ಕೂಗಿದೆ ಕೂಗಿದೆ ಕೂಗಿದೆ
ಅವಳು ಮಾತನಾಡಲಿಲ್ಲ
ತಿರುಗಿ ನೋಡಲಿಲ್ಲ
ನೆನ್ನೆ ತೋರಿದ ಪ್ರೀತಿಯ
ಇಂದು ಮರೆತಳಲ್ಲ
ನನ್ನ ಮೇಲಿನ ಮುನಿಸೋ
ನಡೆದದ್ದೆಲ್ಲಾ ಕನಸೋ
ಏನೆಂದು ತಿಳಿಯಲಿ
ಹೃದಯ ಒಡೆದಳಲ್ಲ
ಕನಸಿಗೆ ಕನಸನು ಸೇರಿಸಿ
ನನ್ನನು ಪ್ರೀತಿಸಿ
ಕನಸಿನರಮನೆಯಲಿ
ನನ್ನ ಕೂರಿಸಿ
ಬರುವೆನೆಂದು ಹೋದವಳು
ಇನ್ನೂ ಬರಲಿಲ್ಲವಲ್ಲ
ಎಷ್ಟು ಕೂಗಲೀ ನಾ
ಗಂಟಲು ಹರಿದಿದೆ
ಜೀವ ಬಳಲಿದೆ
ಉಸಿರು ಹೋಗುವ ಮುನ್ನ
ನೆನಪಾಗಿ ನನ್ನ
ಬಂದು ನೋಡುವೆಯಾ ಚಿನ್ನ
ಮನಸು ನನ್ನದು
ಕನಸು ನಿನ್ನದು
ಕಣ್ಣು ನನ್ನದು
ನೋಟ ನಿನ್ನದು
ಮೂಗು ನನ್ನದು
ಸುವಾಸನೆ ನಿನ್ನದು
ನಾಲಗೆ ನನ್ನದು
ರುಚಿ ನಿನ್ನದು
ಹೃದಯ ನನ್ನದು
ಮಿಡಿತ ನಿನ್ನದು
ದೇಹ ನನ್ನದು
ಕಣಕಣವೂ ನಿನ್ನದು
ನನ್ನ ದೆನ್ನುವುದೆಲ್ಲವು ನಿನ್ನದೇ
ಭವದಿ ಹುಟ್ಟಿ ಬರುವಾಗ ನೀನು ಬರಿಗೈಲಿ ಬಂದೆಯಲೋ
ಹೋಗಬೇಕು ಬರಿಮೈಲಿ ಎಂದು ತಿಳಿದುಕೊಳೋ ಮೊದಲು
ಬಂಧು ಬಳಗವು ಗಳಿಸಿದಾಸ್ತಿಯು ಜೊತೆಗೆ ಬರುವುದಿಲೋ
ಧರ್ಮ ಕರ್ಮದ ಪಾಪ ಪುಣ್ಯದ ಫಲವೇ ಸಿಗುವುದಿಲೋ ನೀನು ಮಾಡಿದ ಪಾಪವಂತು ನಿನ್ನ ಕಾಡದೇ ಬಿಡದಲ್ಲ
ವಿಧಿಯು ಮಾಡಿದ ನಿಯಮವೆಂದು ತಿಳಿ ಯಾರಿಗೂ ಬಿಟ್ಟಿಲ್ಲ
ಪುಣ್ಯ ಕರ್ಮಕ್ಕೆ ಯೋಗ್ಯ ಫಲವು ಸಿಗದಂತೆ ಹೋಗೊದಿಲ್ಲ
ಧರ್ಮವ ನಂಬಿ ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಇಲ್ಲ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದಂತೆ ಓಡುತ್ತಿದೆ ಕಾಲವೆಂಬ ಕುದುರೆ