ಅತ್ತಾಗ ತಾಯಿಯಂತೆ ಕಣ್ಣಿರು ಒರೆಸಿ. ಸೋತ್ತಾಗ ತಂದೆಯಂತೆ ಧೈರ್ಯ ನೀಡಿ. ಹೆಜ್ಜೆ ಹೆಜ್ಜೆಗೂ ಸ್ನೇಹಿತನಂತೆ ಪ್ರೋತ್ಸಾಹ ನೀಡಿ. ಹ್ರದಯದಿಂದ ಈ ಮಗುವನ್ನು ಹಾರೈಸುವ ಈ ನನ್ನ ಮುಗ್ಧ ಮನಸ್ಸಿರುವ ನನ್ನ ಈ ಮುದ್ದು ಮನಸ್ಸಿಗೆ ಹೇಳುವೇ ತಾಯಿಂದರ ದಿನಾಚರಣೆಯ ಶುಭಾಶಯಗಳು ಅಮ್ಮಾ......
ಬಾಲ್ಯದಲ್ಲಿ ಚಿಗುರೋಡೆದ ನಮ್ಮ ಪ್ರೀತಿ
ತಿಳಿದಿರಲಿಲ್ಲ ನಮಗೆ ಅದರ ರೀತಿ
ಬೆಳೆಯುತ್ತ ಬೆಳೆಯುತ್ತ ಪ್ರೇಮಿಗಳಿಗಾದೆವು
ನಾವು ಸ್ಪೂರ್ತಿ
ಕೊನೆಗೂ ಫಲಿಸಿತು ಮದುವೆಯಲ್ಲಿ ನಮ್ಮ ನಿಜ ಪ್ರೀತಿ.......... ❤️
ಪಿಸುನುಡಿಯನಾಲಿಸಲು ಮನ ಬಯಸುವುದು ಸಹಜ
ಒಲವೆಂಬ ಕುಡಿನೋಟ ಸೆಳೆದ ಬಳಿಕ
ಹೊಸತನದ ಭಾವಗಳು ಗರಿಗೆದರಿ ಹಾರುತಿರೆ
ಪ್ರೀತಿ ಪ್ರೇಮದ ಸವಿಯನುಣಲು ತವಕ
ಬಿಸಿ ಉಸಿರ ಪರುಶದಲಿ ಹಾಯಾಗಿ ನಿದಿರಿಸಲು
ಕಾತರದಿ ಹೃದಯಗಳು ಕಾಯುತಿಹುದು
ಒಸಗೆಯೊಂದಿಗೆ ಬೆಸೆದ ಭಾವ ಬಂಧಗಳೆಲ್ಲ
ಭದ್ರತೆಯ ನೆಲೆಯಲ್ಲಿ ನಗುತಿರುವುದು
ಎದೆಯ ಬಡಿತದ ಸದ್ದು ಕಿವಿಯ ತಮಟೆಯ ಸೇರಿ
ನವ್ಯ ಸಂಚಲನವನು ಹುಟ್ಟಿಸಿಹುದು
ಬದುಕೆಂಬ ಪುಟದಲ್ಲಿ ಗೀಚಿದಕ್ಷರವೆಲ್ಲ
ಹಾಡಾಗುತಲಿ ಹೊರಗೆ ಹೊಮ್ಮುತಿಹುದು
ಬದಗು ಇಲ್ಲದ ಪ್ರಣಯ ಪಕ್ಷಿಗಳ ಸಹಯಾನ
ಮುಂದಕ್ಕೆ ಮುಂದಕ್ಕೆ ಸಾಗುತಿಹುದು
ಬದಲಿಸಲು ಸಾಧ್ಯವಿಲ್ಲದ ಹಾಗೆ ಸಂಬಂಧ
ತಳವೂರಿ ಬಲುಗಟ್ಟಿಯಾಗಿರುವುದು
ಮುನಿಸು ಇಲ್ಲದ ಪಯಣ ಚಿತ್ತಗಳ ಸಮ್ಮಿಲನ
ಆಸೆ ಆಕಾಂಕ್ಷೆಗಳು ಹೆಚ್ಚುತಿಹುದು
ನನಸಾಗುವಾಸೆಗಳ ನೆನೆದು ನೂತನ ಜೋಡಿ
ಹಸಿವು ನಿದಿರೆಗಳನ್ನು ಮರೆಯುತಿಹುದು
ಅನುರಾಗದೊಡನಾಟ ಬಹುಕಾಲವಿರಲೆಂದು
ದೇವರಲಿ ಬೇಡಿಕೆಯು ಸಲ್ಲುತಿಹುದು
ದಿನನಿತ್ಯ ಕಾದಾಟವಿರದಂಥ ಅನುಬಂಧ
ಕೊನೆಯವರೆಗೂ ಮುಂದುವರೆಯಲೆಂದು
ವಾಸ್ತವಕ್ಕಿಂತ ಚೆಂದ ಕನಸಿನ ಬಣ್ಣ
ಅದರೊಳಗಾದರೂ ನಾ ಬೇರೆಯಬೇಕು ನಿನ್ನ.......
ನೀ ತೊರೆದರು ಅದರಲ್ಲಿ ಬರುವೆ ಪ್ರತಿದಿನ
ಅದರೊಳಗೆ ಕಳೆಯುವೆ ನನ್ನ ಪೂರ್ತಿ ಜೀವನ.......
ಮುಂದಿನ ಜನ್ಮದಲ್ಲಾದರೂ ನಾ ಸೇರುವೆ ನಿನ್ನ
ದಯಮಾಡಿ ಮರೆಯದಿರು ಅಂದು ನೀ ನನ್ನ.......
ಪುಸ್ತಕದ ಪುಟದೋಳಗೆ ಸ್ಪಟವಾಗಿ ಬರೆಸಿ, ಮನಸೋಳಗೆ ಜ್ಞಾನ ದೀವಿಗೆಯ ಬೆಳಗಿಸಿ, ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ , ಬದುಕಿನ ನಿಜವಾದ ನಡೆ ನುಡಿಯನ್ನು ಕಲಿಸಿದ, ಬೋಧನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ ಗುರುವು ನಿನ್ನಮ್ಮ.ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ.ಆ ನನ್ನ ಮುದ್ದು ಅಮ್ಮನಿಗೆ ಮುದ್ದ ಮುದ್ದಾಗಿ ಹೇಳುವೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.