Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೊನೆ ಗಿರಾಕಿ.....
ಬರವಣಿಗೆ ಎಂದು ಬರೆದ ಅನೇಕ ಪದ ಅಳಿಸಿವೆ.
ಬದುಕು ಎಂದು ಬರೆದ ಅನೇಕ ಪದ ಆಳಿವೆ.
ಬರೆಯುವಂತ ಲೇಖನಿಯ ಮುಳ್ಳು ಮುರಿದಿದೆ.
ಬರೆದ ಲೇಖನಿಯ ತುದಿ ಷಯಿಯಿಂದ ಚಿತ್ರಿಸಿವೆ.
ಬಿಳಿ ಕಾಗದದ ತುಂಬೆಲ್ಲ ಅನುಭವದ ಆಕಾರ.
ಪುಟ್ಟ ತಿರುಗಿಸಿ ನೋಡಿದಾಗಲೆ ಇನ್ನೇನೂ ಬೇಕೆನ್ನೂವ ಸಹಕಾರ.
ಬಿಳಿ ಕಾಗದ ನೋಟಾದಗ ಉಕ್ಕುವ ಖುಷಿ.
ನೋಟೇಲ್ಲ ಸುಣ್ಣವಾದಗ ಅದೇನೋ ಘಾಸಿ.
ಎಲ್ಲವುಗಳ ,ಎಲ್ಲದರ ಲೇಖನಿಯೇ..ಮನಸ್ಸು.
ಬರವಣಿಗೆಯೇ,ಬದುಕು.
ಕೊನೆ ಗಿರಾಕಿ ಅಕ್ಷರವೇ.....?.ಅನುಭವವೇ....?ಇಲ್ಲ ಕುರುವೇ...?
## ಈಶ,ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
06 Oct 2015, 02:02 pm
ನನಗಿಂತ ನೀ ಮೇಲೆಂದು
ಬೀಗಬೇಡ ಗೆಳೆಯ....
ನಿನಗಿಂತ ನಾನೇನು
ಕಡಿಮೆಯಿಲ್ಲ......
ನೀ ಮಾತಿನ ರಾಜ್ಯದ
ಸರದಾರನಾದರೆ,,
ನಾನು ಮೌನ ಸಾಮ್ರಾಜ್ಯವ
ಆಳುವ ಮಹಾರಾಣಿ.....
ನೀ ತಿಂಗಳಿಗೊಮ್ಮೆ
ಪ್ರಕಾಶಿಸುವ ಚಂದ್ರನಾದರೆ,,
ನಾನು ಪ್ರತಿದಿನ
ಮಿನುಗುವ ನಕ್ಷತ್ರ.....
ನೀನು ಮೈ ಪುಳಕಿಸುವ
ಬಿಸಿ ಅಪ್ಪುಗೆಯಾದರೆ,,
ನಾ ಎಲ್ಲರನ್ನೂ ಸೆಳೆವ
ನಿಷೆಯೇರಿಸುವ ಕಣ್ಣೋಟ....
- ನಿಶಾ ರೂಪ
06 Oct 2015, 02:25 am
ಗೆಳತಿ
ಮರೆಯಲಾರೆ ನಾ ನಿನ್ನ
ನನ್ನ ಕೊನೆಯ ಉಸಿರು ಇರುವರೆಗೂ,
ಅದು ಹೇಗೆ ಹೇಳಿ ಹೋದೆ ನೀ
ನಾ ನಿನಗೆ ಬೇಡವೆಂದು,
ಹೇಳಿ ಹೋಗು ಗೆಳತಿ
ಕಾರಣವ?.
- mahesh
02 Oct 2015, 10:34 am
ಖಾಲಿ ಖಾಲಿ
ನೀ ಇರದ
ನೀ ಬರದ
ಈ ನನ್ನ
ಹೃದಯ
ಖಾಲಿ ಖಾಲಿ...
- ಪ್ರತಾಪ್ ಕೆ ಎಸ್ ಪಿ ಉಪ್ಪಾರ್
30 Sep 2015, 01:28 pm
ತನ್ನ ನೋವಲಿ
ತನುವು ಸೊರಗಿತು
ಮನವು ಕೊರಗಿತು
ಕಣ್ಣು ಕಂಬನಿ ಮಿಡಿಯಿತು
ಏನು ಸೌಹಾರ್ದವೋ?
ಇತರರ ಅದೇ ನೋವಲಿ
ಕಣ್ಣು ಕುರುಡಾಯಿತು
ತನುಮನವು ಮೌನಿಯಾಯಿತು
ಏನು ಅಕ್ರಮವೋ?
ಇಸ್ಹಾಕ್ ಕೌಸರಿ
- ishak
30 Sep 2015, 07:54 am
ಮಾನವ ದೇಹ ಮಾಂಸದ ಕಣಜ
ತಿಳಿಯೊ ನೀನು ಮನುಜ..
