Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
* ಒಳಗೆ *
ನವರಸಗಳ ನೋಟ ಬಣ್ಣದೊಳಗೆ
ಬಣ್ಣಗಳ ನೋಟ ಕಣ್ಣಿನೊಳಗೆ
ಕಣ್ಣು ಬಣ್ಣಗಳೆರಡು ಬುದ್ಧಿಯೊಳಗೆ
ಬುದ್ಧಿ ಮನಸ್ಸು ನಮ್ಮೊಳಗೆ
ಸೂರ್ಯನ ಬೆಳಕು ಭೂಮಿಯೊಳಗೆ
ಭೂಮಿಯ ಆಕಾರ ಬೆಳಕಿನೊಳಗೆ
ಬೆಳಕು ಭೂಮಿಗಳೆರಡು ಸೂರ್ಯನೊಳಗೆ
ಸೂರ್ಯ ಕಿರಣಗಳು ಭೂಮಿಯೊಳಗೆ
ಬರವಣಿಗೆಯ ಅಕ್ಷರ ಲೇಖನಿಯೊಳಗೆ
ಲೇಖನಿಯ ಮಸಿ ಮನಸ್ಸಿನೊಳಗೆ
ಅಕ್ಷರ ಲೇಖನಿಗಳೆರಡು ವಿಷಯದೊಳಗೆ
ವಿಷಯ ಅಕ್ಷರಗಳು ಭಾವದೊಳಗೆ
ಬದುಕಿನ ಅಂದ ಇರುವಿಕೆಯೊಳಗೆ
ಇರುವಿಕೆಯ ನಡೆ ಸ್ಪಷ್ಟತೆಯೊಳಗೆ
ಅಂದ ನಡೆಗಳೆರಡು ಧ್ಯಾನದೊಳಗೆ
ಇರುವಿಕೆ ಸ್ಪಷ್ಟತೆ ಕಾಲದೊಳಗೆ
ವಾಯುವಿನ ಜೀವ ಜೀವಿಯೊಳಗೆ
ಜೀವಿಗಳ ಜೀವ ಪ್ರಕೃತಿಯೊಳಗೆ
ಪ್ರಕೃತಿ ಜೀವಿಗಳೆರಡು ಮಂಡಲದೊಳಗೆ
ವಾಯು ಜೀವಗಳು ನಮ್ಮೊಳಗೆ
- ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
21 Dec 2014, 05:50 am
ನಗುವಾಗಿ ಸೊಗಸಾಗಿ
ಕಂಪಾಗಿ ಇಂಪಾಗಿ
ಒಲವಾಗಿ ಚಲುವಾಗಿ
ಬದುಕಲ್ಲಿ ತಂಪಾಗಿ
ಬೆಳಕಾಗಿ ಒಳಿತಾಗಿ
ನಿನಗಾಗಿ ನೀನಾಗಿ
ನಿನ್ನಿಂದ ನಾನಾಗಿ
ಮಗುವಂತೆ ಖುಷಿಯಾಗಿ
ಮನದಂತೆ ಹಾಡಾಗಿ
ಖಷಿಯೆಲ್ಲ ಹೆಚ್ಚಾಗಿ
ಮನಸಲ್ಲಿ ಮನಸಾಗಿ
ಬದುಕೆಲ್ಲ ಹಸಿರಾಗಿ
ಉಸಿರಲ್ಲಿ ಉಸಿರಾಗಿ
ಜೀವಕ್ಕೆ ತಂಪಾಗಿ
ನಿನ್ನ ಪ್ರೀತಿಯ ತೋಳಲ್ಲಿ ನಾ ಬಂದಿಯಾಗಿ
ನೀನೇನೆ ನನ್ನವಳು
ನನಗಾಗಿ ಬಂದವಳು.
- ಶ್ರೀವತ್ಸ ಕೆ.ಎಸ್
17 Dec 2014, 04:32 am
ನಾನು ದಿನವೆಲ್ಲಾ ಕುಳಿತು
ಕೂಡಿದೆ, ಕಳೆದೆ, ಗಣಿಸಿದೆ, ಬಾಗಿಸಿದೆ
ನಿನ್ನ ಲೆಕ್ಕಾಚಾರದ ಮುಂದೆ
ನನ್ನ ಲೆಕ್ಕಚಾರ ಏನೇನು ಅಲ್ಲ ....
