ಬದುಕಿನ ಈ ಪಯಣದಲ್ಲಿ,
ಭಾವನೆಗಳ ತೊಳಲಾಟದಲ್ಲಿ,
ಅದೆಷ್ಟೋ ಹೇಳಿ ಕೊಳ್ಳಲಾಗದ ನೋವುಗಳು,
ಕೇಳಲು ಆಗದ ಪ್ರಶ್ನೆಗಳು,
ಸಿಗದ ಅದೆಷ್ಟೋ ಉತ್ತರಗಳು,
ಕಾಲದೊಂದಿಗೆ ಉರುಳುವ ನೆನಪುಗಳು...!!
ಮಸನದ ದಾರಿ ಹಿಡಿದು ಹೊರಟ
ಕಹಿ ಅನುಭವಗಳು....!
ಭರವಸೆಯ ಬೆಳಕು, ಈ ಬದುಕು
ಶುಭ ದಿನಕ್ಕಾಗಿ ಕಾಯುವ ಸಿಹಿ ಕನಸುಗಳು,,
shobha. k✍️
ತಾಯಿಯ ಮಮತೆ.. ತಾಯಿಯ ಎಂದರೆ ನಮಗಾಗಿಯೇ ಆ ದೇವರು ಕರುಣಿಸಿದ ವನಿತೆ..ಕಂದನನ್ನು ಮುದ್ದಾಡುವ ಆ ವರಸೆ..ಎಳ್ಳಷ್ಟೂ ಕರಗೋದಿಲ್ಲ ಅವಳ ಮಮತೆ... ಅವಳಿಂದಲೇ ನಾ ಸಾಕಷ್ಟು ಕಲಿತೆ..ಅವಳ ಹ್ರದಯ ಪ್ರೀತಿ ತುಂಬಿದ ಹಣತೆ... ವಿಶಿಷ್ಟವಾದ ಗುಣವೇ ಅವಳಲ್ಲಿನ ಕ್ಷಮತೆ... ಇರಬೇಕು ಸದಾ ನಾನವಳ ಜೋತೆ...ಅವಳು ಬಗ್ಗೆ ಎಷ್ಟು ವರ್ಣಿಸಿದರೂ ಮುಗಿಯದು ನನ್ನೀ ಈ ಪುಟ್ಟ ಕವಿತೆ...
ನೀನು ನನ್ನ ಜೀವಕೆ ಉಸಿರು ಕೊಟ್ಟ ದೇವತೆ... ನನಗೆ ಪ್ರೀತಿ ಸಹನೆಯಿಂದ ಬದುಕುವ ಪಾಠ ಕಲಿಸಿದ ಮಾತೆ... ಜಗತ್ತಿನಲ್ಲಿ ಬೇರೆ ಯಾರು ಕೋಡಲಾರರು ತಾಯಿಯ ಮಮತೆ...ನೀ ಸದಾ ನಗುತ್ತಿದರೆ ಬರಲಾರದು ನನಗೆ ಯಾವುದೇ ಕೋರುತೆ... ಅಮ್ಮ ನಿನ್ನ ಪಾದಕ್ಕೆ ಸರ್ಮಪಿಸುವೆ ಈ ನನ್ನ ಪುಟ್ಟ ಕವಿತೆ....
ದುಂಬಿಯೂ ಹೂವನು ಹುಡುಕಿದಂತೆ..
ನನ್ನ ಕಣ್ಣುಗಳು ನಿನ್ನನೇ ಹುಡುಕುತ್ತಿವೆ..
ಜೇನಿನ ಆ ಸವಿ ಜೇನಿಗಿಂತ.......
ನಿನ್ನ ಆ ಪ್ರೀತಿಯೇ ಸಿಹಿಯನಿಸಿದೆ ನನ್ನ ಮನಕೆ ..
ಕೋಗಿಲೆ ಆ ಮದುರ ಸ್ವಾರಗಳಿಗಿಂತ....
ನಿನ್ನ ಮಾತುಗಳು ಕೇಳಲು ಅಂಬಲ್ಲೀಸಿರುವೆ...
ನಿನ್ನ ಪ್ರೀತಿಯನ್ನು ಬಯಸಿ ಕಾಯುತಿರುವ...
.......ನಿನ್ನ ಮುಗ್ದ ಪ್ರೇಮಿ.
ಶೀತವಾದರೂ ಸರಿ ಜೋರ್ ಮಳೆಯಲಿ
ಹೃದಯ ಒದ್ದೆಯಾಗೋವರೆಗೂ
ನಿನ್ನ ಜೊತೆ ನಾ ನೆನೆಯಬೇಕು....
ಹೀಗೇ ಇಳಿಸಂಜೆ ಸಮಯದಲಿ ನಿನ್ನ
ಕಿರುಬೆರಳಿಡಿದು ರಸ್ತೆ ಮುಗಿಯೋ
ವರೆಗೂ ನಾ ನಡೆಯಬೇಕು....
ನಿನ್ನೆಲ್ಲಾ ಸುಂದರ ಕನಸಲ್ಲಿ
ನೆಚ್ಚಿನ ಪರಿಚಿತ ಆಗುವೆ....
ಎದೆಮೇಲೆ ಅಂಗಾಲಿಟ್ಟರೂ ಸಹ
ಹೃದಯ ತುಂಬಾ ಪ್ರೀತಿಸುವೆ....
ಎಮ್.ಎಸ್.ಭೋವಿ.....✍️