ಮೂಖ ಪ್ರೇಮಿ
ದಿನಾ ಬೆಳಗಾಯಿತೆಂದರೆ
ಅವಳ ಮನೆ ಮುಂದೆ ನಾನು
ಕಿಟಕಿಯಲ್ಲಿ ಅವಳು
ಕಣ್ಣ ಸನ್ನೆ , ಕೈ ಸನ್ನೆ
ಮೈ ಕೈ ತಾಕಿಸದೆನೆ
ಎದೆ ಗೂಡಲ್ಲಿ ಬಚ್ಚಿಡುವ ಹಠ
ಚಂದ್ರನ ಕಿವಿಯಲ್ಲಿ ಗುಟ್ಟು
ಹೇಳಿ ಕಳಿಸುವಳು
ನದಿ ಅಲೆಯ ರಮಿಸಿ
ನನ್ನ ಅತ್ತ ಕಳುಸುವಳು
ಪ್ರೀತಿ ನೀವೇದಿಸಲು
ಮಾತಿಲ್ಲ ಬರಿ ಕೈ ಸನ್ನೆ ಕಣ್ಣ ಸನ್ನೆ
ಮರಿಗುಬ್ಬಚ್ಚಿ ಅವಳು
ಹಾಲನೊರೆಯ ಕೆನೆಯವಳು
ಪತಂಗದೊಡನೆ ಪತ್ರಕಳಿಸಿ
ವಿಚಾರಿಸುವಳು ಮೂಖ ಪ್ರೇಮಿ ಅವಳು
ಹಠಕ್ಕೆ ಕೌರವನನ್ನೆ ಮೆಚ್ಚಿದಳು
- ಕೌರವ
06 Dec 2017, 04:32 am
Download App from Playstore: