Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಧಮ೯ ಜಾಗೃತಿ

ಸರಿ ಇಲ್ಲ ಈಗಿನ ಜಗದ ಸಂಸಾರ
ಆಗಬೇಕಾಗಿದೇ ಅಧ೯ಮದ ಸಂಹಾರ
ವೋಳಗಲಿ ಹಿಂದೂ ಧಮ೯ದ ಜೈ ಜೈಕಾರ
ಇವೇಲ್ಲ ಆಗ್ಬೇಕು ಅಂದ್ರೇ ಜಗವು ಇರಬೇಕು ವಾಸ್ತು ಪ್ರಕಾರ.

- Kalyan

03 Dec 2015, 05:08 am

ಪ್ರೇಮಿಗಳ ಪ್ರಕೃತಿ

ಗಾಳಿ ಮೌನವರಿಸಿ ಹನಿಗಳಿಗೇ ಶುಭಹರಿಸಿ
ಬರವಾದ ಮಡಿಲಿಗೇ ಮೃದುವಾದ ಹನಿಗಳ ಸುರಿಸಿ
ಪ್ರೇಮ ಲೋಕವೇಂಬ ಜಗದ ತುಂಬ ಮಲೇನಾಡ ಬೇಳೇಸಿ
ಸ್ನೇಹವೇಂಬ ಉಸಿರು ಪ್ರೇಮಿಗಳಿಗೇ ಉಣ ಬಡಿಸಿ

- Kalyan

03 Dec 2015, 04:59 am

ಸ್ನೇಹಾನಾ ಪ್ರೀತಿನಾ

ಸವಿಯಾದ ನೇನಪು ಮನದಲ್ಲಿ ತಂದಿತು ಮಳೇಗಾಲ
ಚಿರರುಣಿಯಾಗಿ ಕಣ್ಣಲ್ಲಿ ತುಂಬಿರಲಿ ಸದಾಕಾಲ
ಸ್ನೇಹವಿಲ್ಲದ ಬಾಳಲ್ಲಿ ಬಂದಿತು ಬರಗಾಲ
ಒಲವು ಇರುವ ಕಡೇ ಸ್ನೇಹಕ್ಕೇ ಇಲ್ಲ ಉಳಿಗಾಲ.

- Kalyan

02 Dec 2015, 06:31 pm

ನಮ್ಮ ಜೀವನದಲಿ ಮಡದಿ ಏರಡನೇ ತ

ತಾಯಿ ಮಡದಿ ಇಬ್ಬರು ನೋಡಿಹರೂ ನನ್ನ ಬೇತ್ತಲೇಯ
ತಾಯಿ ಮಡದಿ ಇಬ್ಬರು ಕಳೇಯುವರು ಮನಸಿನ ಕತ್ತಲೇಯ
ಆದರೇ ಸಣ್ಣ ವ್ಯತ್ಯಾಸ ಇಷ್ಟೇ ತಾಯಿ ನಮಗಾಗಿ ಕೋಡುವಳು ಕರಳು
ಮಡದಿ ನಮಗಾಗಿ ಇರುವಳು ನೇರಳು.

- Kalyan

02 Dec 2015, 06:13 pm

ಎಂದೂ ಕಾಣದ ಮನ

ಎಂದೂ ಕಾಣದ ಮನ
ಎಂದೂ ನೋಡದ ದಿನಾ
ಅದೇ ಕಡೆಯಾದ ಕೊನೆಯ ದಿನ ...

- Subbu

02 Dec 2015, 01:42 pm

ಹೆಣ್ಣು ಹುಣ್ಣೆಂಬುದುಮಹಾ ತಪ್

ಮನುವಾದಿಗಳು
ಏನಾದರೂ ಹೇಳಲಿ
ಹೆಣ್ಣು ಹುಣ್ಣೆಂಬುದುಮಹಾ ತಪ್ಪು...
ಮಹಿಳೆಯೆಂಬುವವಳು ನಿಸ್ಸಾರ ಊಟದಲಿ ಇದ್ದಂತೆ ಉಪ್ಪು...
ಅವಳ ಇರುವಿಕೆ ಅರಿವಾಗುವುದು
ಆಕೆ ದೂರವಾದಾಗ...
ಎಂತಹುದೇ ಇರಲಿ ಭೋಜನ ಸಪ್ಪೆಯೆನಿಸುವುದು
ಉಪ್ಪು ಇಲ್ಲವಾದಾಗ...
ಕೆಲವೊಮ್ಮೆ ಉಪ್ಪು ಹೆಚ್ಚಾಗಬಹುದು ಅಡುಗೆಗೆ ಸಹಿಸಿಕೊಳ್ಳಬೇಕು...
ಕಡಿಮೆಯಾದರೂ ಉಪ್ಪು
ನಾಳೆ ಸರಿ ಹೋಗಬಹುದೆಂದು
ತಿಳಿದುಕೊಳ್ಳಬೇಕು...
ಉಪ್ಪಿಲ್ಲದ ಊಟ ಇದ್ದರೆಷ್ಟು ಇರದಿದ್ದರೆಷ್ಟು..
ಸಂಗಾತಿ ಇಲ್ಲದ ಬದುಕು
ಅಪೂರ್ಣವೆಂದರಿತವರೆಷ್ಟು...?

- ವಿನುತ ಕಿರಣ್ ಗೌಡ

02 Dec 2015, 10:53 am

ನಿನ್ನ ಪ್ರೀತಿ - 2

ನಿನ್ನ ಬೆನ್ನ ಮೇಲೆ ಧೂಳು ಇದೆ ನಾ ವರೇಸಲೇ..,
ನನ್ನ ಕೈ ಬೆರಳು ಖಾಲಿ ಇದೆ ಒಂದು ಕವನ ಅಲ್ಲಿ ಬರೇಯಲೇ..,
ಕಾರಣ ಹೇಳದೇ ಕಾಲ್ಗೆಜ್ಜೆ ಉಡುಗೊರೆ ಕೊಡಲೇ..,
ನಿನ್ನ ಅನುಮತಿ ಕೇಳದೆ ಕೈ ಬಳೆ ತೋಡಿಸಲೇ..,
ನೀ ನಡೆವಾಗ ಬರುವ ಗೆಜ್ಜೆಯ ಸದ್ದನ್ನು ಕೇಳಲು ನಿನ್ನ ಹೀಂಧೇ ಬರಲೇ..,
ನಿನ್ನ ಹೀಂಧೇ ಬರುತ್ತಾ, ನಿನ್ನ ಬೆನ್ನಿನ ಮೇಲಿರೊ ಕವನ ಓದುತ್ತ ಕಾಲ ಕಳೆಯುತೀರುವೇ.....

- Rakesh

02 Dec 2015, 12:18 am

ಅಗಲದಿರು ನೀ ನನ್ನ

ಯಾರೇನು ಬರೆದರೇನು
ನನ್ನ ಹೃದಯ ಮೌನವಾಗಿದೆ
ಅಳಲು ತೋಡಲು ಇನ್ನು ಏಕಾಂಗಿಯಾಗಿಹೆನು

ಯಾವ ಪಡುವಣ ಗಾಳಿ
ತೂರಿ ಬರುತಿದೆ ಕಾಣೆ
ಮನದೊಳಗಿನ ಆಸೆಯು
ಕಮರುತಿದೆ ಕಣ್ಣಲಿಂದು

ಹಾರು ಹಕ್ಕಿಗೆ ರೆಕ್ಕೆ ಬೇಡವೆ
ಗುಬ್ಬಚ್ಚಿಗೆ ಗೂಡು ಬೇಡವೆ
ಕನಸು ಕಾಣುವ ಮನಸ್ಸಿಗೆ
ಕಲ್ಪನೆಯ ಲೋಕ ಬೇಡವೆ

ಮರೆಯಲಾರದ ಮುಗ್ಧ ಪ್ರೀತಿಗೆ
ಅಳಿಯಲಾರದ ನೆನಪು ನೀಡಿದೆ
ನನ್ನ ಪ್ರೇಮ ಕಾವ್ಯಕೆ
ಶೃಂಗಾರ ಶೃತಿ ನೀನೆ

ಯಾವ ಒಲವಿನ ನೋಟಕೆ
ಕಳೆದು ಹೋದೆ ನಿನ್ನಲಿ
ನಿನ್ನ ಕೋಪದ ಬಿಸಿಯ ಗಾಳಿ
ದೂರ ಮಾಡಿತು ನನ್ನನೆ

ನಿನ್ನ ಹೆಜ್ಜೆಗೆ ತಾಳ ಹಾಕದೆ
ಗೆಜ್ಜೆ ಪೂಜೆ ಮಾಡಲೇನು
ಯಾಕೋ ಈ ಮನಸಿನ್ನೂ
ನಿನ್ನ ಜಪಿಸಿ ಸೊರಗುತಿದೆ...

- Irayya Mathad

01 Dec 2015, 08:32 am

ಬೆರೆತುಬಿಡು ಗೆಳಯ ಇಲ್ಲ ಮರೆತ

ಬೆರೆತುಬಿಡು ಗೆಳಯ
ಇಲ್ಲ ಮರೆತುಬಿಡು

ನಾವಿಬ್ಬರು ಎಂದಿಗೂ ರೈಲ್ವೆ ಕಂಬಿಗಳೆ
ನಾನಿಲ್ಲೆ ನೀನಲ್ಲೆ ಇರಬೇಕು ಬಾಳಲ್ಲೆ

ಸಾಗರವ ಹಾಸಿಗೆಮಾಡಿ ಹೊದುವ ಆಸೆಯೇಕೆ
ದೂರ ಮಾಡುತಿದೆ ನಮ್ಮನ್ನು ಎರಡು ತೀರಕೆ

ಹೃದಯಕೆ ಬತ್ತಿಯ ಹೊಸೆದು ವಿರಹದ ದೀಪವ ಹಚ್ಚಿ
ಅಡ್ಡಗೋಡೆಯ ಮೇಲೆ ರಕ್ತದ ಪ್ರೀತಿಯ ಬೆಳಗಬೇಕೆ

ಬೆರೆತುಬಿಡು ಗೆಳಯ
ಇಲ್ಲ ಮರೆತುಬಿಡು

- ವಿನುತ ಕಿರಣ್ ಗೌಡ

01 Dec 2015, 04:15 am

ಪ್ರೀಯ!!!!!!

ಮರೆತರು ನೀನು,
ಮರೆಯನು ನಾನು
ತೊರೆದರು ನೀನು
ತೊರೆಯನು ನಾನು

- ವಿನುತ ಕಿರಣ್ ಗೌಡ

01 Dec 2015, 02:59 am