ಕಿಡಿ
ನನ್ನೊಳಗಿನ ಕಿಡಿ ಹಾರಿ
ಊರ ಸುಡದಿರಲಿ
ಅವಿತಿಡುವೆ ಕಿಡಿಯನ್ನ
ಅದು ದ್ವೇಷದ್ದು ಅಸೂಯೆದ್ದು
ಕಾಡ ಸುಡುವ ಬೆಂಕಿಯದು
ಲೋಭದ್ದು ಮೋಹದ್ದು
ಮನ ಮನದಿಂದ ಊರು ಊರಿಂದ
ಹಬ್ಬಿ ಉರಿಸುವ ಕಿಡಿಯದು
ಅವಿಚಿಡುವೆ ಎದೆಯಲ್ಲಿ
ಆಚೆ ಹೊಗದಂತೆ
ನೀರ ಸುರುವಿಯರೊ ಅದಕ್ಕೆ
ಎಣ್ಣೆ ಹೂಯಿವೆರೊ ದಗಿಸಲಿಕ್ಕೆ
ಹೊತ್ತಿದರೊಮ್ಮೆ ಉರು ಊರ ಸುಡುವುದು ಮತ್ಸ್ಯೆರ್ಯದ ಮದದಿಂದ
ನನ್ನೊಳಗಿನ ಕೌರವನ ಎದೆಯಿಂದ
- ಕೌರವ
05 Dec 2017, 09:55 pm
Download App from Playstore: