Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೇಕಿಲ್ಲ

ನೀನಿರುವಾಗ ಮನಸು ಚಡಪಡಿಸಬೇಕಿಲ್ಲ,
ಕಿವಿ ನಿಮಿರಿಸಬೇಕಿಲ್ಲ,
ತೃಷೆ ತೀರಿಸಬೇಕಿಲ್ಲ.
ಹಸಿವು ಹಿಂಗಿಸಬೇಕಿಲ್ಲ.
ನಾಳೆ ಮೇಳೈಸಬೇಕಿಲ್ಲ.
ಜೀವನ ಅರ್ಥೈಸಬೇಕಿಲ್ಲ.

- chandrakanth

22 Nov 2015, 09:11 pm

ಓ ಮರುಳೆ

ಎಂಥಕನಮ್ಮಿ ಇದು ಏನ್ ಕನಮ್ಮಿ ಇದು
ಮುದಿ ವಯಸ್ಸಾಯಿತೆ ಮುರುಕಲಾಯಿತೆ ದೇಹ

ಹದಿವಯಸ್ಸಾಗೆ ಅಟ್ಟಹಾಸದಿ ಮೆರೆದು
ಕಾಣದಂತಾಯಿತೆ ಕಣ್ಣು ಪ್ರೀತಿಸುವ ಜನರನ್ನ

ನನ್ನವರು ತನ್ನವರೆನ್ನೊ ಕರುಳಿಲ್ಲದಂತಾಗಿ
ಮದ ತುಂಬಿತೋ ಮನದಲ್ಲಿ ಮದ ತುಂಬಿತೋ

ಹಣದ ಭೂತ ಬಡಿದು ಹಣೆಬರಹವು ಹಾಳಾಯ್ತು
ದರ್ಜನರ ಸಂಗದಿಂದ ದೂರವಾಯಿತೋ ಧ್ವನಿಯು

ತನ್ನವರಿಗೆಲ್ಲ ಬೇಸರವಾಗಿ
ಹೊತ್ತ ಭೂಮಿಗೆ ಇಂದು ಹೊರೆಯಾಯಿತೋ

ತಂದೆ ತಾಯಿಯನ್ನು ನೋಯಿಸಿದ ಈ ಜೀವ
ಮಸಣದ ಹಾದಿಯ ಹಿಡಿಯಿತು ಓ ಮರುಳೆ..

