Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕ್ರಿಕೆಟ್ ಆಘಾತ

ಅಂಜಿದಿರಿ ಅಳುಕಿದಿರಿ ಧೋನಿ ಪಡೆ

ನಾವೇ ಗೆಲುವಿನ ರೂವಾರಿಗಳು ಎಂಬ ನಿಮ್ಮ ಈ ಜಂಭದ ನಡೆಯಿಂದ

ಗೆಲುವಿನ ಹ್ರುದಯಾಘಾತವಾಗಿದ್ದರೆ ಸಂತಸದ ಅಮರ ಲೋಕ ಸೇರುತಿದ್ದೆವು

ಸೋಲಿನ ಮರ್ಮಾಘಾತ ದಖ:ದ ಮಡುವಿನಲ್ಲಿ ಮುಳುಗಿಸಿದೆ

ಕಾಪಾಡು ಮಧುಗಿರಿಯ ಮಲ್ಲೇಶ್ವರಾ.

....ಮಧಿಗಿರಿ ಬದರಿ

- K.Badarinatha

31 Mar 2015, 09:22 am

ಪ್ರೇಮ ನಿವೇದನೆ ಸಾಧನ

ಹಿಂದೊಮ್ಮೆ ಹುಡುಗರ ಪ್ರೇಮ ನಿವೇದನೆಗೆ ಪ್ರೇಮಕವಿತೆಗಳೇ ಬ್ರ್ಯಾಂಡ್ ಅಂಬ್ಯಾಸಿಡರ್ಸ್

ಹಿಂದೊಮ್ಮೆ ಹುಡುಗರ ಪ್ರೇಮ ನಿವೇದನೆಗೆ ಪ್ರೇಮಕವಿತೆಗಳೇ ಬ್ರ್ಯಾಂಡ್ ಅಂಬ್ಯಾಸಿಡರ್ಸ್

ಅದರೆ ಇಂದೀಗ
ಸ್ಕೋಡ , ಆಡಿ , ರೇಂಜ್ ರೋವರ್ಸ್, ಲ್ಯಾಂಡ್ ಕ್ರೂಸ್ನರ್ಸ್...


.....ಮಧುಗಿರಿಯ ಬದರಿ

- K.Badarinatha

31 Mar 2015, 09:17 am

ಮೊಬೈಲ್ ಅಲರ್ಟ್


ಹನಿಗವನಗಳನ್ನು ಹೆಚ್ಚಾಗಿ ಸ್ಟೋರ್ ಮಾಡಬೇಡಿ

ಹನಿಗವನಗಳನ್ನು ಹೆಚ್ಚಾಗಿ ಸ್ಟೋರ್ ಮಾಡಬೇಡಿ

ಮಾಡಿದರೆ ಒದ್ದೆಯಾಗಿ ಕೆಟ್ಟು ಹೋಗಿ
ಕಂಬನಿಗವನ ಕಳಿಸುವಂತಾದೀತು
ಹರಹರಾ ಮಧುಗಿರಿಯ ಮಲ್ಲೇಶ್ವರಾ.

.......ಮಧುಗಿರಿಯ ಬದರಿ

- K.Badarinatha

31 Mar 2015, 09:10 am

ಭರತ ಮಾತೆ



ಕಣ್ತುಂಬಿಕೊಳ್ಳಲು ಆಗದಷ್ಟು ಸೊಬಗು,
ನಿನ್ನ ಅಂದವನ್ನು ಕಂಡು ಆದೆವು ಬೆರಗು,
ಸುಳ್ಳನ್ನೆ ಸುಡುವ ಶಕ್ತಿ ನಿನ್ನಲ್ಲಿದೆ,
ಎಲ್ಲರನ್ನು ಒಂದಾಗಿ ಕಾಣುವ ಗುಣ ನಿನಗಿದೆ,
ನಿನಗಾಗಿ ಸೃಷ್ಟಿಸಬಹುದು ಕ್ಷಣಕೊಂದು ಹೊಸ ಕಾವ್ಯ,
ಭರತ ಮಾತೆ, ನಿನ್ನ ಮಡಿಲಲ್ಲಿ ಜನಿಸಿದ ನಾನೆ ಧನ್ಯ....

- ವಸಂತ್ ಕುಮಾರ್

26 Mar 2015, 11:28 am

ನಾ ಮತ್ತೆ ಕವಿಯಾದೆ

ಹೊಂಗಿರಣ ಮೂಡಿರಲು ಆಗಸದಲ್ಲಿ,
ಅರಳಿತು ಇಂಪಾದ ರಾಗ ಮನದಲ್ಲಿ.
...ಸವಿಯಲು, ನಾ ಮತ್ತೆ ಕವಿಯಾದೆ.

ಮನವು ಹೇಳಿತು,
"ಜೇನಿನ ದನಿಯನ್ನೊಮ್ಮೆ ಕೇಳು, ಯಾವ ನಾದವಿದೆ ಅದರಲ್ಲಿ ನೀ ಹೇಳು".
.....ಕೇಳಲು, ನಾ ಮತ್ತೆ ಕವಿಯಾದೆ.

ಮೌನದ ಮುಖದಲ್ಲು ಮಾತೊಂದು ಕೇಳಿಸಿತು,
ನಾ ಮತ್ತೆ ನಗಬೇಕೆಂದು ಅದು ಹೇಳಿತು.
......ನಗಿಸಲು, ನಾ ಮತ್ತೆ ಕವಿಯಾದೆ.

ಬಂಧಿಸಿದ್ದ ನೂರಾರು ಮತುಗಳು ಮುಕ್ತವಾಗಿ ಹೊರ ಬರಲು,
ಮತ್ತೆ ಜಗವನ್ನು ನನ್ನಿಂದ ಕಾಣಲು.
......ಪರಿವರ್ತನೆಯಾಗಲು, ನಾ ಮತ್ತೆ ಕವಿಯಾದೆ....!!!!!



- ವಸಂತ್ ಕುಮಾರ್

25 Mar 2015, 03:15 pm

ಕಾಲಚಕ್ರ

ಉರುಳುತ್ತಿದೆ ಕಾಲಚಕ್ರ ನೀ ಬರುವೆ ಎಂಬ ನಿರಿಕ್ಷೇಯಲ್ಲಿ ,ಕನಸ್ಸನ್ನು ಹೋದ್ದು ಮೌನ ಮನದೊಳಗೆ ಅಡಿ ಇಡುತ್ತಿದೆ, ಕನಸು ನನಸಾಗುವುದೋ ನನಸಾಗದೆ ಭಗ್ನವಾಗುವುದೋ,ಕಾಣದಿದ್ದರು ನಾ ಮೌನಿಯಾಗಿ ಕರುಗುತ್ತಿದ್ದೇನೆ ಕಡಲ ತೀರದ ಮುತ್ತಿನ ಹನಿಯಂತೆ ,ಕ್ಷಣ ಹೋತ್ತಾದರು ಹೊಳೆಯುವ ಹಂಬಲದಲಿ....

- ಸುನಾಗ್

21 Mar 2015, 05:52 pm

ಹುಡುಕಾಟ

ಕೈಯಲ್ಲಿ ಬೆಳಕ ಹಿಡಿದ
ದಾರ್ಶನಿಕ ಕವಿಯಲ್ಲಿ

ಅರೆssss!!!!!!

ಸೂರ್ಯನ ಉರಿ ಬಿಸಿಲಲ್ಲಿ
ಟಾರ್ಚ್ ಉರಿಸಿಕೊಂಡು!!!
ಹುಡುಕುತಿರುವುದು ಏನನ್ನು?

ಮಾನವರನ್ನು

ಅರ್ಥವಾಗಲಿಲ್ಲ,

ಕೋಮುವಾದಿ,
ಕಾಮವಾದಿಗಳೆಡೆಯಲ್ಲಿ
ಸಜ್ಜನ ಮಾನವರ
ಕಾಣದೆ ಆಗಿದೆ

- ishak

18 Mar 2015, 06:12 am

ದುಡ್ಡಿನಲಿ

ಅಂದು
ಕುಡಿದೆ
ಕೇಳಿದರೆ,
ಅದು ನನ್ನ ಸ್ವಂತ ದುಡ್ಡಿನಲಿ

ಇಂದು
ಕುಡಿದೆ
ಔಷಧಿಯ
ಅವರಿವರ ದುಡ್ಡಿನಲಿ

- ishak

18 Mar 2015, 03:09 am

ವಿಶ್ವಾಸ

ಯಾರಿಗೆ ಯಾರಲ್ಲಿ ವಿಶ್ವಾಸ
ತಂದೆಗೆ ಮಗನಲ್ಲಿ
ಪತಿಗೆ ಪತ್ನಿಯಲ್ಲಿ
ಶಿಷ್ಯನಿಗೆ ಗುರುವಲ್ಲಿ
ಇದರ ವಿರುದ್ದವೂ.........
ಕೊನೆಗೆ ನಮಗೆ ನಮ್ಮಲ್ಲಿ
ಎನ್ನುವಲ್ಲಿಗೆ.....!!!!
ಬಂದು ಬಿಟ್ಟಿದೆ

- ishak

17 Mar 2015, 06:47 am

ಮರ

ಬಳಲಿ ಬಂದವರ
ಆಸರೆಯಾಗುವುದು

ನೋವ ಕೊಟ್ಟರೂ
ಫಲವ ಕೊಡುವುದು

ಹಸಿದು ಬಂದವರ
ಹೊಟ್ಟೆ ತುಂಬುವುದು

ಸತ್ತು ಬಿದ್ದರೂ
ಉಪಕಾರಕ್ಕೆ ಬರುವುದು

ಮಾನವರಾಗಿ ನಿನ್ನ
ಉರುಳಿಸಿದ್ದಲ್ಲದೆ ಗಿಡ ಒಂದ
ನೆಟ್ಟು ಬೆಳೆಸಲಾಗಲಿಲ್ಲ

ಎಂ.ಐ.ಕೆ

- ishak

16 Mar 2015, 05:57 am