Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೌನ ಮಾತಿನ ಓ ಗೆಳತಿ
ಮುತ್ತು ತಂದಿರುವೆ ಬಾ ಗೆಳತಿ
ಈ ನಿನ್ನ ಮೌನ ಮುರಿದು
ನನ್ನ ಈ ಪ್ರೀತಿಯುಡುಗೊರೆ ತೊಗಳಬಾರದೆ................
- Subbu
09 Dec 2015, 07:00 pm
ಆ ನೀರ ನೋಡು ಗೆಳತಿ ,ಆ ನೀರ ನೋಡು. ...
ಆ ನೀರಿನಲ್ಲಿರುವ ಆ ಮೀನಾ ನೋಡು ಗೆಳತಿ,
ಆ ಮೀನಾ ನೋಡು ...
ಆ ನೀರ ಬಿಟ್ಟು ಎಂದೆಂದಿಗೂ ಇರಲಾರದು ಆ ಮೀನು..
ಆ ಮೀನಿನಂತೆ ನ ನಿನ್ನ ಬಿಟ್ಟು ಎಂದೆಂದಿಗೂ ಇರಲಾರೆನು..
ನೀ........ ನನ್ನ ಉಸಿರಿನ ವಡತಿ.
ರವಿ ಮಾದೇವ ಬಸ್ತಿ .
- ರವಿ.ಮಾದೇವ naik
09 Dec 2015, 08:25 am
ಕವಿತೆ ಬರೆಯಲು ಕವಿ ನಾನಲ್ಲ,
ಆದರು ನಾ ನಿನ್ನ ವರ್ಣಿಸುವೆ ರವಿಗೆ,
ಅವನು ನೀಡುವನು ಜಗಕ್ಕೆ ಬೆಳಕು,
ನೀ ನೀಡಿದೆ ನನ್ನ ಜೀವನಕ್ಕೆ ಬೆಳಕು.
ರವಿ ಮಾದೇವ ಬಸ್ತಿ .
- ರವಿ.ಮಾದೇವ naik
09 Dec 2015, 07:58 am
ನಿನಗಾಗಿಯೆ ಕಾಯುತಿರುವೆ ಬರುವೆಯ ನನ್ನ ಬಿಟ್ಟು ಹೋಗುವೆಯ,ಇಷ್ಟ ಪಟ್ಟ ಈ ಪುಟ್ಟ ಹೃದಯದ ನೋವು ತಿಳಿಯದಾಯಿತೆ ನನ್ನ ನೆನಪು ಬಾರದಾಯಿತೆ, ನಿನ್ನ ನೆನಪಲ್ಲೆ ರಾತ್ರಿ ಹಗಲಿನಂತೆ ಕಳೆಯುತಿರುವೆ,ನೀನು ಹಗಲು ಸಹ ರಾತ್ರಿಯಂತೆ ಕಳೆಯುತಿರುವೆ ತಿಳಿಯದಾಯಿತೆ ನನ್ನ ಮನದಾಳದ ನೋವು? ಒಮ್ಮೆಯು ಅನಿಸಲಿಲ್ಲವೆ ನಾ ಹೇಗಿರುವೆನೆಂದು, ಮೊದಮೊದಲು ನಿದ್ರೆ ಮಾಡಲು ಬಿಡಲಿಲ್ಲ,ಈಗ ಮಾಡಬೇಕೆಂದರು ನಿನ್ನ ನೆನಪು ಬಿಡುತ್ತಿಲ್ಲ,ಬಾ ಒಮ್ಮೆಯಾದರು ಈ ಉಸಿರಾಡೊ ಉಸುರಿಗೆ ಉಸಿರು ಕೊಟ್ಟು ಹೋಗು. ಇಂತಿ ನಿನ್ನ ಪ್ರೀತಿಯ ಹುಡುಗ
- devhoogar
08 Dec 2015, 10:39 am
ಕರಾವಳಿಯ ಕಡೆ ಬಹಳಾ ಜನ
ಕೋಮು ನಿಷ್ಟರು.
ಆದರೂ ಸಮಾಧಾನ.
ಕಡಿಮೆಯೇನಿಲ್ಲ ಅಲ್ಲಿ
ಕಾರ್ಟೂನಿಸ್ಟರು !!
- ಶ್ರೀಗೋ.
08 Dec 2015, 08:37 am
ಬೆಳದಿಂಗಳ ಬೆಳಕಲಿ ಕಂಡೆ ನಾ ನಿನ್ನ
ಜಗವ ಮರೆತೆ ಅಂದೆ ನಾ
ಓ ಗೆಳತಿ ಬಾ ಮತ್ತೆ ತೋರು
ಆ ಪ್ರೀತಿ ಜಗವ.......
- Subbu
08 Dec 2015, 06:38 am
ತಿಳಿಗೇಡಿ ಮನಸೇ ತಿಳಿಯುವ ಮನಸೇ
ಹದಿನಾರು ದಾಟಿದ ಹದಿಹಸಿಯ ಮನಸೇ
ಮಂಕು ಮರುಳ ತುಂಬಿದ ಮದ್ದಾನೆ ನೀನು
ಸುತ್ತಲಿನ ತಿಳಿಬೆಳಕ ತಿಳಿಯದ ಕೋಡಿ ನೀನು
ಆರೆತ್ತು ಮೂರೆತ್ತು ಏರುತ್ತ ಹೋಗುವ
ಸಂಗಡದ ಸಂನ್ಯಾಸಿ ಸಹವಾಸ ಬೇಡೆಂದೆ ನೀನು
ಆರೇಳು ಮದಗಳು ಸೇರಿ ದುಷ್ಟ ಮಾಡಿಹೆ ನಿನ್ನ
ದುಷ್ಟರ ಸಂಘದ ಹಿರಿತೆಲೆಯು ನೀನಾದೆ
ತಗ್ಗಿ ಬಗ್ಗಿ ನಡೆಯುವ ವಿನಯವು ಬರಲಿಲ್ಲ
ಮುಳ್ಳಿನ ದಾರಿಯೇ ಮುದವೆಂದು ನಡೆದೆಲ್ಲ
ಹಾಲು ಜೇನಿನ ಮಾತು ನೀ ಕಲಿಯಲಿಲ್ಲ
ಹಾಲಾಹಲವು ನಿನ್ನ ಮೈತುಂಬ ಬೆರೆಯಿತಲ್ಲ
ಹೂವಾಗಿ ಕಾಯಾಗಿ ಹಣ್ಣಾಗಿ ಇರಲಿಲ್ಲ
ದೂರ ದುರ್ನೀತಿ ಗುಣವು ನಿನ್ನ ಮನವ ತುಂಬಿತು
ಕಾಮದ ವಾಸನೆಯು ನಿನ್ನ ಕಾಯ ಕೆಡಿಸಿತಲ್ಲ
ಕಾಮಿನಿಯ ಸಹವಾಸ ನಿನ್ನ ದೂರ ಮಾಡಿತಲ್ಲ
ಹಾಕಿಲ್ಲ ಲಗಾಮು ನಿನ್ನ ಪಂಚ ಕುದುರೆಗೆ
ದಿಕ್ಕು ದೆಸೆಯು ಇಲ್ಲದ ದಾರಿಗೆ ನೂಕಿತು ನಿನ್ನನ್ನ
- Irayya Mathad
07 Dec 2015, 02:40 am
ಬರಡಾದ ಬಾಳಿನಲಿ
ಹಸಿರ ತಂದೆ ನಿ
ಇಂದೇಕೊ ಬಾಡುತಿವೆ
ನಿನ್ನ ಈ ಪ್ರೀತಿಯ ಕೊರಗಿನಲಿ
- Subbu
05 Dec 2015, 07:10 am
ಭಾವನೆಗಳ ಪುಟದಲಿ
ನಿನ್ನ ನೆನಪಿನ ಗೆರೆಗಳಲಿ
ನಾ ಅಳಿಸಲಾರದ ಅಕ್ಷರನಾಗಿಹೆನು
ಓ ಗೆಳತಿ ನೀ ಮರೆಯದೆ ಓದು ಈ ಪುಸ್ತಕವ
- Subbu
04 Dec 2015, 07:20 pm
ರೈಲು ಹಳಿಗಳಂತೆ
ಸಾಗುತಿದೆ ಬದುಕು....
ಜೊತೆಯಲೇ ಇದ್ದರೂ
ನೀ ಇಲ್ಲದಂಥ ಬಿರುಕು....
ಪ್ರೀತಿಸಲೂ ಆಗದು....
ದ್ವೇಷಿಸಲೂ ಆಗದು....
ಬೆರೆಯಲೂ ಆಗದು....
ಮರೆಯಲೂ ಆಗದು......
- ನಿಶಾ ರೂಪ
03 Dec 2015, 10:38 am