- Irayya Mathad

21 Nov 2015, 02:49 pm

ನಿನ್ನೊಡನಿದ್ದಾಗ


ಕನಸೇ ನೀ ಎಲ್ಲವ ನೆನಪಿಸಿದಾಗ
ನಿನ್ನೋಡನಾಟದ ದಿನಗಳು ಮುದ ನೀಡಿದಾಗ

ನೆನಪೆಲ್ಲ ಎಂದೂ ಕನಸಲ್ಲ ಎಂದು ನೀ ನುಡಿದಾಗ
ಸವಿ ಸವಿ ನೆನಪು ಸದಾ, ನಿನ್ನೊಡನಿದ್ದಾಗ

- ಘಾಟ್ vidya

21 Nov 2015, 11:03 am

ನಿನ್ನೊಡನಿದ್ದಾಗ


ಕನಸೇ ನೀ ಎಲ್ಲವ ನೆನಪಿಸಿದಾಗ
ನಿನ್ನೋಡನಾಟದ ದಿನಗಳು ಮುದ ನೀಡಿದಾಗ

ನೆನಪೆಲ್ಲ ಎಂದೂ ಕನಸಲ್ಲ ಎಂದು ನೀ ನುಡಿದಾಗ
ಸವಿ ಸವಿ ನೆನಪು ಸದಾ, ನಿನ್ನೊಡನಿದ್ದಾಗ

- ಘಾಟ್ vidya

21 Nov 2015, 10:35 am

ನಿನ್ನಡನಿದ್ದಾಗ

ಕನಸೇ ನೀ ಎಲ್ಲವ ನೆನಪಿಸಿದಾಗ
ನಿನ್ನೋಡನಾಟದ ದಿನಗಳು ಮುದ ನೀಡಿದಾಗ

ನೆನಪೆಲ್ಲ ಎಂದೂ ಕನಸಲ್ಲ ಎಂದು ನೀ ನುಡಿದಾಗ
ಸವಿ ಸವಿ ನೆನಪು ಸದಾ, ನಿನ್ನೊಡನಿದ್ದಾಗ

- ಘಾಟ್ vidya

21 Nov 2015, 10:33 am

ಅಮ್ಮ

ಮೊದಲ ತೊದಲು ನುಡಿನೀನು
ನನಗಾಗಿ ನೊಂದು ನಲಿವ ಜೀವನೀನು
ನನ್ನ ನಗುವ ಮೊದಲ ಆನಂದಕಾಂತಿ ನೀನು
ಮಮತೆ ವಾತ್ಸಲ್ಯದ ವಡತೆನೀನು...............

- Prashanth

19 Nov 2015, 01:23 pm

ಕನಸು-ನೆನಪು

ನಾನಗುವೆ ನ್ನನ ಕನಸುಗಳಿಗೆ ಬಡಗಿ
ಕೊಡುವೆಯ ನಿನ್ನ ನೆನಪುಗಳ
ಕಳೆಯುವೆ ದಿವಸಗಳ ಬಡಗಿಯಾಗಿ
ನೀನಿರುವೆಯ ಜೊತೆ ಮಡದಿಯಾಗಿ............

- Prashanth

19 Nov 2015, 01:13 pm

ಓ ನನ್ನ ನಲ್ಲೆ.........

ಕನ್ನಡಿಯ ಬಿಂಬದಂತೆ
ಮನಸಿನ ಭಾವನೆಯಂತೆ
ಹೃದಯದ ಮಿಡಿತದಂತೆ
ಜೋತೆಗಿರು ನೀ ನನ್ನ ಜೀವದಂತೆ ..........

- Prashanth

19 Nov 2015, 01:02 pm

ಮೋಹನಾಂಗಿನಿ

ಕಂಡಳೆನಗೆ ಕನ್ಯೆ
ತಾವರೆಯಂತಿಹ ಕೆನ್ನೆ
ಅವಳ ನೋಟಕೆ ನಾನಾದೆ ಸೊನ್ನೆ
ಮುಟ್ಟಲು ಹೋದರೆ ಅವಳು ಬರೀ ಮಣ್ಣೇ

- Irayya Mathad

18 Nov 2015, 06:52 am

ಅಮ್ಮ .........ಐ ಲವ್ ಯೂ !

ಅಮ್ಮ .........ಊರೇನೇ ಅಂದರೂ
ನೀ ನನ್ನ ದೇವರು ...!
ಜ್ಞಾನಕ್ಕೂ ದೊಡ್ಡದು ಮಣ್ಣಿನ ಋಣ
ಪ್ರಾಣಕ್ಕೂ ದೊಡ್ಡದು ತಾಯಿಯ ಋಣ...!
ಓ ಜನನಿ ಜೀವಕ್ಕೆ ಮೂಲ ನೀ
ತ್ಯಾಗಕ್ಕೆ ಕಳಸ ನೀ........!
ಓ ಜನನಿ ಎಲ್ಲಕ್ಕೂ ಮೊದಲು ನೀ
ಪ್ರೇಮಕ್ಕೆ ಕಡಲು ನೀ ......!
ಜಗಕ್ಕೆ ಮುಕ್ಕೋಟಿ ದೇವರು
ನೀ ನನ್ನ ದೇವರು ..........!
ಇಂತಿ ನಿಮ್ಮ ಮಗ
- ಯಲ್ಲು ....!

- ಯಲ್ಲು ಅರವಳ್ಳಿ !

17 Nov 2015, 08:13 am