ಅರುಣಾ ರಾಗ..ಹಾಡುವ..
ಏನೀ .. ಮನಸ .. ಭಾಷೆ...
ಏನೀ ..ಹೃದಯದ..ಆಸೆ..
ಮನದಿಂಗಿತ ಹೇಳೊ ಬಯಕೆ
ಹೇಗೆ ಏಳಲಿ ಹೆದರಿಕೆ....
ಮನದಲ್ಲಿ, ಏನೋ ಹುಚ್ಚು ತುಡಿತ|
ಹೆಚ್ಚಾಗಿದೆ ನನ್ನ ಹೃದಯದ ಬಡಿತ|
ನನ್ನ ನೋಡಿ ನಗುತ್ತಿದೆ ದಿಗಂತ|
ಮತ್ತೇ ಬರಬಾರದೇ ವಸಂತ..
ನನ್ನ ಇನಿಯನ ಕೂಗಿ ಕರೆಯುತಾ..|
ತಂಗಾಳಿಯಲಿ...ಕುಳಿತು.. ಹಾಗೆ..
ಪಿಸು ಮಾತಲಿ ಹೇಳಲೇ ಒಮ್ಮೆ..
ಚಿಲಿಪಿಲಿ ಗುಟ್ಟುವ..ಹಕ್ಕಿಯ ...ಹಾಗೆ..
ನಿನ್ನ ಹೆಸರನ್ನ ಕೂಗಲೇ ಒಮ್ಮೆ..
ಸಮುದ್ರವ ಸೇರುವ ನದಿಯ ಹಾಗೆ..
ನಿನ್ನ ಬಂದು ಸೇರುವೇ.. ಒಮ್ಮೆ..
ಇನಿಯಾ...ಮನ ಬಯಸಿದೆ....ಈಗೇ..
ಇಬ್ಬರು ಸೇರಿ,ಹಾಡಲು.....
ಅರುಣಾ ರಾಗವ ಒಮ್ಮೆ....
ಅದುವೇ,ಒಲವಿನ........ಮಹಿಮೆ
ನನ್ನ ಪ್ರೀತಿಗೆ.... ಹಿರಿಮೆ...
- Bhagya Girish
05 Dec 2017, 09:36 pm
Download App from Playstore: