಿವಂತರಾಗುವೆವು, ಕಾಲ ಅನಂತವಾಗಿದೆ.
ಗೋಡೆಯನ್ನು ನೋಡು, ಗೋಡೆ ಎಂದಾದರು ಸುಳ್ಳು ಹೇಳೀತೆ?
ಅದು ಯಾವಾಗಲೂ ಒಂದು ಗೋಡೆಯೇ ಆಗಿರುತ್ತದೆ.
ಮನುಷ್ಯ ಸುಳ್ಳನ್ನು ಹೇಳುತ್ತಾನೆ. ಆದರೆ ಅವನು ಒಬ್ಬ ದೇವನೂ ಆಗಬಲ್ಲ.
ಏನನ್ನಾದರೂ ಮಾಡುವುದು ಮೇಲು. ಅದು ತಪ್ಪಾದರೂ ಚಿಂತೆ ಇಲ್ಲ.
ಇದು ಏನೂ ಮಾಡದೇ ಇರುವುದಕ್ಕಿಂತ ಮೇಲು.
ಏನದರೂ ಮಾಡಿ."
ಹೆಣ್ಣೇ ಎಂದು ಏಕೆ ಕೀಳಾಗಿ ನೋಡುವೆ...
ಹೆಣ್ಣು ಇಲ್ಲದ ಮನೆ ಸುಡುಗಾಡಿನಂತೆ...
ನಿನ್ನ ತಾಯಿಯಾಗಿ, ನಿನ್ನ ಅಕ್ಕತಂಗಿಯೂಗಿ, ನಿನ್ನಮಡದಿಯಾಗಿ ಮಾತ್ರ ಬೇಕೆಂದು, ನಿನ್ನ ಮಗಳಾಗಿ ಯಾಕೆ ಬೇಡ ಎನ್ನುವೆ...?
ಹೆಣ್ಣು ಹುಟ್ಟಿದರೆ ಆಯ್ಯೆ ಎಂದೆ...?
ಹೆಣ್ಣು ಕಲಿತರೆ ಸೊಕ್ಕೆಂದೆ...
ಹೆಣ್ಣು ಕಲಿಯದಿದ್ದರೆ ಏನೂ ತಿಳಿಯದವಳು ಎಂದೆ...
ಹೆಣ್ಣಿಗೆ ಸ್ಥಾನವಿಲ್ಲವೆಂದೆ...
ಹೆಣ್ಣು ಬಡವಳಿದ್ದರೆ ಜೀವನದುದ್ದಕೂ ಅವಮಾನ ಅಪಮಾನ ಮಡುವೆ...
ಹೆಣ್ಣು ಶ್ರೀಮಂತಳಾದರೆ ಗೌರವಿಸುವೆ ಏಕೆ?
ನಾನು ಗಂಡು, ನೀನು ಕೇವಲ ಹೆಣ್ಣು ಎಂದು ಗರ್ವದಿಂದ ಹೇಳಬೇಡ...
ಹೆಣ್ಣಿನ ಸರಿಸಮ ನಿನಾಗಲಾರೆ...
ಹೆಣ್ಣು ಇಲ್ಲದ ನೀನ್ನ ಜೀವನ ಅಪೂರ್ಣ ಎಂದು ಮರೆಯಬೇಡ...
ಒಮ್ಮೆ ಹೆಣ್ಣುನ್ನು ಗೌರವಿಸಿ ನೋಡು...
ಒಮ್ಮೆ ಹೆಣ್ಣಿಗೆ ವಿದ್ಯೆಯನ್ನು ಕಲಿಸಿ ನೋಡು...
ಒಮ್ಮೆ ಹೆಣ್ಣಿಗೆ ಸ್ವಾತಂತ್ರ್ಯ ಕೊಟ್ಟು ನೋಡು...
ಒಮ್ಮೆ ಹೆಣ್ಣಿಗೆ ಜವಾಬ್ದಾರಿಯನ್ನು ವಹಿಸಿ ನೋಡು ...
ಒಮ್ಮೆ ಹೆಣ್ಣು ಮನಸು ಮಾಡಿದರೆ ಆಗದ ಕೆಲಸ ಕೂಡ ಸಾಧಿಸಿ ತೋರಿಸುವಳು...