Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚುಣಾವಣೆ

ಬಂತು ಬಂತು ಚುಣಾವಣೆ
ಎಲ್ಲೆಲ್ಲೂ ಹಣದ ಚಲಾವಣೆ
ಮಾಡುವರೆಲ್ಲ ಬಗೆ ಬಗೆ ಆಣೆ
ಆದರೂ ತೀರದು ಬಡವರ ಬವಣೆ
ಅರಿಯದೆ ಆದರೆ ಮತ ಚಲಾವಣೆ
ಅಭಿವೃದ್ಧಿ ಯನ್ನು ನೀ ಕಾಣೆ.

- ಚನ್ನಮಲ್ಲ ಸ್ವಾಮಿ ಎಂ ಎನ್.

17 May 2015, 02:29 am

ಬಾಲ್ಯದ ಒಂದು ಕನಸು

08072012
ಅಮ್ಮ ನಿನ್ನ ತೊಡೆಯ ಮೇಲೆ
ಸ್ವಲ್ಪಹೊತ್ತು ಮಲಗಲೆ
ಕಣ್ಣನು ಮುಚ್ಚಿ ಕನಸನು ಕಾಣುತ
ನನ್ನನು ನಾನು ಮರೆಯಲೆ
ತಲೆಯನು ಸವರು ಎದೆಯನು ತಟ್ಟು
ಕನಸಿನ ಲೋಕಕೆ ಹೋಗುವೆನು
ನನ್ನದೇ ಲೋಕದಿ ನಾನೆ ರಾಜನು
ಎಲ್ಲರು ನನ್ನ ಸೇವೆಯ ಮಾಡುವರು
ವಜ್ರದ ಕೀರೀಟ ಚಿನ್ನದ ಹಾರ
ಹಾಕಿಕೊಂಡು ಸಿಂಹಾಸನದಲಿ ಕೂರುವೆನು
ಬಗೆ ಬಗೆ ತಿಂಡಿ ಬಗೆ ಬಗೆ ಹಣ್ಣು
ತನ್ನಿರಿ ಎಂದು ಆಜ್ಞೆಯ ಮಾಡುವೆನು
ಒಂದೊಂದೇ ತಿಂಡಿ ಒಂದೊಂದೇ ಹಣ್ಣು
ಕಡಿಯುತ ತಿನ್ನುತ ಅಗಿಯುತ ನುಂಗುತ
ಕೊಬ್ಬುತ ಹಿಗ್ಗುತ ದೊಡ್ಡವನಾಗಿ ಬೆಳೆಯುವೆನು
ದುಡಿಮೆಯ ಮಾಡಿ ಹಣವನು ಗಳಿಸಿ
ಅಮ್ಮ ನಿನ್ನನು ನೋಡಿಕೊಳುವೆನು

- ಚೇತನ್ ಬಿ ಸಿ

16 May 2015, 03:07 pm

ಅಮ್ಮ-ಕಂದಮ್ಮ

ಕಂಡು ವಿಸ್ಮಿತನಾದೆ ಜೀವದೊಳಿನ್ನೋರ್ವ ಜೀವವ
ಗರ್ಭದಿ ಬೆಳೆಸಿಹಳು ಧಾರೆಯೆರೆದು ತನ್ನುಸಿರು-ರಕ್ತವ
'ಅಮ್ಮ-ಕಂದಮ್ಮ'ನ ನಾಮವ ಪಡೆದಿದೆ ಬಾಂಧವ್ಯದಿ
ಶಿರಸಾನಮಿತವೀ ಮಹೋನ್ನತ ಸಂಬಂಧವು ಸಕಲಜಗದಿ

ಅರಳಿತಾ ಕಂದಮ್ಮನು ಅಮ್ಮನ ಕರುಳತಾವರೆಯಾಗಿ
ಬೆಳೆಯುತಾ ಸಮೃದ್ಧಿಸಿತಿನ್ನಷ್ಟು ತಾಯ್ತನವ ಸೊಗಸಾಗಿ
ಬೆಚ್ಚನೆಯ ಕವಚವಾಗಿದೆ ಕಂದಮ್ಮನಿಗೆ ಅಮ್ಮನೊಡಲದು ಅಮ್ಮನಿಗೆ ಅಮೃತಸಿರಿಯು ಕಂದಮ್ಮನ ಮೊದಲಕೂಗದು

© ರಾಘವ ಹರಿವಾಣಂ

- raghavendra ps

15 May 2015, 04:42 pm

ಶಕ್ತಿಗಿಂತ ಯುಕ್ತಿ ಮೇಲು

ಹಕ್ಕಿಯು ಹಾರಿ ಗಗನಕೆ ಏರಿ
ಕರೆಯಲು ಗೆಳೆಯರ ತಾ ಕೂಗಿ
ಗೂಡಿನ ಹೊರಗೆ
ಚಿಲಿಪಿಲಿಗುಟ್ಟುತ
ಹಾರಲು ಬಂದವು ಒಟ್ಟಾಗಿ

ಹಾರುತ ಹಾರುತ
ಹಸಿರನು ನೋಡುತ
ಸೊಬಗನು ಹೀರಿತು
ನಲಿದಾಡಿ

ಹಕ್ಕಿಯ ಅರಸಿ
ಬೇಡನು ಬರಲು
ಬಾಣದ ಗುರಿಯು
ಹಕ್ಕಿಗೆ ಇಡಲು
ಹಕ್ಕಿಗಳೆಲ್ಲವು ಹೆದರಿದವು

ಹಕ್ಕಿಗಳೆಲ್ಲಾ ಒಂದೆಡೆ ಸೇರಿ
ಬೇಡನ ಕಣ್ಣಿಗೆ ಹಿಕ್ಕೆಯ ಹಾಕಿ
ಹಕ್ಕಿಗಳೆಲ್ಲವು ಚದುರಿದವು
ಶಕ್ತಿಯ ಮುಂದೆ ಯಕ್ತಿಗೆ ಗೆಲುವು
ಎನ್ನುತ ನಲಿಯುತ ಹಾರಿದವು

..........ಮಧುಗಿರಿ ಬದರಿ

- K.Badarinatha

15 May 2015, 08:07 am

ಕವಿ

ಕಲ್ಪನೆಯನು ಕಣ್ಣಾಗಿಸಿ ಕಾಣುವವನು ಕವಿಯಾಗಿಹನು
ಅವನು ಕಂಡದ್ದು ರವಿಯೊಮ್ಮೊಮ್ಮೆ ಕಾಣದಾಗುವನು
ತಾಕಂಡ ಕಲ್ಪನೆಗಳೆಲ್ಲವ ಬಣ್ಣಿಸುತಲಿ ಸೊಗಸಾಗಿ ಕವನರೂಪದಿ ಜಗಕೆ ಉಣಬಡಿಸುವನು ರಸದೌತಣವಾಗಿ

ಕಲ್ಪನೆಯ ಆಳಗಲಗಳ ಇತಿಮಿತಿಯು ಕವಿಯೊಬ್ಬನೇಬಲ್ಲ
ಅವನಮನದಿ ಯಾವುದು ಹೇಗರುಳುವುದು ಬಲ್ಲವರಾರಿಲ್ಲ
ಕವಿಹೃದಯದಿ ಸುಂದರತೆಯ ಮೈದಳೆವುವು ಕವನಹಲವು
ಓದುಗರ ಮನಸೂರೆಗೊಂಡು ಸದಾಕಾಲಕೂ ಮುದವೆನಿಪುವು

© ರಾಘವ ಹರಿವಾಣಂ

- raghavendra ps

13 May 2015, 10:24 pm

ಬ್ಯೂಟಿ

ಸ್ವೀಟಿಯ ಸ್ನೇಹ ಚೆಂದ
ಬ್ಯೂಟಿಯ ನೋಟ ಚೆಂದ

ಘಾಟಿಯ ಆಟ ಚೆಂದ
ಚೂಟಿಯ ತಂಟೆ ಚೆಂದ

ಸ್ವೀಟಿಯ ಜೊತೆ
ಬ್ಯೂಟಿಯ ಬಯಸಿದೆ

ಬ್ಯೂಟಿಯ ಜೊತೆ
ಘಾಟಿಯ ಪಡೆದೆ

ಬ್ಯೂಟಿ ಇಲ್ಲದ
ಸ್ವೀಟಿಯಾದರೂ ಓಕೆ
ಸ್ವೀಟಿ ಇಲ್ಲದ ಘಾಟಿ ಏಕೆ ?


ಬ್ಯೂಟಿಯ ಬಿಡು
ಘಾಟಿಯ ಒಯ್ಯಿ ಎಂದೆ

ಬ್ಯೂಟಿಯನು ಒಯ್ದ
ಘಾಟಿಯನು ಬಿಟ್ಟ

......ಮಧುಗಿರಿ ಬದರಿ

- K.Badarinatha

13 May 2015, 08:52 am

ಶುಭ ಮುಂಜಾನೆ...

ದಿನವೊಂದರ ಸ್ವಾಗತಿಸುತಾ
ದಿನಚರಿಯ ನೆನಪಿಸುತಾ
ದೀನನೆಡೆಗಿನ ಬೆಳಕಿನಂತೆ
ದಿನಕರನ ಆಗಮನ

ದಾರಿ ಮರೆತ ಬದುಕು ಇದು
ಸರಿ ದಾರಿಯ ಹುಡುಕುತಿದೆ
ಗುರಿಯೆಡೆಗೆ ದೃಷ್ಠಿಯಿದೆ
ಬೆಳಗಬಲ್ಲುದೇ ಈ ಮನ...

ಕಾಯಕದ ಕರೆಯಿದೆ
ಕನಸುಗಳ ಬೇಲಿಯಿದೆ
ಜೊತೆ ಬೇಡುವ ಕೆಲ ಜೀವವಿದೆ
ಹರಸುವಿರಾ ಈತನ..
ನೂತನವಾಗಲಿ ಈ ದಿನ

- ಸಿರಾಜ್

13 May 2015, 03:17 am

ಗಣೇಶ

ವಂದಿಸಿಹುರು ಸುಂದರ ಗಜಮುಖದ ಗಣಈಶನ
ಶುಭ ಶ್ರೇಯಸ್ಕಾರ್ಯಕೆ ಪ್ರಥಮದಿ ನಮಿತದೇವನ
ಜಗದಿ ನೀನಾಗಿಹೆ ಸಕಲದೇವಗಣದ ಪ್ರಿಯವದನ

ಪಾರ್ವತೀಶರ ಅಚ್ಚು-ಮೆಚ್ಚಿನ ತನುಜನೆಂದು ಪ್ರಸಿಧ್ಧನು
ಕಾರ್ತಿಕೇಯನಿಗಾದೆ ಒಡನಾಟದ ಅಪೂರ್ವ ಸೋದರನು
ನೀನಾಗಿಹೆ ಮೂಶಿಕವಾಹನದ ಸಿದ್ಧಿ-ಬುಧ್ಧಿಗಳ ಒಡೆಯನು

ನೋಡಿನಿನ್ನನು ನಗೆಯಾಡಿದ ಚಂದ್ರನಿಗಿತ್ತೆ ಶಾಪವ
ಶ್ರೀಕೃಷ್ಣನಿಗೂ ಅಂಟಿಸಿದೆ ಚೌತಿಚಂದ್ರನ ಅಪವಾದವ
ಹುಲುಮಾನವರು ನಮಗಾದೀತೆ ನೀ-ತಳೆದರೆ ಕೋಪವ?

ನಿನಗಗ್ರಪೂಜೆಯು ಸಹಸ್ರಾದಿಯಲಿ ಚವಿತಿಯ ದಿನದಂದು

ಪ್ರಾರ್ಥಿಸಿ ನಿನ್ನನು ನಿರ್ವಿಘ್ನಂ ಕುರುಮೇದೇವನೆಂದು
ಪಾಡಿಪೊಗಳುವರು ವಿಘ್ನೇಶ್ವರ ವಿನಾಯಕ ಗಣೇಶನೆಂದು

© ರಾಘವ ಹರಿವಾಣಂ

- raghavendra ps

13 May 2015, 02:32 am

ನಾನು-ನನ್ನತನ

ನಾನೆಂಬ ಭಾವವದು ನನಗೀಯಲಿ ನನ್ನತನವ
ನನ್ನಿರುವಿಕೆಯ ಪ್ರಬಲತೆಗೆ ನೀಡಲಿ ನೂರಾನೆಬಲವ
ನನ್ತನದಿ ಸದಾಬೆಳಗಿ ತೋರಲಿ ನನ್ನೀ-ವ್ಯಕ್ತಿತ್ವವ
'ನಾನೇ'ಯೆಂಬ ಅಹಂ ಆರಿಸದಿರಲೀ ಮನದೀಪಕವ

ನಾನು-ನನ್ನದೆಂಬ ಛಾಪಿರುತಿರಲಿ ವೃತ್ತಿ ಪ್ರವೃತ್ತಿಯಲಿ
ಎಲ್ಲರೊಡಗೂಡಿ ನಾನಿದ್ದೂ ನನ್ತನವು ಪ್ರಜ್ವಲಿಸಲಿ
ನನ್ನತನವದು ಸಕಲ ಸೃಷ್ಟಿಯೊಳು ಪ್ರತ್ಯೇಕವೆನಿಸಲಿ
ಅನುಕರುಣೆಯ ಬಾಳ್ವೆಯ ನಾನೆಂದೂ ಬಯಸದಿರಲಿ

© ರಾಘವ ಹರಿವಾಣಂ

- raghavendra ps

13 May 2015, 02:23 am

ಶಾಲೆ

ಅಮ್ಮ ಅಮ್ಮ ನನಗೆ ಶಾಲೆ
ಬೇಡ ಮಗಳೇ ಊದು ಒಲೆ
ಊದು ಒಲೆಯ ನಾನು ಬಲ್ಲೆ
ಶಾಲೆ ಬೇಕು ಒಲೆಯ ಒಲ್ಲೆ

ಅಜ್ಜ ಅಪ್ಪ ಯಾರೂ ಇಲ್ಲ
ತಿನ್ನಲಿಕ್ಕೆ ಕಾಳು ಇಲ್ಲ
ಹೊಲದಿ ದುಡಿದು ಕಾಳು ಕಡಿ
ಸಂಜೆಯಾಗೆ ಮನೆಗೆ ನಡಿ

ಹಗಲು ಓದಿ ಇರುಳು ದುಡಿವ
ಕೆಲಸ ಯಾಕೆ ಸಿಗುವುದಿಲ್ಲ
ಊಟ ಬೇಕು ನಿದ್ರೆ ಬೇಕು
ಶಾಲೆ ಮಾತ್ರ ಏಕೆ ಬೇಡ

ಇಲ್ಲದವರಿಗೆ ದುಡಿಮೆ ಏಕೆ
ಉಳ್ಳವರಿಗೆ ಗರಿಮೆ ಏಕೆ
ಬಡವನಾದ ಮಾತ್ರಕೆ
ಓದಬಾರದೇತಕೆ?

..........ಮಧುಗಿರಿ ಬದರಿ

- K.Badarinatha

13 May 2015, 01:30 am