Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು

ಕಾಡಬೇಡ ಗೆಳತಿ ನನ್ನ
ಕನಸಲ್ಲೂ ಇನ್ನು
ನಾ ಕಾಣಬೇಕು
ಗುರಿ ಮುಟ್ಟುವ ಕನಸನ್ನು

- shiva

25 Oct 2015, 05:50 pm

ಸತ್ತ ಪ್ರೀತಿ

ಕಳೆದು ಹೋದ ಪ್ರೀತಿಯು
ಹತ್ತಿರ ಬಂದಿದೆ ಇಂದು
ಅಳಲು ಆಗದೆ ನಗಲು ಆಗದೆ
ಬೆಂದು ಹೋದೆನು ಇಂದು

ಬಹಳ ಖುಷಿಯಿತ್ತು ಅಂದು
ನೀನು ಪ್ರೀತಿ ಮಾಡಿದೆ ಎಂದು
ಮತ್ತೆ ಬಂದಿದೆ ಸತ್ತ ಪ್ರೀತಿಯು
ಒಪ್ಪಿಕೊಳ್ಳುವ ಮನಸಿಲ್ಲ
ನಿನ್ನ ನೆನಪಲ್ಲೆ ಕಳೆಯುವೆ ಎಂದೆಂದೂ ಎಂದೆಂದೂ

- shiva

24 Oct 2015, 01:58 pm

ಮಳೆಯಲ್ಲಿ ತಣಿದ ಮನ

ದೇವರ ವರವೋ ಪೂರ್ವದ ಪುಣ್ಯವೋ
ತಣಿದಾ ಮನವು ಮಳೆಯಲ್ಲಿ ನೆನೆದು !! ಪ !!

ಕಾನನದಂಚಿಗೆ ಮಿಂಚಿನ ಓಟವೋ
ಸಿಡಿಲಿನ ಆರ್ಭಟವೋ ನನ್ನೆದೆ ಗೂಡಿನಲ್ಲಿ
ಪುಟಿದಾ ಮಳೆ ಹನಿಯು ನನ್ನನೆ ಸೋಕಲು

ಧಾವಿಸಿ ಬರುತಿಹ ಗುಡುಗಿನ ಸರಮಾಲೆ
ಚಾಮರ ಬೀಸುತ ತಣ್ಣೀರೆರೆಚುತ
ನಾಚಿದೆ ತಂಗಾಳಿ ನಸು ನಗೆ ಬೀರುತ

ವನ್ಯಕುಲ ಜೀವಿಯೋ ಹಕ್ಕಿಯ ರಾಗವೋ
ಮೇಘದ ಸಂದೇಶ ತಂದಿದೆ ಸಂತೋಷ
ಪುಳಕಿತ ನನ್ನ ಮನವು ಕುಣಿದಾಡಿದೆ ಈಗ

ಬೊಂಬೆಯಾಟ ಆಡಿಸುವ ಸೂತ್ರಧಾರಿ ನೀನಾದೆ
ನಟಿಸುವ ಪಾತ್ರಧಾರಿ ನಾನಾಗಿಹೆನು
ಕಳೆದು ಹೋದೆ ನಾನು ಕಲ್ಪನೆಯ ಲೋಕದಲ್ಲಿ.....

- Irayya Mathad

24 Oct 2015, 09:21 am

ಕಲಹವೇತಕೆ ?

ಹಿಂದು -ಮುಸ್ಲಿಂ ಕಲಹವೇತಕೆ
ಹೊಂದಿ ಬಾಳಬಾರದೇ
ಮೇಲು -ಕೀಳು ಜಗಳವೇತಕೆ
ಮನುಜನಾಗಿರಬಾರದೇ

ರಕ್ತ ಹರಿಸುತ ದ್ವೇಷ ಬೆಳೆಸುತ
ಧರ್ಮ ರಕ್ಷಣೆ ನ್ಯಾಯವೇ
ಮತಾಂಧತೆಯ ಗುಲಾಮನಾಗದೆ
ಮಾನವತೆಯ ಸಾರಬಾರದೇ

ಸರ್ವ ಧರ್ಮದ ಶಾಂತಿಯ ಸಾರಿದ
ಸರ್ವ ಶ್ರೇಷ್ಠ ಭೂಮಿ ನಮ್ಮದು
ಹಸಿರು -ಕೇಸರಿ ಭೇದವೇತಕೆ
ಉಸಿರು ಭಾರತವೆನ್ನಲಿ

ಪುಣ್ಯ ಮಣ್ಣಿನ ಪ್ರಜೆಗಳಾಗುತ
ಬಾ ..ಬೆರೆತು ಬಾಳುವ ಗೆಳೆಯನೆ ..!!

✒ಸಿರಾಜ್ ಗಡಿಯಾರ್

- ಸಿರಾಜ್

23 Oct 2015, 07:51 pm

ಎನ್ನ ಜನಕ

ಎಲ್ಲರ‍ಂತಲ್ಲ ಎನ್ನ ಜನಕ,
ಅರಿತಿರಲಿಲ್ಲ ಇಲ್ಲಿಯ ತನಕ,
ಹೆಮ್ಮೆ ಇದೆ ಮಗನಾಗಿರಲು,
ಪಣ ತೊಡುವೆ ಋಣಿಯಾಗಿದೆ.
~ಸಚೇತನ

- ಚೇತನ ಸಾಸನೂರ

23 Oct 2015, 12:18 pm

ಈ ತಬ್ಬಲಿ ಮನ

ಹಸಿತಿದೆ, ನಿನ್ನ ಕೈ ತುತ್ತು ತಿನ್ನಲು;
ತೂಕಡಿಸಿದೆ, ನಿನ್ನ ಒಡಲನು ಬಯಸಿ;
ನೆನೆಯುತಿದೆ, ನೀನಿದ್ದ ಕ್ಷಣಗಳನು;
ಹಸಿದು ತೂಕಡಿಸುತ ನಿನ್ನನ್ನೇ ನೆನೆಯುತಿದೆ, ಈ ತಬ್ಬಲಿ ಮನ. . .
~ಸಚೇತನ

- ಚೇತನ ಸಾಸನೂರ

23 Oct 2015, 12:04 pm

ನಿನ್ನ ಪ್ರೀತಿ

ಜೋರಾಗಿ ಸುರೀಯುತೀರುವ ಮಳೆಯಲ್ಲಿ ಕೂಗಲೇ ನಿನ್ನ ಹೇಸರ.,
ಮಳೆಯ ಸದ್ದಿಗೆ ಕೇಳಿಸುವುದಿಲ್ಲ ಬೇಡ ಬಿಡು..
ಸಮೂದ್ರದ ದಡದ ಮರಳಲ್ಲಿ ಬರೇಯಲೇ ನಿನ್ನ ಹೆಸರ.,
ಅಲೆಗಳ ಓಡಾಟಕ್ಕೆ ಅಳಿಸಿ ಹೋಗುವುದು ಬೇಡ ಬಿಡು...
ನನ್ನ ದೇಹದ ಉಸಿರಿನಲ್ಲಿರುವ ನಿನ್ನ ಹೆಸರ.,
ನನ್ನ ಹೃದಯದ ಬಡಿತದಲ್ಲಿರುವ ನಿನ್ನ ಹೆಸರ.,
ನಾ ಸಾಯುವ ವರೆಗೂ ಯಾರು ಅಳಿಸಲಾಗದು ಇರಲಿ ಬಿಡು....

- Rakesh

23 Oct 2015, 03:53 am

ಪೇಟೆ-ಹಳ್ಳಿ

ಹಾರುತಿಹವು ಹಕ್ಕಿಗಳು ಸ್ವತಂತ್ರವಾಗಿ
ಹಳ್ಳಿಯ ಆಗಸದಲ್ಲಿ
ನರಳುತಿದೆ ಹಕ್ಕಿಗಳು ಪೇಟೆಯ
ಚಿನ್ನದ ಪಂಜರದಲಿ

ಗದ್ದೆಯ ಮೇಲೆ ಖುಷಿಯ ಹೊಳೆ
ರೋಡಿನ ಮೇಲೆ ಗಾಡಿಗಳ ಹೊಗೆ
ಹಳ್ಳೀಲಿ ಪ್ರಶಾಂತದ ಸಿಹಿಗಾಳಿ
ಪೇಟೇಲಿ ಮಾಲಿನ್ಯದ ಹಾವಳಿ

ನಗರದಲಿಹುದು ಹೆಚ್ಚಿನ ಅವಸರ
ಹಳ್ಳಿಯಲಿ ಸುಂದರ ಸುಮಧುರ ಪರಿಸರ
ಪೇಟೆಯಲ್ಲಿ ಅರ್ಥವಾಗದ ಮಾರ್ಗ
ಹಳ್ಳಿಯ ಪ್ರತಿ ಬೀದಿಯಲೂ ನಗುವಿನ ಸ್ವರ್ಗ

ನಗುತಿವೆ ಮುದ್ದೆ ತಿಂದ ಬಾಯಿಗಳು
ನರಳುತಿವೆ ಫಿಜ್ಜಾ ತಿಂದ ಬಾಡಿಗಳು
ಉಸಿರಿನ ಉಸಿರೇ ಅಲ್ಲಿಯ ಹಸಿರು
ಹೊಗೆಗೆ ಕಟ್ಟುವುದು ಇಲ್ಲಿಯ ಉಸಿರು

- shiva

22 Oct 2015, 03:07 pm

ಬಿಂಕದ ವಯ್ಯಾರಿ

ನಕ್ಕರೆ ಸುಕುಮಾರಿ
ಬಿಂಕದ ನಡಿಗೆಯ ಬಂಗಾರಿ
ನಟಿಸಿದರೆ ನಾಟ್ಯಮಯೂರಿ
ನನ್ನವಳು ಹಠಮಾರಿ

- Irayya Mathad

22 Oct 2015, 08:08 am

ಬ್ರಹ್ಮಾಂಡ ಪಾಲಕ

ಬ್ರಹ್ಮ ರೂಪ ಬ್ರಹ್ಮ ಕಮಲ ಬ್ರಹ್ಮ ದೇವನ ಪಿತ
ಹರಿ ಓಂ ನಾರಾಯಣನೆ ಕಾಪಾಡು ಕರುಣಾಳು ಜನಕನೆ !!ಪ!!

ಆದಿಯಿಲ್ಲದ ಅಂತ್ಯವಿಲ್ಲದ ಅನಂತಸ್ವರೂಪನೆ
ಸಕಲ ಜೀವ ರಾಶಿ ಕುಲದ ಜೀವದಾತನೆ
ಕಾಪಾಡು ಎನ್ನನೆ ನೀನು

ಅಂಕೆ ಇಲ್ಲದ ಸಂಖ್ಯೆ ಇಲ್ಲದ ಮಹಾಮಹಿಮನೆ
ಸರ್ವರೂಪನು ಸರ್ವಶಕ್ತನು ಸರ್ವಂತರ್ಯಾಮಿಯೆ
ಕಾಪಾಡು ಎನ್ನನೆ ನೀನು

ಬೀಸು ಗಾಳಿಗೆ ದಿಕ್ಕು ತೋರಿಸೊ ದಿಕ್ಸೂಚಕನೆ
ಭೋರ್ಗರೆವ ಕಡಲ ಅಲೆಗೆ ಸೂತ್ರಧಾರನೆ
ಅಗ್ನಿ ವಾಯು ವರುಣ ದೇವರ ಅವತಾರನೆ

ಏನು ಮಾಡಲು ಅರಿಯನು ನಾ ಈ ಜಗದಲಿ
ಕಣ್ತೆರೆದು ನೋಡಲು ಬರಿ ಕತ್ತಲೆ ಮನೆ
ಕರುಣಿಸು ಜ್ಞಾನದ ಬೆಳಕನ್ನು

- Irayya Mathad

22 Oct 2015, 07:33 am