ಅವಸ್ಥೆ

ಅದೆಷ್ಟು ಉಸಿರು ಬಿಗಿ ಹಿಡಿದು
ಮಾತು ತಡೆಹಿಡಿದು ಬದುಕಲಿ
ವ್ಯವಸ್ಥೆಯ ಎದರು ನನ್ನ ಹಠ
ಉಣ್ಣುವನಿಗೆ ಅನ್ನವಿಲ್ಲ
ಉಣ್ಣದ ದೇವರಿಗೆ ಹಾಲನ್ನ ನೈವೇದ್ಯ
ದುಡಿಮೆಗೆ ಫಲವಿಲ್ಲ
ತಲೆ ಒಡೆದು ತಿರುಗುವನಿಗೆ ಎಲ್ಲ
ರಾಮ ಕೃಷ್ಣ ಅಲ್ಲಾ ಯೇಸು
ಬಡವರ ಪಾಲಿಗೆ ದೇವರೆ ಅಲ್ಲ
ಹಾಡಿಗೂ ಪಾಡಿಗೂ ಸಂಬಂಧವೆ ಇಲ್ಲ
ಕಾಸಿಗೆ ಹಾಸಿಗೆ ವ್ಯಾಪಾರ
ಸುಮ್ಮನೆ ಕುಂತನೆ ಯುವ ನೇತಾರ
ದುಳ್ಳರು ದುಷ್ಟರ ಹುನ್ನಾರಾ
ಸೀಡಿದೆಳುವುದೆಂದು ನೆತ್ತಾರ
ಭಿತ್ತಲಿ ಭತ್ತಲಿ ಕ್ರಾಂತಿಯ ದೀವಿಗೆ
ಸರಿ ಹೊತ್ತಲಿ ಮೊಳಗಲಿ ಏಳಿಗೆ ಬೆಸುಗೆ
ಕಿಡಿ ಹಬ್ಬುವದೆಂದು ಹೊಸ ಸತ್ಕಾರ

- ಕೌರವ

05 Dec 2017, 02:40 pm
Download App from Playstore: