ಮೂರಂಕಿ ನಾಲ್ಕಂಕಿ ಎಂಟಂಕಿ ಲೆಕ್ಕವ ನಾನೊಲ್ಲೆ
ಅಗೆದಗೆದು ತೆಗೆದ ಸಂಪತ್ತಿನ ಸೂರು ನಾನೊಲ್ಲೆ
ಮಾನ ಸನ್ಮಾನಗಳ ಹೊರೆಯು ನಾನೊಲ್ಲೆ
ಇರುವ ಈ ಮೂರು ದಿನದಲ್ಲಿ ಪರಧನ ಪರಕಾಯದ
ಮೋಹವ ನಾನೊಲ್ಲೆ
ಮಣ್ಣಲ್ಲಿ ಹುಟ್ಟಿ ಮಣ್ಣಾಗಿ ಹೋಗುವ ಈ ದೇಹಕೆ
ಮಣ್ಣಿನ ಋಣ ತೀರಸುವ ಭಾಗ್ಯವ ನೀಡೆನಗೆ ಶ್ರೀ ಹರಿಯೆ ಸಾಕೆನಗೆ ಆಸೆಗಳ ಗಾಳಿ ಗೋಪುರವ...
ಅ ಕನಸ್ಸಿನ ಮೇಲೆ ತುಂಬಾ ಕೋಪ
ಅವಳು ಕಾಣುವ ಕನಸ ನನ್ನ ಬಳಿ ಹೇಳಲಿಲ್ಲ
ನಾನು ಕಂಡ ಕನಸಲ್ಲಿ ಅವಳಿರಲಿಲ್ಲ ಬರಿ ಕಪ್ಪು ಬಿಳುಪು
ಅವಳ ಕನಸ ನಾ ಅರಿಯಲು ಗೊತ್ತಾಗಲಿಲ್ಲ
ಅವಳಿದ್ದ ಕ್ಷಣವಷ್ಟೆ ಕಣ್ಣಾ ಮುಂದೆ
ಕನಸ್ಸಿಗೆ ಜಾಗವಿರಲಿಲ್ಲ
ಅವಳು ಮಾತ್ರ ಕನಸ್ಸಲ್ಲಿ ನನ್ನ ಒಡೆಯನಾಗಿಸಿದಳು
ಹತ್ತಿರ ಬಂದರೆ ಕಿರು ನಗೆ ಬೀರಿ ಜಾರುವಳು
ನನಗೆ ಮಾತ್ರ ಕನಸ ಕಾಣುವ ಹಕ್ಕಿಲ್ಲ. ಅವಳ ಪ್ರಕಾರ....
ಶುಭಾಷಯ ಗೆಳತಿ ನಿನಗೆ ಜನುಮ ದಿನದ ಶುಭಾಷಯ
ನನ್ನ ನಿನ್ನ ಬೇಟಿಯ ಇಂದು ನನ್ನ ಮೂಖನ್ನಾಗಿಸಿದೆ
ಆ ನಿನ್ನ ಅಷ್ಟು ದಿನದ ನೆನಪು ಈ ಶುಭಾಷಯದ ಜೊತೆಗೆ ಬರುತ್ತಿದೆ
ಇದು ಬರಿ ಶುಭಾಷಯವಲ್ಲ ಗೆಳತಿ
ನೀನು ಬಿಟ್ಟು ಹೊದ ಅಂದಿನಿಂದ ಇಲ್ಲಿವರೆಗಿನ ನೆನಪುಗಳ ಗುಚ್ಚ
ನೀನು ಮರೆತಿರಬಹುದು
ಆದರೇ ನನಗೆ ಮಾತ್ರ ನಿನ್ನ ಮರೆತ ಕ್ಷಣಗಳೇ ಇಲ್ಲ
ರಾತ್ರಿಯ ಆಗಸದ ಚುಕ್ಕಿಯ ನಡುವೇ ನೀನು,
ದಾರಿಯಲ್ಲಿ ಒಂಟಿಯಾಗಿ ಸಾಗುವಾಗ ನೆರಳಂತೆ ಜೊತಯಾದೆ ನೀನು,
ಈಗೆ ನನ್ನ ಪಯಣ ಸಾಗುತ್ತಿದೆ
ಶುಭಾಷಯದ ಮೂಲಕ ನನ್ನ ಅಬಿನಂಧನೆ
ನೆನಪುಗಳನ್ನ ಜೊತಯಾಗಿಸಿದ್ದಕ್ಕೆ.