ಅವನ ಲೆಕ್ಕಚಾರದ ಮುಂದೆ
ನಮ್ಮ ಲೆಕ್ಕಾಚಾರ ಏನೇನು ನಡೆಯುವುದಿಲ್ಲ...
- ಚೇತನ್ ಬಿ ಸಿ
17 Dec 2014, 01:29 am
ಬಾಯಾರಿದೆ,ನೀ ಮೋಡ ಬಿಟ್ಟು ಹೊರಗೆ ಬಾ...
ಮೈ ತೊಯುವಂತೆ ಸುರಿಯದಿದ್ದರೂ...
ತುಟಿ ಮೇಲೆ ಉದುರು ಬಾ..
ಗಂಟಲೊನಗಿ ಉಸಿರು ನಿಲ್ಲದಂತೆ..ತಂಪಾಗಿಸು ಬಾ..
ಕರಿ ಮೋಡದಿಂದ ಇಣುಕು ಹೊರಗೆ...
ಮಳೆಹನಿಯೇ....ಧರೆಗಿಳಿದು ಬಾ.
- ನಿಮ್ಮಿ
14 Dec 2014, 05:00 pm
ಕಣ್ಣಲಿನ ಕನಸುಗಳು
ಕಣ್ಮುಚ್ಚಿ ಮಲಗಿವೆ.
ಅದು ಸ್ವಪ್ನಗಳ ಸಿಹಿನಿದ್ರೆಯೋ....ಇಲ್ಲಾ ಸಾವೋ...
ತಿಳಿಯುತ್ತಿಲ್ಲಾ.....
ಎಚ್ಚರ ಆಗುವ ವರೆಗು ಕಾಯಬೇಕೋ....
ಇಲ್ಲಾ ಮಣ್ಣು ಮಾಡಬೆಕೋ....ತೊಚುತ್ತಿಲ್ಲಾ....
- ನಿಮ್ಮಿ
14 Dec 2014, 04:53 pm
ಪುಣ್ಯಕೋಟಿಯ ನಾಡಿನ ಗತಿ...
ಏನಾಗಿದೆ ನೋಡು,
ಕೋಟಿ ಪುಣ್ಯ ಮಾಡಿದರೂ...
ಮುಚ್ಚಿಡಲಾರೆವು ಪಾಪಿಗಳ ಹಿಂಡು.
- ನಿಮ್ಮಿ
14 Dec 2014, 04:46 pm
ದೇವನೊಬ್ಬ
ನಾಮ ಹಲವು.
ಅದಕ್ಕೆ
ರಣರಂಗ ಆಗಿದೆಯಿಂದು
ಈ ಜಗವು.
- ನಿಮ್ಮಿ
14 Dec 2014, 04:42 pm
ಗಣಿತ ವೆಂದರೆ ದೇವತೆ
ಅವಳ ಪಡೆಯಲು ಬೇಕು
ಸಹನೆ , ನಮ್ರತೆ , ಏಕಾಗ್ರತೆ ...
ಕೆಲವರಿಗೆ ಮಾತ್ರ ಅವಳು
ತನ್ನ ಸೌಂದರ್ಯವ ತೋರುವಳು...
ಕೆಲವರಿಗೆ ಅವಳು ಅರ್ಥವಾಗದೆ
ಹಾಗೇ ಉಳಿಯುವಳು...
ಜಗದ ನಿಯಮಗಳೆಲ್ಲ
ಅವಳ ಲೆಕ್ಕಾಚಾರ...
ಅವಳಿಂದಲೇ ಆಗಿರುವುದು
ಮಾನವನ ಉದ್ಧಾರ...
ಅವಳ ಪ್ರೀತಿಸಿದವರಿಗೆ
ಆಗುವಳು ಉರಿದ ಕಡಲೆ...
ಅವಳ ದ್ವೇಶಿಸಿದವರಿಗೆ
ಆಗುವಳು ಕಬ್ಬಿಣದ ಕಡಲೆ...
ಗಣಿತವೆಂದರೆ ದೇವತೆ
ಅವಳೇ ದೇವತೆಗಳಿಗೆ ಅಧಿದೇವತೆ
ಅವಳೇ ವಿಶ್ವದ ಆದಿದೇವತೆ...
- ಚೇತನ್ ಬಿ ಸಿ
10 Dec 2014, 02:55 am
ಹಾಳೆಯೆಂದು ಎಸೆದರೂ,
ಹಣವನಾರೂ ಎಸೆಯರು
ಬಡವನಿಗನ್ನ ಕೊಡದೇ,
ನಾಯಿಗನ್ನವ ಕೊಡುವರು.