ಜೀವನವೆಂಬ ಜಂಜಾಟದಲಿ
ದಯೆಯು ಇರಲಿ ಸಹಜ..||ಪ||
ಶ್ವಾಸ ನಿಂತಮೇಲೆ ಹ್ರದಯ ಕೊಟ್ಟರೆ ನಷ್ಟವೇನು ಮನುಜಾ..
ಇನ್ನೊಂದು ಜೀವಕೆ ಜೀವವಾಗುವೆ
ತೋರು ದಯೇ ಕರುಣಾ..
||ಪ||
ಪರರ ಮೊಗದಲಿ ನಯನವಾಗಲೀ ನಿನ್ನ ನೇತ್ರ ಮನುಜಾ ...
ಉಸಿರು ನಿಂತಮೇಲು ನೋಡಬಹುದು ನೀ ಈ ಪರಿಯಾ ಜಗವಾ...
||ಪ||
ನಿಸ್ವಾರ್ಥಥೆಯಲಿ ದಾನಮಾಡು ನೀ ಕಿಡ್ನಿಯೆಂಬ ಕಸುವಾ....
ಪರೊಪಕಾರಂ ಇಧಂ ಶರೀರಂ
ಎಂಬ ಮಂತ್ರ ಪಠಣ....
||ಪ||
- vikas ಅನುಭವಿ
27 Sep 2015, 07:40 am
ಹನಿ ನೀರಿಗೆ ಒದ್ದಾಡುತ್ತಿರುವ ಓ ನನ್ನ ಆತ್ಮೀಯ,
ನೀ ಕೊಟ್ಟ ಭಿಕ್ಷೆ ಈ ರಾಜಕೀಯ,
ಸುಡದೆ ಬಿಡದು ಅವರನು ನೀನ್ನೊಡಲ ಕಿಚ್ಚು,
ಇನ್ನಾದರು ಬಿಡಿಸಿರಿ ಅಧಿಕಾರದ ಹುಚ್ಚು,
ಆರಿಸೋಣ ಇನ್ಮುಂದೆ ಕಾಯುವವನ,
ಪಕ್ಷಾತೀತ, ಜಾತ್ಯಾತೀತ ಆಗಿರುವವನ.
- ಪೀ. ಎಸ್. ಪೀ
26 Sep 2015, 06:49 pm
ಸಾವಿರ ಮಾತುಗಳಾಚೆಯು....
ಕಳೆಯಬೇಕಿದೆ...
ಒಂದು ಮೌನದ ಸಂಜೆ ನಿನ್ನೊಂದಿಗೆ. ...
ಸಾವಿರ ಬಾರಿ ಅತ್ತಿದ್ದರು...
ಅಳುವನ್ನೂ ಸಂಭ್ರಮಿಸಬೇಕಿದೆ ನಿನ್ನೊಂದಿಗೆ...
ಹೇಳೂ ಗೆಳೆಯ..
ಇರುವೆಯ ನನ್ನ ಜೊತೆಗೆ ಕೂನೆವರೆಗೇ...
- sridevi.N
26 Sep 2015, 02:34 pm
ಒಮ್ಮೆ ಬೆರಳ್ ತುದಿ ಸುಟ್ಟಾಗ ನೆಪವಾದೆ
ಕಣ್ಣ್ ಹಾಯಿಸಲ್ ಹಾಗೆ ಮರೆಯಾದೆ
ನೋವಿನ ಮೂಟೆಯಾಗಿ ನೀ ಹೃದಯ ಸೇರಿದೆ
ಮರೆತರು ಮರೆಯದಾಗೆ ಆ ಚಂದಿರನ ಬೆಳಕಂತೆ ಕತ್ತಲೆಯ ಲೋಕಕೆ ಮಾತ್ರ ಸೀಮಿತವಾದೆ....
ನೀ ಯಾರೇ....???
- Rajak
26 Sep 2015, 09:42 am
ಇಂದು ನೀ ನನ್ನ ಅಗಲಿ ಹೋದರು
ನಿನ್ನ ನೆನಪುಗಳಿಂದ ಮಾಸೀ ಹೋದರು
ಎಂದಾದರು ನಾ ನಿನ್ನ
ನೆನಪುಗಳಲ್ಲಿ ಮೂಡಿದರೆ ಹುಡಕದಿರು ಮೆತ್ತೆಲ್ಲಿಯೂ
ನಾ ನಿನ್ನ ಕಣ್ಣಲ್ಲೆ ಇರುವೆ ಒಂದು ಹನಿ ಕಣ್ಣಿರಾಗಿ.....
- Rajak
24 Sep 2015, 03:49 pm