Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಟೋ ರಾಜ

ಆಟೋ ಬಂತೊಂದು ಆಟೋ
ಯಾವೂರ ಆಟೋ
ಬೆಂಗಳೂರಿನ ಆಟೋ

ಕಲ್ಲು ಮರಳು ಏರಿತು
ಸೊಂದಿಗೊಂದಿ ತೂರಿತು

ಕಾರುಗಳನ್ನು ಹಿಂದೆ ಹಾಕಿತು
ಪೊಂ ಪೊಂ ಹಾರ್ನ್ ಮಾಡಿತು

ಎಂಥಹ ಟ್ರಾಫಿಕ್ ಇದ್ರೂನು
ಜೋರಾಗಿ ಹೊರಟೆ ಹೋಯಿತು

ಒಂದೇ ಚಕ್ರಕ್ಕೆ ಜಾಗ ಸಿಕ್ಕಿದರಾಯ್ತು
ಅಲ್ಲೇ ಆಟೋ ಮುಂದೆ ಹೋಯ್ತು

ಆಟೋ ಪ್ರಯಾಣ ಅಂದ್ರೆ ಆಯ್ತು
ಚಾಲಕನ ಕೈಗೆ ಪ್ರಾಣ ಕೊಟ್ಟಹ್ಯಾಂಗ್ ಆಯ್ತು

ಭೀತಿಲಿ ಸುಮ್ಮನೆ ಕೂತಿರಬೇಕು
ಅವನು ಹೇಳಿದಷ್ಟು ಬಿಲ್ ತೆರಬೇಕು

ನಾವ್ ಹೋಗೋ ಜಾಗಕ್ಕೆ ಬರೋದಿಲ್ಲ ಯಾರೂನು
ಆಟೋ ಹೋಗೋ ಜಾಗಕ್ಕೆ ಹೋಗ್ಬೇಕು ನಾವೂನು

ಬಸುರಿಯರಿಗೆ ಹೆರಿಗೆ ಆಗೋಯ್ತು
ಹಲವರಿಗೆ ಹೃದಯ ಬಡಿತ ನಿಂತೇ ಹೋಯಿತು

ಸೂರ್ಯ ಮುಳುಗಿದರೆ ಮೀಟರ್ ಡಬಲ್
ಬರೋದೆ ಇಲ್ಲ ಕರೆದರೆ ಸಿಂಗಲ್

ಅದ್ರೂನು ಅದೇ ನಮ್ಮ ನೆಚ್ಚಿನ ಸಂಗಾತಿ
ಮೂರೇ ಚಕ್ರದ ಮಾಯಗಾತಿ

- ಘಾಟ್ vidya

16 Nov 2015, 06:11 pm

ನಂಬಿದ ಪ್ರೀತಿ ನರಕವಾಯಿತು


ಅಳಿದ ಮೇಲೆ ಉಳಿದುದೇನೊ
ಹಾರಿ ಹೋದ ಹಕ್ಕಿಗೆ ಗೂಡಿನ ಆಸರೆ ಏನು

ಪ್ರೀತಿ ಅರಳಿ ಮಾಯೆ ಮಾಡಿ
ಹೃದಯದಲ್ಲಿ ವಿಷವು ಕಕ್ಕಿ
ಮೋಸ ಮಾಡಿ ಕಾಣದಾಯಿತೊ

ಕಡಲ ಅಂಚಿನ ದೋಣಿಯಲ್ಲಿ
ಮೀನ ಹಿಡಿಯುವ ಗಾಳದಲ್ಲಿ
ಸಿಲುಕಿದ ನಾನು ಸಿಲುಕಿದೆ ನಾನು

ಮಿಂಚಿನ ಹುಳದಂತೆ ನೀನು
ಕೊಂಚು ಪ್ರೀತಿಯ ನೀಡದೆ
ಪ್ರೀತಿ ಅರಮನೆಗೆ ಕಿಚ್ಚು ಹಚ್ಚಿದೆ ನೀ

ನನ್ನನೆ ನಿನಗೆ ಎರವಲು ಇಟ್ಟೆ
ಪ್ರೀತಿ ಅಕ್ಷಯ ಪಾತ್ರೆ ಕೊಟ್ಟೆ
ಕೊನೆಗೆ ನೀ ನನ್ನ ಒಂಟಿ ಮಾಡಿಟ್ಟೆ....

- Irayya Mathad

15 Nov 2015, 05:42 am

ಸುಕುಮಾರಿ ನೀ ಸುಂದರಿ


ಕಂಜಸಖನ ಕಣ್ಣಿನ ತೇಜದಂತೆ
ಚಂದಿರನ ಮುಗ್ಧ ನಗುವಿನಂತೆ
ಕಮಲದ ಕಾಂತೀಯ ಕುಡಿಯಂತೆ
ಹುಣ್ಣಿಮೆಯ ಬೆಳಕಿನ ದೀಪದಂತೆ
ಬಾನಾಡಿಯಲ್ಲಿ ತೇಲಾಡುವ ಬೆಳ್ಳಕ್ಕಿಯಂತೆ
ಕಾಮನಬಿಲ್ಲಿನ ಬಣ್ಣದೋಕುಳಿಯಂತೆ
ವಸಂತ ಮಾಸದಿ ಹಾಡುವ ಕೋಗಿಲೆಯಂತೆ
ನನ್ನೆದೆಯಲಿ ಬೀಸಿದ ಪ್ರೀತಿಯ ತಂಗಾಳಿಯಂತೆ
ಸೌಂದರ್ಯವೆಂಬ ಇಂದ್ರಜಾಲದ ಮಂತ್ರದಂತೆ
ಕಾಡದಿರು ಕನಸಲಿ ನನ್ನ ದೇವಲೋಕದ ಕನ್ಯೆಯಂತೆ

- Irayya Mathad

13 Nov 2015, 09:04 am

ದೂರವಾದಾಗ

ಹತ್ತಿರವಿದ್ದೂ ದೂರವಾದಾಗ
ಮನದ ಮಾತೆಲ್ಲ ಕಹಿಯಾದಾಗ

ಹಲವು ಮಾತು ಹೃದಯ ಬೇನೆಯಾದಾಗ
ಇದೆಂಥಹ ಸ್ನೇಹ ಎಂದು ಮನಮರುಗಿದಾಗ

ಕಣ್ಣೀರೆ ನೀನೆಲ್ಲವ ಭರಿಸಿದಾಗ
ಶ್ರೀಪತಿಯ ಧ್ಯಾನವು ಮನಕ್ಕೆ ಮುದ ನೀಡಿದಾಗ. .......

- ಘಾಟ್ vidya

12 Nov 2015, 05:34 pm

ಸೌಂದರ್ಯ ಕನ್ಯೆ

ಮಧುರ ಮಾತಿಗೆ ಮಾರುಳಾದೆ
ಬೆಳದಿಂಗಳ ಬೆಳಕಿನ ಚಿತ್ತಾರ ನೀನಾದೆ
ಪೂರ್ಣ ಚಂದ್ರನ ಕಾಂತೀಯ ಹೂವಾಗಿ
ಬಂಗಾರದೆಲೆಯ ಮೇಲೆ ನಸು ಇಬ್ಬನಿ ನೀನಾದೆ
ಕಾಣದ ಕಂಗಳಿಗೆ ದೇವತೆ ನೀನಾದೆ
ಪ್ರೀತಿ ಮಮತೆಯ ಸಾಕಾರ ರೂಪವಾದೆ
ತಂಗಾಳಿಯ ತಿಳಿ ಕಂಪಿನ ನಾದ ನೀನಾದೆ
ಪ್ರೀತಿಯ ಅರಮನೆಗೆ ಮಹಾರಾಣಿ ನೀನಾದೆ
ಅರಿಯದೆ ಕದ್ದ ನನ್ನ ಹೃದಯಕೆ ಒಡತಿ ನೀನಾದೆ
ಬಂದೆಯಾ ನನ್ನ ಕನಸಿನ ರಾಣಿ ನೀನಾಗಿ ಓ ರತಿಯೆ....

- Irayya Mathad

10 Nov 2015, 05:48 pm

ದೀಪಾವಳಿ

ದೀಪಾವಳಿಯು
ಜೀವನದ ಸುಂದರ ಸಮಯ
ಸುಡೋಣ ದ್ವೇಷ ಅಸೂಯೆಗಳ
ಆಚರಿಸೋಣ ಸ್ನೇಹ ಸಂಭಂದ ಪ್ರೀತಿಯ

- ಘಾಟ್ vidya

10 Nov 2015, 05:35 pm

ಓ ಮಳೆಯೇ...

ಸೋಗೆ ಮನೆಯ ಛಾವಣಿ ಸೀಳಿ
ಸೆಗಣಿ ಬಳಿದು ಅಮ್ಮ ನಡು ಬಗ್ಗಿಸಿ
ಗುಡಿಸಿ, ಸಾರಿಸಿ ನಯ ಮಾಡಿದ
ಒಡಕಲು ನೆಲಕೆ ಬಿದ್ದು ಪಟಪಟನೆ
ಸದ್ದು ಮಾಡಿ, ಬಡತನಕೆ ಬಣ್ಣ ಬಳಿದು ತೋರಿಸಿದ
ಓ ನಿರ್ದಯಿ ಮಳೆ ಹನಿಯೆ...
ನೀ ಎಂದಾದರೂ ಅರಿತೆಯಾ
ಬಡವನ ಬವಣೆಯನ್ನು ?

