ನೀವು - ನಾವು

ನಾನು ಮರಗಳನ್ನ ಅಪ್ಪಬೆಕಂತಿದ್ದೆ
ಕಡಿದು ಹಾಕಿದಿರಿ ನೀವು
ನಾನು ಕೆರೆಯಲಿ ಈಜ ಬೆಕೆಂದಿದ್ದೆ
ಮುಚ್ಚಿ ಹಾಕಿದಿರಿನೀವು
ನಾನು ತೋಟಕ್ಕೆ ಬೇಲಿ ಬಳ್ಳಿಯ
ಬೇಳಸ ಬೆಕೆಂದಿದ್ದೆ
ರೆಸಾರ್ಟ್ ಗಳು ನಿರ್ಮಿಸಿದ್ದಿರಿ ನೀವು
ದುಂಬಿಯೊಂದಿಗೆ ದೊಂಬಿ ಮಾಡಬೆಕೆಂದಿದ್ದೆ
ಪ್ಲಾಸ್ಟಿಕ್ ಹೂಗಳನ್ನು ಇಟ್ಟಿರಿ ನೀವು
ಮೊದಲ ಮಳೆಗೆ ಮಣ್ಣ ಮೂಸಬೆಕೆಂದಿದ್ದೆ
ಗಾಳಿಗೆ ರೋಗ ತಂದಿರಿ ನೀವು
ಮರಿ ಹಕ್ಕಿಗೆ ಗೂಡ ಕಟ್ಟಬೆಕೆಂದಿದ್ದೆ
ಹುಲ್ಲನ್ನ ಬೆಳಸದೆ ಹೊದಿರಿ ನಿವು
ನಾನು ಹಾಲ ಹಂಚ ಬೆಕೆಂದಿದ್ದೆ
ಹಸುವನ್ನೆ ಕೊಂದಿರಿ ನೀವು
ನಾನು ಅನ್ನ ಇಕ್ಕ ಬೆಕೆಂದಿದ್ದೆ
ರೈತನ ಬೆನ್ನ ಮುರಿದಿರಿ ನೀವು

- ಕೌರವ

06 Dec 2017, 10:40 pm
Download App from Playstore: