Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅನ್ವೇಷಣೆ
ದೂರದೂರಿನ ಜನರ ಗುಂಪಿನಲಿ ನಮ್ಮವರು ಯಾರಾದರೂ ಕಾಣಬಹುದೆಂಬ ಅನ್ವೇಷಣೆ ....
ಕಪ್ಪು ಬಿಳುಪಿನ ಈ ಬದುಕಲಿ ಬಣ್ಣವ ತುಂಬುವ ಯಾರಾದರೂ ಸಿಗಬಹುದೆಂಬ
ಅನ್ವೇಷಣೆ ....
ಬದುಕ ಜಂಜಾಟಗಳ ದೂರವಿಟ್ಟು ನೆಮ್ಮದಿಯನೆಲ್ಲಿ ಹುಡುಕಬಹುದೆಂಬ ಅನ್ವೇಷಣೆ.....
ಸುಖದ ಕಾರಣಗಳ , ದುಃಖದ ಮೂಲಗಳ, ಹುಟ್ಟು ಸಾವುಗಳ ಅನ್ವೇಷಣೆ ...
ಸತ್ತ ಮೇಲೆ ಏನೇನಾಗಬಹುದು.. ??
ಸ್ವರ್ಗದ ದಾರಿಗಳ ಹುಡುಕಲು , ನರಕದ ಕೂಪಗಳ ಮರೆಮಾಚಲು , ಅನ್ವೇಷಣೆ.........
ಅನ್ವೇಷಣೆಗಳೆಲ್ಲ ಮುಗಿದ ದಿನ ಯಾತ್ರೆ ಸಾಗುತ್ತಿರೆ ... ಅನ್ವೇಷಣೆಗಳಲ್ಲಿ ಕಳೆದುಕೊಂಡ ಸ್ನೇಹ - ಸಂಬಂಧಗಳಿಗೆ ಅನ್ವೇಷಣೆ........
ನಯನ್ ಅರೇಹಳ್ಳಿ
- ನಯನ್ ಅರೇಹಳ್ಳಿ
09 Aug 2015, 04:00 pm
ಭಕ್ತರ ತೊಂದರೆ ನಿವಾರಣೆಗೆಂದೆ
ಚಿಂಚಲಿ ಮಾಯಕ್ಕ ನೀ ಬಂದೆ
ಉತ್ತರದ ಮತ್ತೋರ್ವ ಶಕ್ತಿದೆೇವತೆ
ಮಾಯವ್ವ,ಮಹಾಕಾಳಿ,ಮಾಯಕಾರತಿ.
ಹಳ್ಳದ ಬಳಿ ಕುರಿಕಾಯುವ ಕಂಡೆ
ಅವನಲ್ಲಿ ಕುರಿಹಾಲು ಬೇಡಿದೆ
ಹಾಲು ಕೊಡಲು ಅವನು ನಿರಾಕರಿಸಲು
ಶಕ್ತಿಯಿಂದ ಹಳ್ಳವನ್ನೆ ಹಾಲು ಮಾಡಿದೆ
ಕುರಿಗಳೆಲ್ಲ ಕಲ್ಲಾಗೆಂದು ಶಾಪಕೊಟ್ಟೆ
ಕುಕಿೀ
- santoshBP
09 Aug 2015, 04:44 am
ಬಣ್ಣ
.....
ಬಣ್ಣ ಲೇಪಿಸುವ ಕೈ, ಬಣ್ಣದಲ್ಲೇ ಬಣ್ಣಿಸುವ ಕೃತಿ.
ತೆರೆದ ನೋಟದ ಕಣ್ಣು, ಓದುತ್ತಿದೆ ಆಕೃತಿ.
ತನ್ನೆಲ್ಲ ಭಾವನೆಯ ಬಯಕೆ ಬರೆಯಬಲ್ಲದು ಪುಟಗಟ್ಟಲೆ.
ಪ್ರಕಾಶಕರ ಚೌಕಾಸಿ ಪ್ರಖರವಾದಗ ಕಟ್ಟುವುದು ಗಂಟಲೆ.
ಬೇರು ಬುಡದಲ್ಲಿ ಮಣ್ಣ ಮಡಿಲಲ್ಲಿ ಸಂಚಾರ.
ಇನಿಯನ ಪಾತ್ರೆಯಲ್ಲಿ ಮೈಮನಗಳ ಆಚಾರ.
ಕಣ್ಣಿನ ಅಂದಕೆ ಕಾಡಿಗೆಯ ಕೊಡುಗೆ
ಕಾಮನಬಿಲ್ಲಿನ ರುಚಿ ಯಾವ ಪಾತ್ರೆಯ ಅಡುಗೆ .
ನಿತ್ಯ ಸತ್ಯದೊಡನೆ ಚಲಿಸುವ ಗಾಳಿಯ ಮನ
ಎಲ್ಲರ ಎಲ್ಲದೊರಳಗಿನ ಧ್ವನಿ ವರಸೂಸುವ ಗಾನ.
ಅಂತಿಮ ಯಾತ್ರೆಯಲ್ಲಿ ಬಣ್ಣ ಲೇಪಗಳ ಜಾತ್ರೆ .
ದೇರಾದರು ನಮ್ಮಳಗಲ್ಲ ಫೋಟೋ ಕಟ್ಟಿ ನಲ್ಲಿ ನಿತ್ರೆ.
--ಈಶ,ಎಂ.ಸಿ.ಹಳ್ಳಿ ...........
- ಈಶ, ಎಂ.ಸಿ.ಹಳ್ಳಿ
08 Aug 2015, 09:35 pm
- ಪಾರದರ್ಶಕತೆ
ಪಾರದರ್ಶಕತೆ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಮನಸ್ಸಿನ ಆಟವ....
ಸಂಸ್ಕಾರದ ಸುಳಿ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ನಡತೆಯ ಕಾಟವ......
ದಿಟ್ಟತನ ದಾರಿ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ದೃಷ್ಟಿ ದೋಷವ......
ಜಾತ್ಯಾತೀತ ಜನ್ಮ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಜಾತಿಯ ಬಂಧನವ.....
ಹೋರಾಟದ ಹೊಳಹೊರಮೈ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಹಣದ ಅಪ್ಪಣೆಯ......
--ಈಶ,ಎಂ.ಸಿ.ಹಳ್ಳಿ ....
- ಈಶ, ಎಂ.ಸಿ.ಹಳ್ಳಿ
08 Aug 2015, 09:29 pm
"ಸಿಗಲಾರದ ಫ್ರೆಂಡ್ ನ ಹುಡುಗಕಬೇಡಿ"
"ಸಿಕ್ಕಿರುವ ಫ್ರೆಂಡ್ ನ ಕಳಕೊಬೇಡಿ"
"ಕಾಯಿಸುವ ಫ್ರೆಂಡ್ ನ ನಂಬಬೇಡಿ"
"ನಂಬಿರುವ ಫ್ರೆಂಡ್ ನ ಯಾವತ್ತು ನೊಯಿಸಬೇಡ"
- ಶಾಕೀರ್ ಅಕ್ಕರಂಗಡಿ
07 Aug 2015, 02:48 pm
ಮರೆತಾದರೂ
ಮನೆಯಯ ಬಳಿ ಬರಬಾರದೆ
ಅತ್ತು ಕಾಡಿದವನಲ್ಲ
ಮುತ್ತು ಬೇಡಿದವನಲ್ಲ
ಚಿತ್ತ ನಿನ್ನೊಳು ಒತ್ತೆಯಿಟ್ಟೆನಲ್ಲ
ಮರೆತಾದರೂ ಒಮ್ಮೆ
ಮನಸಿನ ಕದ
ತಟ್ಟ ಬಾರದೆ
ಸಂತೆಯಲಿ ಒಂಟಿಯಾದಂತೆ
ಸೊಂಟ ಮುರಿದು
ಕುಂಟನಾದಂತೆ
ನೆಂಟರಿಷ್ಟರ ನಡುವೆ
ಕಂಠ ಬಿಗಿದು ಮೌನಿಯಾದೆ
ಮರೆತಾದರೂ ಒಮ್ಮೆ
ನಗೆಯ ಮಲ್ಲಿಗೆ
ಚೆಲ್ಲಬಾರದೆ
..........ಮಧುಗಿರಿ ಬದರಿ
- K.Badarinatha
07 Aug 2015, 02:11 pm
ಬೆಳಕು ನೀಡುವ ಸೂರ್ಯ
ನೀನಿರುವೆ ಬೆತ್ತಲೆ.
ನೀನೊಮ್ಮೆ ಮುನಿದರೆ
ಜಗವೆಲ್ಲ ಕತ್ತಲೆ
ಮೂಡಣವೆ ನಿನಗೆ ಹುಟ್ಟು ತಾಣ
ನೀನು ಮೂರುಹಂತ ತಳಿದ ಜಾಣ
ಮುಂಜಾನೆ ಮಗುವಂತೆ
ದಿನದ ನಡುವೆಲ್ಲ ನವತರುಣನಂತೆ
ಉರಿ
- santoshBP
07 Aug 2015, 08:26 am
ನಿನ್ನ ನೆನೆದು ಚಡಪಡಿಸುತ್ತಿರುವ ಮನಸ್ಸು
ಸರಿಯಾ ತಪ್ಪಾ ಅನ್ನೋ ಕತ್ತಿವರಸೆಯಲ್ಲಿ
ಬುದ್ಧಿಯ ಎದುರು ತಲೆಬಾಗದು...
ವಿಧಿಯಂತು ನಗುತ್ತಿದೆ...!
#ರಮ್ಮಿ
- Rammi
05 Aug 2015, 02:16 pm
ಹಳೆಯ ಋತುವೊಂದು ಮರಳಿದೆ
ನೆನಪುಗಳು ಪದೇ ಪದೇ
ಮರುಕಳಿಸುವಂತೆ...
ಈ ರೀತಿಯ ನೋವು ದಿನ ಉರುಳಿದಂತೆ
ನೋವು ಇಲ್ಲಿ ಏಕಾಂಗಿ
ನೆನಪುಗಳ ಹೊತ್ತು ತರುವವು
ಸಿಹಿಯ ಯಾತನೆಯಂತೆ...
ಎಷ್ಟು ಸೌಧಗಳ ಕಟ್ಟು ಕೆಡವಿದರು
ಹುಟ್ಟಿ ಸಾಯುವ ಪ್ರೀತಿಗೆ ಸ್ಮಾರಕ.
ನನ್ನ ಜೊತೆಗೂಡಿ ಅಲೆಯುತ್ತಿವೆ
ಸಾಗಿದಂತೆಲ್ಲಾ ಗುರಿಯಿಲ್ಲದೆ...!
ಮೌನವನು ಸಂತಯಿಸಲು
ಮತ್ತೊಂದು ಧೀರ್ಘ ಮೌನ
ಮೌನಗಳ ಮಾತು ಕೇಳಲು ನಾನಿರುವೆ
ನನ್ನ ಮಾತು ಕೇಳಲು ನೀನಿಲ್ಲ...
#ರಮ್ಮಿ
- Rammi
05 Aug 2015, 01:50 pm
ಕಳ್ಳಕಾಕರು ಅಪರಿಚಿತರಿಗೆ
ಸಿಂಹಸ್ವಪ್ನ ......ನಾಯಿ!
ಸ್ವಾಮಿನಿಷ್ಠೆ ನಿಯತ್ತಗೆ
ಹೆಸರುವಾಸಿ.....ನಾಯಿ!
ಮನೆಕಾಯಲು ಸುತ್ತಮುತ್ತ
ಕಾವಲುಗಾರ.....ನಾಯಿ!
ಸಾಕಿ ಸಲಹುವ ಮಾಲಕನಿಗೆ
ನೆರವಾಗುವ.....ನಾಯಿ!
ಕೊಲೆ ಸುಲಿಗೆ ದರೋಡೆಗಳಿಗೆ
ಪತ್ತೇದಾರಿ.....ನಾಯಿ!
ಉಂಡಮನೆಗೆ ಕನ್ನಹಾಕುವ
ಮನುವಿಗೆ ಮಾದರಿ.....ನಾಯಿ!
ಹಾಗಾದರೆ..... ಬನ್ನಿ ಆಚರಿಸೋಣ
Work like a DOG DAY, "
- santoshBP
05 Aug 2015, 12:34 pm