Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮುಸ್ಸಂಜೆಯ ತಿಳಿ ತಂಪಿನಲ್ಲಿ ಮೂಡಿದ ಸ್ನೇಹ ಸಾಗುತ್ತಲೇ ಇತ್ತು ಹಗಲಿರುಳುಗಳ ನಡುವೇ
ಭಾವದ ಬೆಳಕ ಚೆಲ್ಲಿ ನಗೆಯಾಡಲು
ಮಾತುಗಳಿಲ್ಲ ಮನದ ಮಡಿಲಲ್ಲಿ
ಒಮ್ಮೆ ಬಂದಪ್ಪಳಿಸಿತು ಸಿಡಿಲು
ಹಗಲಿರುಳು
- ರವಿಕುಮಾರ
06 Jan 2015, 11:00 am
ಮರೆಯಲಾರೆ ನಿನ್ನ ನಾನು
ಬರೆಯಲಾರೆ ಕವಿತೆಯಾ
ಮರೆಯಲ್ಹೇಗೆ ಅಂದು ನೀನು
ಸನಿಹ ಬಂದ ಸಮಯವಾ "ಮ"
ನಾವು ಕಾದ ಸಮಯವೆಲ್ಲ
ಆಯಿತಿಂದು ಸಾರ್ಥಕ
ವಿರಹದಿಂದ ಬೆಂದೆವಲ್ಲ
ಪ್ರೀತಿಗದುವೆ ಪ್ರೇರಕ. "ಮ"
ನಮ್ಮ ಬಾಳ ಬಹಳ ಪಾಲು
ಇರಲಿ ನಮ್ಮ ಪ್ರೀತಿಗೆ
ಕೂಡಿದಂತೆ ಹಾಲು ಜೇನು
ಎನಲಿ ನಮ್ಮ ರೀತಿಗೆ "ಮ"
ಕಷ್ಟ ನಷ್ಟ ಯಾವುದಿರಲಿ
ಜೊತೆಯಲೆಂದು ಬಾಳುವಾ
ಪ್ರೀತಿ,ಸ್ನೇಹ, ಸಹನೆ ಕೊಡಲಿ
ದೇವರನ್ನು ಬೇಡುವಾ "ಮ"
ಪಿ.ಕೆ.ಸುರೇಶ
#೧೬೫/೧, ಕೃಷ್ಣ
ವಿಜಯನಗರ
ಕೋ.ಚಿ.ಗ.ಪ್ರದೇಶ. ಕೋಲಾರ'ಜಿಲ್ಲೆ
- suresh p k
05 Jan 2015, 04:27 pm
ನಕ್ಕು ಬಿಡು
ನಯವಂಚಕರ ನಡುವೆ.
ನಡೆಯದು ನಿನ್ನ ನಿಯತ್ತು
ನಕ್ಕು ಬಿಡು
ನೆಮ್ಮದಿ ಇರದ ಜಾಗದಲ್ಲಿ.
ದೇಹ ರಚಿ ಕಾಣದು
ನಕ್ಕು ಬಿಡು
ನಾನು ನನ್ನದು ಎನ್ನುವರ ಮುಂದೆ.
ನಾವು ಅವರ ಅಂದಕಲ್ಲ
ನಕ್ಕು ಬಿಡು
ನೆರಳನ್ನ ಅಳಿಸುವವರ ಹಿಂದೆ.
ನುಕುವರು ಮುಳ್ಳಿನ ಮೇಲೆ
ನಕ್ಕು ಬಿಡು
ನಾಲಿಗೆಗೆ ಮೋಸ ಮಾಡುವರ ಮಾತಲ್ಲಿ.
ನಿನ್ನ ಚರ್ಮ ಚಪ್ಪಲಿ ಯಾದಿತು
ನಕ್ಕು ಬಿಡು
ನಿದ್ರೆಸುವಂತೆ ಗೊರಕೆ ಹೊಡೆಯುವರ ಉಸಿರಿಗೆ.
ನಿದ್ರೆ ಇಲ್ಲದಂತೆ ಮಾಡಿಯಾರು
ನಕ್ಕು ಬಿಡು
ನನ್ನಿಂದ ಬೆಳದಿದ್ದು ನೀನು ಎಂದಾಗ.
ಬೆಳೆಗೆ ಬೆಂಕಿ ಇಟ್ಟಾರು
ನಕ್ಕು ಬಿಡು
ಬೇಕೆಂದಾಗ ಹೊಗಳಿ ಬೇಡವಾದಾಗ.
ಕಥೆ ಕಟ್ಟಿ ಹರಿಕಥೆ ಮಾಡವರು.
ನಕ್ಕು ಬಿಡು
ದಾರಿ ತಪ್ಪಸಿ ದೊರೆಯಾದವರೆದರು.
ಕೊನೆಯ ದಾರಿಯೊ ಮುಚ್ಚಿಯಾರು.
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
04 Jan 2015, 08:42 am
ಯಾವಾಗ ಬರೆಯುತ್ತಾನೆ
ಈ ಅಪ್ಪ ವಿಲ್ಲು
ಎಂದು ಕಾಯುತ್ತಿರುವ ಮಗನೇ
ಅಪ್ಪನ ಪಾಲಿಗೆ ಡೆವಿಲ್ಲು
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 04:35 pm
ಹಿಂದೆ ತುಂಡುಡುಗೆಯಲ್ಲಿ ದೇಶ ಸುತ್ತಿದರು
ದೇಶಭಕ್ತ ಮೋಹನದಾಸರು
ಇಂದು ತುಂಡುಡುಗೆ ಬೆಡಗಿಯರ ಹಿಂದೆ
ಸುತ್ತುತ್ತಿದ್ದಾರೆ ಮೋಹದ ದಾಸರು
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 04:31 pm
ಪ್ರತಿಯೊಂದು ಕ್ರಿಕೆಟ್ ತಂಡದಲ್ಲೂ
ಇರುವಂತೆ ಒಬ್ಬಿಬ್ಬರು ಸ್ಪಿನ್ನರು
ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ
ಇರುತ್ತಾರೆ ನೂರಾರು ಭಿನ್ನರು
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 01:51 am
ಸರ್ಕಾರಿ ಕೆಲಸಕ್ಕಾಗಿ ಶ್ರೀಮಂತರು
ತೋರಿಸುತ್ತಾರೆ ಹಣದ ಆಮಿಷ
ಆದರೆ ಮುಂದೊಂದು ದಿನ
ಬಡವರನ್ನು ಸುಡುತ್ತದೆ ಆ ವಿಷ
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 01:46 am
ಮಾಡಿದ ಅಡುಗೆಯಲ್ಲಿ ಪ್ರತಿದಿನ ಆತನಿಗೆ
ಸಿಂಹಪಾಲನ್ನು ಎತ್ತಿಡಬೇಕು
ಪರಿಣಾಮ ಈಗ ಅವನನ್ನು ಕುಳಿತಲ್ಲಿಂದ
ನಾಲ್ವರು ಸೇರಿ ಎತ್ತಿಡಬೇಕು...
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 02:01 pm
ಆತ ಸಭೆಯಲ್ಲಿ ಭಾಷಣ ಬಿಗಿಯುತ್ತಿದ್ದ
'ಹೋರಾಡಬೇಕು ನಾವು ನಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ'
ಮನೆಗೆ ಬಂದೊಡನೆ ಮಾಡಿಸಿದ
ಒಂದು ಬಂಗಾರದ ಪಂಜರ ಹಾಡುವ ಹಕ್ಕಿಗಾಗಿ
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 01:36 pm
ಹುಡುಗ ಕೇಳಿದ 'ಪ್ರಿಯೆ, ನನ್ನ ಪ್ರೀತಿಗೆ
ಸಾಟಿ ಯಾವುದು ಹೇಳು, ಮುಗಿಲೆ? ಕಡಲೆ?'
ಹುಡುಗಿ ಹೇಳಿದಳು 'ನಿಲ್ಲಿಸು ನಿನ್ನ ಬಡಾಯಿ,
ಕೊಡಿಸಲಿಲ್ಲ ನೀನು ತಿನ್ನಲು ಎಂಟಾಣೆ ಕಡಲೆ'
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 01:18 pm