ಸುಳ್ಳು ಎಷ್ತೇ ಹೇಳಿದರೂ,
ಸತ್ಯವನಾರೂ ನಂಬರು.
ಸುಳ್ಳಿನಾ ಹಂದರವನೇರಿ
ಸತ್ಯವನ್ನೇ ಕೊಲ್ಲುವರು.
ಮರವು ಎಂದು ಕಡಿದರೂ,
ಕಟ್ಟಿಗೆಯನಾರು ಎಸೆಯರು
ಮುಳ್ಳಿನ ಹಂದರವೆನಿಸಿ ಬಿಟ್ಟರೂ
ಹೂವಿನಾಸರೆ ನಿಲ್ಲದು.
ತಮಗೆ ಕಷ್ಟ ಬಂದರೂ,
ಪರರ ಸುಖವ ಬಯಸರು.
ಹೊಟ್ಟೆಕಿಚ್ಚಿನ ಮಂದಿ,
ಪರರ ಕೆಡಕನ್ನೇ ನೋಡುವರು.
ನ್ಯಾಯ-ನ್ಯಾಯವೆಂದರೂ,
ಅನ್ಯಾಯವೆಂದೂ ನಿಲ್ಲದು.
ಪ್ರಾಣಿಹಿಂಸೆಯೆಂದರೂ,
ಕಾಡೆಯುವದನಾರೂ ತಡೆಯರು
ಲೋಕದ ಡೊಂಕು ಎಂದರೂ,
ಲೋಕವನಾರೂ ನೋಡರು.
ಅತ್ರುಪ್ತಿಯ ಮನಸಲಿ ನೊಂದು
ವಿಕ್ರುತ ಮನಸಲ್ಲೇ ಮಡೆವರು
-ಸ . ವಿ .ಚಿ-
- ಸಮೀರ
09 Dec 2014, 12:47 pm
ಎತ್ತನಣದೆತ್ತ ನೋಡಿದರಯ್ಯ,
ಅರೆಕ್ಶ್ಹಣವೂ ದೂರಿದರಯ್ಯ,
ಸಾವಿನ ಮನೆ ಹುಡುಕಿದರಯ್ಯ,
ನೇಣುಗಂವಬದಿ ಹಗ್ಗವೇ ಹರೆಯಿತಯ್ಯ,
ಕೊನೆಗೂ ಪಾಪಿ ಚಿರಾಯು.
ಮ್ರುತ್ಯುವಿಗೆಂದು ವಿಷವ ಕೊಂಡು,
ಹಾಲಿನಲಿ ಅದನ್ನ ಬೆರೆಸಿಕೊಂಡು,
ಕುಡಿಯುವ ಮುನ್ನ ದೇವರ ನೆನೆದು,
ಹಾಲಡೆ ನೋಡಿದರೆ ಬೆಕ್ಕು ಸತ್ತಿತ್ತಯ್ಯ,
ಕೊನೆಗೂ ಪಾಪಿ ಚಿರಾಯು.
ಬೆಟ್ಟದಿಂದ ಹಾರಿದೊಡೆ,
ಪ್ರಾಣಪಕ್ಷಿ ಹಾರೀತೆಂದು
ತುದಿಯಿಂದ ನೆಗೆದೊಡೆ,
ಹತ್ತು ಕುರಿಗಳು ಸತ್ತವಯ್ಯ,
ಕೊನೆಗೂ ಪಾಪಿ ಚಿರಾಯು.
ಪಾಪದ ಕೂಪವಿದ್ದರೂ,
ಸಾವಿನ ತವಕವಿದ್ದರೂ,
ನಾವೊಂದು ಬಗೆದರೆ,
ಧೈವವವೊಂದು ಬಗೆಯುವುದು.
ಕೊನೆಗೂ ಪಾಪಿ ಚಿರಾಯು.
ಕಳೆಸುವುದು ಅವನ ಕೆಲಸ,
ಕರೆಸುವುದೂ ಅವನ ಕೆಲಸ
ಅವನ ಅಂತರಂಗದೊಳು ನಮ್ಮದು..
ಬಂದುಹೋಗುವ ಕೆಲಸ....
ಕೊನೆಗೂ ಪಾಪಿ ಚಿರಾಯು.
ಸ . ವಿ . ಚಿ
- ಸಮೀರ
08 Dec 2014, 07:11 pm