ಯಾಕೆ ಅರಿಯಲಿಲ್ಲ ಮಗುವೆ
ನಿನ್ನಪ್ಪ ಅಮ್ಮ ಕಂಡೋರ ಹೊಲಗದ್ದೆಗಳಲಿ
ಹಸಿವ ಮರೆತು ಮಣ್ಣು, ಗೊಬ್ಬರ, ಕಲ್ಲು ಹೊತ್ತು
ದುಡಿದು ಬೆವರ ಸುರಿಸುವಾಗ
ಅವರ ಕಷ್ಟವರಿತು ಹನಿ ಸಿಂಚನ ಮಾಡಿ
ಧೋ ಎಂದು ಸುರಿದು ಅವರ ತಣಿಸಿ,
ಬೆವರ ತೊಳೆದು ತಣ್ಣಗಾಗಿಸಿದ್ದು
ನಾನಲ್ಲವೇ ಕಂದಾ ?

ಹೋಗು ಹೋಗೆಲೆ ಮಳೆಯೆ,
ಸಾವಿರ ಕವಿಗಳು ನಿನ್ನ ಹನಿ ಹನಿಯನೂ ಹೆಕ್ಕಿ
ಅದಕೆ ಸುಳ್ಳೇ ಸಂಭ್ರಮದ ಬಣ್ಣ ಬಳಿದು
ಹಾಡಿ ಹೊಗಳಿದ ಪರಿಗೆ ನೀ ಮೇಲೇರಿರುವೆ ಸೊಕ್ಕಿ
ಬಿಸಿಲ ಜಳಕೆ ಬಾಯಾರಿ ದುಡಿವ ದೇಹ
ಹನಿ ನೀರಿಗೆ ಪರಿತಪಿಸುವಾಗ
ನಿನಗೆ ಬರಲಿಲ್ಲ ಕರುಣೆ ಉಕ್ಕಿ.

ಅರಿತೆ ಮಗುವೆ ನಿನ್ನ ಅಂತರಂಗದ ಕೂಗು
ನನಗಿಲ್ಲ ಬರಿದೆ ಬಡಾಯಿಗಳ ಸೋಗು
ನನ್ನ ತಾಯಿ ಪ್ರಕೃತಿ ಮಾತೆ
ಹಾಕಿದ ಗೆರೆಯ ದಾಟಿ ಬರಲಾರೆನೇಳು
ಇದು ನನ್ನ ಸಂವೇದನೆಯ ಸೋಲು !

- ಶ್ರೀಗೋ.

10 Nov 2015, 02:58 am

ಪರಿಶುದ್ಧ ಮನಸ್ಸು

ತಂಗಿರುವ ಗೂಡು ತಂಗಾಳಿಯಂತಿದ್ದರೇನು
ಮನೆಯಂಗಳ ಮಲ್ಲಿಗೆಯಂತಿದ್ದರೇನು
ಆಡುವ ಮಾತುಗಳು ಸಿಹಿಯಾದರೇನು
ಅಚ್ಚ ಕನ್ನಡಿಯ ಮನಸಿರದೊಡೆ ನೆಚ್ಚಿ ಬರುವನಾ ಶ್ರೀ ಹರಿಯು

- Irayya Mathad

09 Nov 2015, 10:53 am

ಶರಣಾದೆ ಪ್ರೀತಿಗೆ

ಸ್ನೇಹದ ಪಣತೆಯಲ್ಲಿ ಪ್ರೇಮದ ಅಮೃತ ಹಾಕಿ ಪ್ರೀತಿಯ ಬೆಳಕು ಚೆಲ್ಲಿದೆ ನೀ
ಸೋಲನ್ನು ಅರಿಯದ ನಾನು ನಿನಗೆ ಸೋತೆನಿಂದು
ಪ್ರೀತಿಗೆ ಶರಣಾಗತನಾಗಿ ಮಾಡಿದೆ ನೀ

- Irayya Mathad

08 Nov 2015, 05:15 am

ಹದಿಹರೆಯದ ಹಗಲುಗನಸು

ಹದಿನೆಂಟು ದಾಟಿಯಾಯಿತು ಹಗಲಿನ್ನು ಮುಳಗದಾಯಿತು
ಅತೀಯಾಯಿತು ಕನವರಿಕೆ ಕನಸಲ್ಲಿ
ಪ್ರತಿಕ್ಷಣವು ಪ್ರತಿದಿನವು ಕಣ್ಮುಂದೆ ನೀ ಬರಲು
ನಾ ಬಯಸಿದೆ ನಿನ್ನನೆ ವರವಾಗಿ

- Irayya Mathad

07 Nov 2015, 05:27 pm